ಎ ಪಿ ಅರ್ಜುನ್‌ ನಿರ್ದೇಶನದ ಬಹುನಿರೀಕ್ಷಿತ ‘ಮಾರ್ಟಿನ್‌’ ಸಿನಿಮಾದ ‘ಜೀವ ನೀನೇ’ ಸಾಂಗ್‌ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ಜೋಡಿಯ ಮೇಲೆ ಪಿಕ್ಚರೈಸ್‌ ಆಗಿರುವ ಹಾಡನ್ನು ನಿರ್ದೇಶಕ ಎ ಪಿ ಅರ್ಜುನ್‌ ಅವರೇ ರಚಿಸಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆಯ ಗೀತೆಗೆ ಸೋನು ನಿಗಮ್‌ ಮತ್ತು ಶೃತಿಕಾ ಸಮುದ್ರಲ ದನಿಯಾಗಿದ್ದಾರೆ.

ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಮಾರ್ಟಿನ್‌’ ಸಿನಿಮಾದ ‘ಜೀವ ನೀನೇ’ ಸಾಂಗ್‌ ಬಿಡುಗಡೆಯಾಗಿದೆ. ಧ್ರುವ ಮತ್ತು ವೈಭವಿ ಶಾಂಡಿಲ್ಯ ಜೋಡಿ ಮೇಲೆ ಪಿಕ್ಚರೈಸ್‌ ಆಗಿರುವ ಈ ಲವ್‌ ಟ್ರ್ಯಾಕ್‌ ಮಾಧುರ್ಯ ಮತ್ತು ಪಿಕ್ಚರೈಸೇಷನ್‌ನಿಂದ ಗಮನ ಸೆಳೆಯುತ್ತದೆ. ನಿರ್ದೇಶಕ ಎ ಪಿ ಅರ್ಜುನ್‌ ರಚಿಸಿರುವ ಹಾಡಿಗೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದಾರೆ. ಸೋನು ನಿಗಮ್‌ ಮತ್ತು ಶೃತಿಕಾ ಸಮುದ್ರಲ ಹಾಡಿದ್ದಾರೆ. ಇಮ್ರಾನ್‌ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದು ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ.

ಕಳೆದ ತಿಂಗಳು ಆಗಸ್ಟ್‌ 5ರಂದು ಮುಂಬೈನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿತ್ತು. ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಇದೇ ವರ್ಷ ಅಕ್ಟೋಬರ್‌ 11ಕ್ಕೆ ತೆರೆಕಾಣಲಿದೆ. ಅಧಿಕೃತವಾಗಿ ಧ್ರುವ ಸರ್ಜಾ ಅವರ ಮೊದಲ PAN ಇಂಡಿಯಾ ಚಿತ್ರವಿದು. ಬಹುಭಾಷಾ ನಟ ಅರ್ಜುನ್‌ ಸರ್ಜಾ ಚಿತ್ರಕ್ಕೆ ಕತೆ ರಚಿಸಿದ್ದಾರೆ ಎನ್ನುವುದು ಹೈಲೈಟ್‌. ‘ರಾಜ್‌ ವಿಷ್ಣು’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದ ವೈಭವಿ ಶಾಂಡಿಲ್ಯ ಅವರಿಗೆ ಈ ಸಿನಿಮಾ ಮಹತ್ವದ ಚಿತ್ರವಾಗಲಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ‘ಮಾರ್ಟಿನ್‌’ಗೆ ಮಣಿಶರ್ಮ ಗೀತ ಸಂಗೀತ ಮತ್ತು ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ.

LEAVE A REPLY

Connect with

Please enter your comment!
Please enter your name here