ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಹರೀಶ್‌ ಸೀನಪ್ಪ ‘ಕ್ರೆಡಿಟ್‌ ಕುಮಾರ’ ಚಿತ್ರದೊಂದಿಗೆ ಸಿನಿಮಾ ಹೀರೋ ಆಗಿದ್ದಾರೆ. ಈ ಹಿಂದೆ ‘ಬಾಂಡ್‌ ರವಿ’ ಸಿನಿಮಾ ನಿರ್ದೇಶಿಸಿದ್ದ ಪ್ರಜ್ವಲ್‌ ಅವರು ಹರೀಶ್‌ ಸೀನಪ್ಪ ಅವರಿಗೆಂದೇ ಬರೆದ ಕತೆಯಿದು. ಪಾಯಲ್‌ ಚಂಗಪ್ಪ ಚಿತ್ರದ ನಾಯಕನಟಿ.

ನಟ ಧ್ರುವ ಸರ್ಜಾ ಅವರು ಕಂಠೀರವ ಸ್ಟುಡಿಯೋದಲ್ಲಿ ‘ಕ್ರೆಡಿಟ್‌ ಕುಮಾರ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿರುವ ಹರೀಶ್‌ ಸೀನಪ್ಪ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಚಿತ್ರವಿದು. ಕಿರುಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿರುವ ಪಾಯಲ್‌ ಚಂಗಪ್ಪ ಈ ಚಿತ್ರದ ನಾಯಕಿಯಾಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಬಾಂಡ್‌ ರವಿ’ ಸಿನಿಮಾ ನಿರ್ದೇಶಿಸಿದ್ದ ಪ್ರಜ್ವಲ್‌ ಅವರಿಗೆ ಇದು ಸ್ವತಂತ್ರ ನಿರ್ದೇಶನದ ಎರಡನೇ ಸಿನಿಮಾ. ಹಿರಿಯ ಚಿತ್ರನಿರ್ದೇಶಕ ಎಸ್‌ ಮಹೇಂದರ್‌, ಚಿತ್ರ ನಿರ್ಮಾಪಕರಾದ ರಮೇಶ್‌ ರೆಡ್ಡಿ ಮತ್ತು ಉದಯ್ ಮೆಹ್ತಾ, ನಟ ಪ್ರಮೋದ್, ಸೆಲೆಬ್ರಿಟಿ ಜಿಮ್ ಟ್ರೇನರ್‌ ಪಾನಿಪುರಿ ಕಿಟ್ಟಿ, ಚಿತ್ರಸಾಹಿತಿ ಮಾಸ್ತಿ, ಛಾಯಾಗ್ರಾಹಕ ಅಣಜಿ ನಾಗರಾಜ್ ಸೇರಿದಂತೆ ಹಲವು ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭಹಾರೈಸಿದರು.

ಸಿನಿಮಾದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಜ್ವಲ್‌, ‘ಕ್ರೆಡಿಟ್ ಕುಮಾರ ಒನ್ ಲೈನ್ ಸ್ಟೋರಿ ಹೇಳುವುದಾದರೆ ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್ ಕಥೆಯಾಗಿದೆ. ಕ್ರೆಡಿಟ್ ಕುಮಾರನಾಗಿ ಹರೀಸ್ ಸೀನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ. ಕಿರು ಚಿತ್ರಗಳ ಮೂಲಕ ಖ್ಯಾತಿ ಗಳಿಸಿರುವ ಪಾಯಲ್ ಚಂಗಪ್ಪ ಈ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಚಿತ್ರ ನಿರ್ಮಿಸುತ್ತಿರುವ ವಾಗೀಶ್‌ ಮುತ್ತಿಗೆ, ‘ಎರಡು ತಿಂಗಳ ಹಿಂದಷ್ಟೇ ಬ್ಯಾನರ್ ರಿಜಿಸ್ಟರ್ ಮಾಡಿಸಿದ್ದೆ. ಉತ್ತಮ ಸಿನಿಮಗಾಗಿ ಕಾಯುತ್ತಿದ್ದೆ. ಕ್ರೆಡಿಟ್ ಕುಮಾರ ಸಿನಿಮಾ ಸಿಕ್ಕಿದೆ. ಉತ್ತಮ ಕಂಟೆಂಟ್ ಇರುವ ಸಿನಿಮಾ. ಗೆದ್ದೆ ಗೆಲ್ಲುತ್ತೆ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ.

‘ಪಾಸಿಟಿವ್ ವೈಬ್ ಇದೆ. ಟೈಟಲ್ ತುಂಬಾ ಚೆನ್ನಾಗಿದೆ. ನಿರ್ದೇಶಕ ಪ್ರಜ್ವಲ್ ನಮ್ಮ ಹುಡುಗ. ನನ್ನ ಜೊತೆ ಕೆಲಸ ಮಾಡಿದ ಹುಡುಗ. ಸೆನ್ಸಿಬಲ್ ಇದಾರೆ. ಹರೀಶ್ ಕೂಡ ತುಂಬಾ ಸಮಯದಿಂದ ನೋಡಿದ ಹುಡುಗ. ನಿರ್ಮಾಪಕರಿಗೆ ನಾನು ಭರವಸೆ ನೀಡುತ್ತೇನೆ ಖಂಡಿತವಾಗಿಯೂ ಈ ಸಿನಿಮಾ ಚೆನ್ನಾಗಿ ಆಗುತ್ತೆ’ ಎನ್ನುವುದು ಹಿರಿಯ ಚಿತ್ರನಿರ್ಮಾಪಕ ಎಸ್‌ ಮಹೇಂದರ್‌ ಅವರ ಮಾತು. ನಾಯಕಿ ಪಾಯಲ್‌, ‘ಭೂಮಿ ಎನ್ನುವ ಪಾತ್ರದಲ್ಲಿ ಮಾಡುತ್ತಿದ್ದೇನೆ. ಶಾರ್ಟ್ ಸಿನಿಮಾಗಳನ್ನು ಮಾಡಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದ್ದೀರಾ. ಈಗ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ ಇರಲಿ’ ಎನ್ನುತ್ತಾರೆ. ಮಧ್ಯಮವರ್ಗದ ಕುಟುಂಬದ ಯುವತಿ, ಬ್ಯೂಟಿಶಿಯನ್‌ ಪಾತ್ರ ನಿರ್ವಹಿಸುತ್ತಿದ್ದಾರವರು. ನಾಯಕನಟ ಹರೀಶ್‌, ‘ಇದು ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್‌ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು. ಅಂದು ಆರ್ಟಿಸ್ಟ್ ಆಗಬೇಕು ಅಂತ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು, ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು’ ಎನ್ನುತ್ತಾರೆ. ಧರ್ಮ ವಿಶ್ ಸಂಗೀತ ನಿರ್ದೇಶಿಸಲಿದ್ದಾರೆ. ಸಿನಿಮಾದಲ್ಲಿ ಮೂರು ಹಾಡುಗಳು ಇರಲಿದ್ದು ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರುವಂತೆ ಹಾಗೂ ಭರ್ಜರಿ ಚೇತನ್ ಸಾಹಿತ್ಯ ಇರಲಿದೆ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

LEAVE A REPLY

Connect with

Please enter your comment!
Please enter your name here