ಆದಿತ್ಯ ಸರ್ಪೋತ್‌ದರ್‌ ನಿರ್ದೇಶನದ ‘ಕಕುಡಾ’ ಹಾರರ್‌ – ಕಾಮಿಡಿ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಿತೇಷ್‌ ದೇಶ್‌ಮುಖ್‌, ಸೋನಾಕ್ಷಿ ಸಿನ್ಹಾ, ಸಕೀಬ್‌ ಸಲೀಂ, ಆಸಿಫ್‌ ಖಾನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಜುಲೈ 12ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ಸೋನಾಕ್ಷಿ ಸಿನ್ಹಾ, ರಿತೇಷ್‌ ದೇಶ್‌ಮುಖ್‌ ಅಭಿನಯದ ‘ಕಕುಡಾ’ ಹಾರರ್‌ – ಕಾಮಿಡಿ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ‘ಮುಂಜ್ಯಾ’ ಹಾರರ್‌ – ಕಾಮಿಡಿ ಯಶಸ್ವೀ ಸಿನಿಮಾದ ನಿರ್ದೇಶಕ ಆದಿತ್ಯ ಸರ್ಪೋತ್‌ದರ್‌ ನಿರ್ದೇಶನದ ಚಿತ್ರವಿದು. ಈ ಸಿನಿಮಾದ ನಾಯಕನಟಿ ಸೋನಾಕ್ಷಿ ಸಿನ್ಹಾ ಮೊನ್ನೆಯಷ್ಟೇ ವೈವಾಹಿಕ ಬದುಕಿಗೆ ಕಾಲಿರಿಸಿದ್ದು, ಹನಿಮೂನ್‌ ದಿನಗಳನ್ನು ಕಳೆಯುತ್ತಿದ್ದಾರೆ. ಈ ಮಧ್ಯೆ ‘ಕಕುಡಾ’ ಚಿತ್ರತಂಡ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದೆ. ಟ್ರೇಲರ್‌ನಲ್ಲಿ ಗಂಡ – ಹೆಂಡತಿಯರಾದ ನಂತರ ಸಕೀಬ್‌ ಮತ್ತು ಸೋನಾಕ್ಷಿ ರತೋಡಿ ಗ್ರಾಮಕ್ಕೆ ಬರುತ್ತಾರೆ. ಅಲ್ಲಿ ಅವರು ‘ಕಕುಡಾ’ ಪ್ರೇತಾತ್ಮದ ಕಾಟಕ್ಕೆ ಬಲಿಯಾಗಬೇಕಾಗುತ್ತದೆ. ಆಗ ಸೋನಾಕ್ಷಿ, ಪ್ರೇತಾತ್ಮವನ್ನು ಹೊಡೆದೋಡಿಸುವ ರಿತೇಷ್‌ ಸಹಾಯ ಪಡೆಯುತ್ತಾಳೆ. ರಿತೇಶ್‌ ಈ ಪ್ರೇತಾತ್ಮವನ್ನು ಓಡಿಸುವ ಹಾದಿಯಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ ಎನ್ನುವುದು ಚಿತ್ರದ ಕಥಾವಸ್ತು. ಸಿನಿಮಾದಲ್ಲಿ ಹಾರರ್‌ ಮತ್ತು ಕಾಮಿಡಿಗೆ ಸಾಕಷ್ಟು ಸ್ಕೋಪ್‌ ಇದೆ ಎನ್ನುವುದು ಟ್ರೇಲರ್‌ನಲ್ಲಿ ತಿಳಿದುಬರುತ್ತದೆ. ಇದೇ ಜುಲೈ 2ರಿಂದ ZEE5ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here