ವಿನೋದ್‌ ಜೆ ರಾಜ್‌ ನಿರ್ದೇಶನದ ‘ತದ್ವಿರುದ್ಧ’ ಮರ್ಡರ್‌ ಮಿಸ್ಟರಿ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಸುಚೇಂದ್ರ ಪ್ರಸಾದ್‌, ಸುಮನ್‌ ರಂಗನಾಥ್‌ ಮತ್ತು ವಿಕ್ರಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Charmion Motion Pictures ನಿರ್ಮಾಣದ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.

ಈ ಹಿಂದೆ ‘ಯಶೋಗಾಥೆ’ ಸಿನಿಮಾ ನಿರ್ದೇಶಿಸಿದ್ದ ವಿನೋದ್‌ ಜೆ ರಾಜ್‌ ‘ತದ್ವಿರುದ್ಧ’ ಚಿತ್ರದೊಂದಿಗೆ ಮರಳಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೇ ತದ್ವಿರುದ್ಧ. ಇದೊಂದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆ‌. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವಿಕರಿಸಿಲ್ಲ. ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ’ ಎನ್ನುತ್ತಾರೆ. ಸಕಲೇಶಪುರದಲ್ಲೇ ಸಂಪೂರ್ಣ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಹಾಡುಗಳಿಲ್ಲ. ಚಿತ್ರದೊಂದಿಗೆ ನಟಿ ಸುಮನ್‌ ರಂಗನಾಥ್‌ ಹಲವು ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಸಸ್ಪೆನ್ಸ್‌ ಚಿತ್ರವಾದ್ದರಿಂದ ಕತೆಯ ಬಗ್ಗೆ ಸುಳಿವು ಬಿಟ್ಟುಕೊಡುವಂತಿಲ್ಲ ಎನ್ನುತ್ತಾರವರು.

ನಟ ಸುಚೇಂದ್ರ ಪ್ರಸಾದ್‌ ಅವರು ಮಾತನಾಡಿ, ‘ಹೊಸಚಿಗುರು ಹಳೇ ಬೇರು ಸಮ್ಮಿಶ್ರಣ ಈ ಚಿತ್ರ. ಸಿದ್ದ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರ. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನೂ ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ. ಹಾಗಾಗಿ ಇದು ವಿಭಿನ್ನ ಅಂತಲೂ ಹೇಳಬಹುದು. ಇಂಥದ್ದೊಂದು ವಿಭಿನ್ನ ಕಥೆಯ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ’ ಎನ್ನುತ್ತಾರೆ. ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. charmion motion pictures ನಿರ್ಮಾಣದ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here