ನಿತೇಶ್‌ ತಿವಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಮಹತ್ವಾಕಾಂಕ್ಷೆಯ ಪೌರಾಣಿಕ ಸಿನಿಮಾ ‘ರಾಮಾಯಣ’ ಎರಡು ಪಾರ್ಟ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಪಕ ನಮಿತ್‌ ಮಲ್ಹೋತ್ರಾ ಎರಡು ಪಾರ್ಟ್‌ಗಳ ಬಿಡುಗಡೆ ದಿನಾಂಕದ ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ. ರಣಬೀರ್‌ ಕಪೂರ್‌, ಯಶ್‌ ಮತ್ತು ಸಾಯಿ ಪಲ್ಲವಿ ಈ ಚಿತ್ರದಲ್ಲಿ ರಾಮ, ರಾವಣ, ಸೀತೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ನಿತೇಶ್‌ ತಿವಾರಿ ‘ರಾಮಾಯಣ’ ಪೌರಾಣಿಕ ಸಿನಿಮಾ ಘೋಷಿಸಿ ವರ್ಷವಾಯ್ತು. ಚಿತ್ರದ ನಿರ್ಮಾಪಕ ನಮಿತ್‌ ಮಲ್ಹೋತ್ರಾ ಅವರು ಇಂದು ಚಿತ್ರದ ಕುರಿತು ಎರಡು ಮಾಹಿತಿಗಳನ್ನು ಅಧಿಕೃತಗೊಳಿಸಿದ್ದಾರೆ. ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿವೆ. ಪೋಸ್ಟರ್‌ ಹಂಚಿಕೊಂಡಿರುವ ನಮಿತ್‌, ‘ನಮ್ಮ ನಾಡಿನ ಭವ್ಯ ಪುರಾಣದ ಕತೆಯನ್ನು ತೆರೆಗೆ ತರುವುದು ನನ್ನ ದಶಕದ ಕನಸು. ಚಿತ್ರತಂಡದ ಎಲ್ಲರ ಪರಿಶ್ರಮದಿಂದಾಗಿ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ಸಾಕಷ್ಟು ರೀಸರ್ಚ್‌ ಕೆಲಸದ ನಂತರ ಉತ್ತಮ ತಾಂತ್ರಿಕ ಬಳಗದಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಪ್ರೇಕ್ಷಕರಿಗೆ ಇದೊಂದು ಅದ್ಭುತ ಅನುಭವವಾಗಲಿದೆ. ಜಗತ್ತಿಗೆ ನಮ್ಮ ಪುರಾಣದ ಕತೆಯನ್ನು ಆಕರ್ಷಕವಾಗಿ ಹೇಳಲಿದ್ದೇವೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿವೆ’ ಎಂದಿದ್ದಾರೆ.

‘ರಾಮಾಯಣ’ ಸಿನಿಮಾ ಸೆಟ್‌ನ ಕೆಲವು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿದ್ದವು. ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ, ರಾಮ – ಸೀತೆ ಪಾತ್ರಗಳಲ್ಲಿನ ಫೋಟೊಗಳು ಹೊರಬಿದ್ದಿದ್ದವು. ಇನ್ನು ಹಿಂದಿ ಕಿರುತೆರೆಯಲ್ಲಿ ರಾಮನಾಗಿ ಕಾಣಿಸಿಕೊಂಡಿದ್ದ ಅರುಣ್‌ ಗೋವಿಲ್‌ ಮತ್ತು ಬಾಲಿವುಡ್‌ ನಟಿ ಲಾರಾ ದತ್ತಾ ಅವರು ಇಲ್ಲಿ ರಾಜಾ ದಶರಥ ಮತ್ತು ಕೈಕೇಯಿ ಪಾತ್ರಗಳಲ್ಲಿ ನಟಿಸುವ ಸೂಚನೆ ಸಿಕ್ಕಿದೆ. ಕೆಲವು ದಿನಗಳ ಹಿಂದೆ India Today ಮ್ಯಾಗಜಿನ್‌ನಲ್ಲಿ ‘ರಾಮಾಯಣ’ ಸಿನಿಮಾ ಕುರಿತ ವರದಿ ಬಂದಿತ್ತು. ಅದರಂತೆ ‘ರಾಮಾಯಣ’ ಮೂರು ಭಾಗಗಳಲ್ಲಿ ಬರಲಿದೆ. ಮೊದಲ ಭಾಗದಲ್ಲಿ ರಾಮ ಮತ್ತು ಸೀತೆಯ ವಿವಾಹ, ಸೀತಾಪಹರಣ ಇದ್ದರೆ ಎರಡನೇ ಭಾಗದಲ್ಲಿ ಹನುಮಂತನ ಚಿತ್ರಣವಿರಲಿದೆ ಎನ್ನಲಾಗಿತ್ತು. ಹನುಮನ ಪಾತ್ರದಲ್ಲಿ ಸನ್ನಿ ಲಿಯೋನ್‌ ನಟಿಸುವುದು ಬಹುತೇಕ ಖಚಿತವಾಗಿದೆ. ಮೂರನೇ ಭಾಗದಲ್ಲಿ ಸೀತಾಪಹರಣದ ನಂತರ ಕತೆ ಇರಲಿದೆ. ಮೊದಲ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ ಎನ್ನಲಾಗಿದೆ. ‘KGF’ ಸರಣಿ ಸಿನಿಮಾಗಳ ಖ್ಯಾತಿಯ ಯಶ್‌ ಚಿತ್ರದ ಸಹನಿರ್ಮಾಪಕ ಕೂಡ ಹೌದು ಎನ್ನುವುದು ವಿಶೇಷ.

LEAVE A REPLY

Connect with

Please enter your comment!
Please enter your name here