ರಿಷಭ್‌ ಶೆಟ್ಟಿ ನಿರ್ಮಾಣದ ‘ಲಾಫಿಂಗ್‌ ಬುದ್ಧ’ ಸಿನಿಮಾ ಈ ವಾರ (ಆಗಸ್ಟ್‌ 30) ತೆರೆಕಾಣುತ್ತಿದೆ. ಭರತ್‌ ರಾಜ್‌ ನಿರ್ದೇಶನದ ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ ಹೀರೋ. ಪೊಲೀಸರ ಬದುಕು – ಬವಣೆಯ ಕತೆಯಿದು. ತೇಜು ಬೆಳವಾಡಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.

ಭರತ್‌ ರಾಜ್‌ ನಿರ್ದೇಶನದ ‘ಲಾಫಿಂಗ್‌ ಬುದ್ಧ’ ಸಿನಿಮಾ ನಾಡಿದ್ದು (ಆಗಸ್ಟ್‌ 30) ತೆರೆಕಾಣುತ್ತಿದೆ. ಪೋಷಕ ಮತ್ತು ಖಳಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಮೋದ್‌ ಶೆಟ್ಟಿ ಅವರೇ ಚಿತ್ರದ ಹೀರೋ. ಅವರಿಲ್ಲಿ ಪೊಲೀಸ್‌ ‘ಗೋವರ್ಧನ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್‌ ಕುಟುಂಬವೊಂದರ ಬದುಕು – ಬವಣೆಯ ಸುತ್ತ ನಿರ್ದೇಶಕ ಭರತ್‌ ರಾಜ್‌ ಕತೆ ಮಾಡಿದ್ದಾರೆ. ಅನಿರುದ್ದ್ ಮಹೇಶ್, ಭರತ್ ರಾಜ್ ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ತೇಜು ಬೆಳವಾಡಿ ನಾಯಕಿ. ವಿಶೇಷ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಭದ್ರಾವತಿ, ಜೋಗ, ಸಾಗರ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ‌. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು ಹಾಗೂ ಟ್ರೇಲರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಷ್ಣು ವಿಜಯ್ ಸಂಗೀತ ನಿರ್ದೇಶನ, ಎಸ್ ಚಂದ್ರಶೇಖರನ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಧರಣಿ ಗಂಗೆಪುತ್ರ ಕಲಾ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here