ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಅನೂಪ್ ಸೀಳಿನ್ ಅವರ ‘ಪ್ರೀತಿ ಅನ್ನೊ ದ್ಯಾವ್ರು’ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದು ಅನೂಪ್ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಅನೂಪ್ ಅವರ JP Music ಆಡಿಯೋ ಲೇಬಲ್‌ನಡಿ ಹಾಡು ರಿಲೀಸ್ ಆಗಿದೆ.
‘ಪ್ರೀತಿ ಬಗ್ಗೆ ಹೇಳಬೇಕು.. ಆದ್ರೆ ಅದು ಪ್ರೇಮಗೀತೆ ಆಗಿರಬಾರದು!’ ಎನ್ನುವ ಕಾನ್ಸೆಪ್ಟ್‌ನೊಂದಿಗೆ ರೂಪುಗೊಂಡ ಮ್ಯೂಸಿಕ್ ಆಲ್ಬಂ – ‘ಪ್ರೀತಿ ಅನ್ನೊ ದ್ಯಾವ್ರು’. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಮ್ಯೂಸಿಕ್ ಆಲ್ಬಂನಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದು, ಸುಜ್ಞಾನ್ ಛಾಯಾಗ್ರಹಣ ಮಾಡಿದ್ದಾರೆ. ಅನೂಪ್ ಅವರ ಪತ್ನಿ ಕೃತಿ ಬಿ ಶೆಟ್ಟಿ ವಸ್ತ್ರವಿನ್ಯಾಸ ಮಾಡಿದ್ದು ಆಲ್ಬಂ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಕೊರಿಯೋಗ್ರಫಿ ಕಾರ್ತೀಕ್ ಬಿ ಶೆಟ್ಟಿ ಅವರದ್ದು. ಮನು ಎಸ್ ಗೌಡ ಸಂಕಲನ ಮಾಡಿದ್ದಾರೆ. ಅನೂಪ್ ಸೀಳಿನ್ ಅವರ JP Music ಆಡಿಯೋ ಲೇಬಲ್‌ನಡಿ ‘ಪ್ರೀತಿ ಅನ್ನೊ ದ್ಯಾವ್ರು’ ರಿಲೀಸ್ ಆಗಿದೆ.
ಮ್ಯೂಸಿಕ್ ಆಲ್ಬಂ ಬಗ್ಗೆ ಮಾತನಾಡುವ ಅನೂಪ್, ‘ನನ್ನದೇ ಒಂದು ಮ್ಯೂಸಿಕ್ ಆಲ್ಬಂ ಮಾಡಬೇಕೆನ್ನುವುದು ಹಲವು ವರ್ಷಗಳ ಕನಸು. ತುಂಬಾ ಹಿಂದೆ ಈ ಟ್ಯೂನ್ ಮಾಡಿದ್ದೆ. ಪ್ರೀತಿ ಬಗ್ಗೆ ಹೇಳಬೇಕು, ಆದ್ರೆ ಅದು ಪ್ರೇಮಗೀತೆ ಆಗಿರಬಾರದು ಎಂದು ನನ್ನ ಕಾನ್ಸೆಪ್ಟ್ ಅನ್ನು ಪ್ರಮೋದ್ ಮರವಂತೆ ಅವರಲ್ಲಿ ಚರ್ಚಿಸಿದ್ದೆ. ಅವರು ಚೆಂದದ ಗೀತೆ ರಚಿಸಿಕೊಟ್ಟರು. ತಂತ್ರಜ್ಞರೆಲ್ಲರ ಸಹಕಾರದಿಂದ ಆಲ್ಬಂ ಸಿದ್ಧವಾಯ್ತು’ ಎನ್ನುತ್ತಾರೆ. ‘ಮನುಷ್ಯ, ಮಗುವಾಗಿದ್ದಾಗ ದೇವರಂತಿರುತ್ತಾನೆ. ಬೆಳೀತಾ ತನ್ನ ಅಹಂನಿಂದಾಗಿ ಪ್ರಪಂಚವನ್ನು ಕಲುಷಿತಗೊಳಿಸುತ್ತಾನೆ. ಈ ಹಾಡಿನ ಮೂಲ ಧಾತು ಇದೇ…’ ಎನ್ನುತ್ತಾರವರು. ಅವರು ಶುರು ಮಾಡಿದ JP Music ಆಡಿಯೋ ಲೇಬಲ್ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಅವರು ‘ಪ್ರೀತಿ ಅನ್ನೊ ದ್ಯಾವ್ರು’ ರೂಪಿಸಿದ್ದಾರೆ.