A Class ಸಿನಿ ಫಿಲಂಸ್‌ ಮತ್ತು MMM ಪಿಕ್ಚರ್ಸ್‌ ನಿರ್ಮಾಣ ಸಂಸ್ಥೆಗಳು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿವೆ. ಇವರ ನಿರ್ಮಾಣದಲ್ಲಿ ಮಹೇಶ್‌ ಬಾಬು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಕಿರುತೆರೆ ನಟ, ಡ್ಯಾನ್ಸರ್‌ smile guru ರಕ್ಷಿತ್‌ ನಟಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ಗೆ ನೂತನ ಚಿತ್ರನಿರ್ಮಾಣ ಸಂಸ್ಥೆಗಳ ಸೇರ್ಪಡೆಯಾಗಿದೆ. ಸಿನಿಮಾ ನಿರ್ಮಾಣ ಎಂದರೇನೇ ಅದೊಂದು ಉದ್ಯಮ. ಇಲ್ಲಿ ಬ್ಯುಸಿನೆಸ್‌ನ ಭಾಗವಾಗಿಯಷ್ಟೇ ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ದೊಡ್ಡದಿದೆ. ಅವರ ನಡುವೆ ಸಿನಿಮಾ ಉಸಿರಾಡುವ, ಪ್ಯಾಷನೇಟ್‌ ನಿರ್ಮಾಪಕರು ವಿರಳ ಎಂದೇ ಹೇಳಬಹುದು. ಈ ವರ್ಗಕ್ಕೆ ಸೇರ್ಪಡೆಯಾಗಬಹುದಾದ ಅನುರಾಗ್ ಆರ್ ಹಾಗೂ ಮಿಥುನ್‌ ಕೆಎಸ್ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರಿಬ್ಬರೂ ಕ್ರಮವಾಗಿ A Class ಸಿನಿ ಫಿಲಂಸ್‌ ಮತ್ತು MMM ಪಿಕ್ಚರ್ಸ್‌ ನಿರ್ಮಾಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಇವರ ನಿರ್ಮಾಣದ ಮೊದಲ ಚಿತ್ರವನ್ನು ಯಶಸ್ವೀ ಚಿತ್ರನಿರ್ದೇಶಕ ಮಹೇಶ್‌ ಬಾಬು ನಿರ್ದೇಶಿಸುತ್ತಿದ್ದಾರೆ. ಕಿರುತೆರೆ ನಟ, ಡ್ಯಾನ್ಸರ್‌ smile guru ರಕ್ಷಿತ್‌ ಸಿನಿಮಾದ ಹೀರೋ ಆಗಿ ನಟಿಸುತ್ತಿದ್ದಾರೆ.

ಕಿರುಚಿತ್ರ ಧಾರಾವಾಹಿಗಳು, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಸ್ಮೈಲ್ ಗುರು ರಕ್ಷಿತ್ ಈಗ ಬೆಳ್ಳಿತೆರೆಗೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ‘ಆಕಾಶ್’, ‘ಅರಸು’ನಂತಹ ಸೂಪರ್‌ಹಿಟ್‌ ಸಿನಿಮಾಗಳನ್ನು ಮಾಡಿರುವ ಮಹೇಶ್‌ ಬಾಬು ಈ ಬಾರಿ ನೃತ್ಯಪ್ರಧಾನ ಕಥಾಹಂದರ ಕೈಗೆತ್ತಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಈ ಚಿತ್ರದ ಮೂಲಕ ‘ವೀರ ಮದಕರಿ’ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ ಅದಕ್ಕೆ ಬೇಕಾಗಿರೋ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲಿರುವ ಚಿತ್ರತಂಡ, ಮತ್ತೊಬ್ಬ ಹೀರೋಯಿನ್ ಪರಿಚಯಿಸಲಿದೆ. ಜೂನ್ 15ರಿಂದ ಶೂಟಿಂಗ್ ಶುರುವಾಗಲಿದೆ.

LEAVE A REPLY

Connect with

Please enter your comment!
Please enter your name here