ಮಾನವ ಕಳ್ಳಸಾಗಾಣಿಕೆ ಕತೆಯ ಎಳೆಯೊಂದಿಗೆ ತಯಾರಾಗಿರುವಂತಿದೆ ‘ಮಾರ್ಕ್’. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಸಿನಿಮಾದಲ್ಲಿ ಸುದೀಪ್‌ರಿಗೆ ಪೊಲೀಸ್ ಅಧಿಕಾರಿ ಪಾತ್ರವಿದೆ. ಭರಪೂರ್ ಆಕ್ಷನ್ ಸುಳಿವು ನೀಡುತ್ತದೆ ಟ್ರೇಲರ್.
‘ನಿರ್ದೇಶಕ ವಿಜಯ್ ಈ ಸಿನಿಮಾಗಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ನಾಲ್ಕು ತಿಂಗಳುಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. 80 ಲೊಕೇಷನ್, 20 ಸೆಟ್ ಹಾಕಲಾಗಿದೆ’ ಎಂದು ‘ಮಾರ್ಕ್’ ಬಗ್ಗೆ ಹೇಳುತ್ತಾರೆ ಸುದೀಪ್. ನಿನ್ನೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಇದೊಂದು ಆಕ್ಷನ್ – ಡ್ರಾಮಾ ಎನ್ನುವುದು ಗೋಚರವಾಗುತ್ತದೆ. ಕಳೆದ ವರ್ಷ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಬಾರಿಯೂ ಅವರು ಪೊಲೀಸ್ ಪಾತ್ರದಲ್ಲೇ ಮುಂದುವರೆದಿದ್ದಾರೆ. 18 ಗಂಟೆಗಳಲ್ಲಿ ನಡೆಯುವ ಕತೆಯನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ ನಿರ್ದೇಶಕ ವಿಜಯ್. ನಿನ್ನೆಯ ಟ್ರೇಲರ್ ಲಾಂಚ್ ಇವೆಂಟ್‌ನಲ್ಲಿ ಚಿತ್ರರಂಗದ ಹಲವರು ಪಾಲ್ಗೊಂಡಿದ್ದು ವಿಶೇಷ.
ಮಾನವ ಕಳ್ಳಸಾಗಾಣಿಕೆ ಕತೆಯ ಎಳೆಯೊಂದಿಗೆ ತಯಾರಾಗಿರುವಂತಿದೆ ‘ಮಾರ್ಕ್’. ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೇಯ ಅಲಿಯಾಸ್ ‘ಮಾರ್ಕ್’ ಆಗಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಯೋಗಿಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಸತ್ಯಜ್ಯೋತಿ ಫಿಲಂಸ್ ಚಿತ್ರ ನಿರ್ಮಿಸಿದ್ದು, ಸುದೀಪ್ ಅವರೊಂದಿಗೆ ಕೈಜೋಡಿಸಿದ್ದಾರೆ. ಕೆಆರ್‌ಜಿ ಜೊತೆಗೂಡಿ ಪ್ರಿಯಾ ಸುದೀಪ್ ಅವರು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಇದೇ ಡಿಸೆಂಬರ್ 25ರಂದು ಸಿನಿಮಾ ತೆರೆಕಾಣಲಿದೆ.











