ಸಂತೋಷ್‌ ಬಾಲರಾಜ್‌ ಮತ್ತು ರಂಜನಿ ರಾಘವನ್‌ ನಟನೆಯ ‘ಸತ್ಯಂ’ ಕನ್ನಡ – ತೆಲುಗು ದ್ವಿಭಾಷಾ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ಎರಡು ಕಾಲಘಟ್ಟಗಳಲ್ಲಿ ನಡೆಯುವ ಕತೆಯನ್ನು ಅಶೋಕ್‌ ಕಡಬ ನಿರ್ದೇಶಿಸಿದ್ದಾರೆ. ಜನವರಿಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ.

ಅಶೋಕ್ ಕಡಬ ನಿರ್ದೇಶನದ ‘ಸತ್ಯಂ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಗಂಗಾವತಿಯಲ್ಲಿ ನೆರವೇರಿದೆ. ಸಚಿವ ಶಿವರಾಜ್ ತಂಗಡಗಿ ಅವರು ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ‘ಬಾಂಧವ್ಯದ ಕಥೆ ಇಟ್ಟುಕೊಂಡು ಉತ್ತರ ಕರ್ನಾಟಕದವರೇ ಆದ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಮ್ಮ ಭಾಗದವರಾದ ಇವರನ್ನು ನಾವೆಲ್ಲ ಗೆಲ್ಲಿಸಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗುವಂತಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಮಹಾಂತೇಶ್ ಅವರು ‘ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ತಲೆಮಾರುಗಳ ನಡುವಿನ ಕಥಾಹಂದರ ಇಟ್ಟುಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ದೇವೆ. ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿದೆ’ ಎಂದರು.

ನಿರ್ದೇಶಕ ಅಶೋಕ್‌ ಕಡಬ, ‘ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನು ಹೆಚ್ಚು ಜನ ನೋಡುತ್ತಾರೆ. ಹಾಗಾಗಿ ನಿಮ್ಮ ಬಳಿಗೆ ಬಂದಿದ್ದೇವೆ. ಒಳ್ಳೇ ಸಿನಿಮಾ ಮಾಡಿದ್ದೇವೆ. ನೀವೆಲ್ಲ ಚಿತ್ರವನ್ನು ಗೆಲ್ಲಿಸುತ್ತೀರೆಂಬ ನಂಬಿಕೆಯಿದೆ’ ಎಂದರು. ಎರಡು ಕಾಲಘಟ್ಟಗಳಲ್ಲಿ ನಡೆಯುವ ಕತೆಯಿದು. ಸಂತೋಷ್‌ ಬಾಲರಾಜ್‌ ಮತ್ತು ರಂಜನಿ ರಾಘವನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಾತನಾಗಿ ಹಿರಿಯ ನಟ ಸುಮನ್, ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ. ಜನವರಿಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ, ಸಿನಿಟೆಕ್ ಸೂರಿ ಛಾಯಾಗ್ರಹಣ, ಕೆ ವಿ ರಾಜು ಚಿತ್ರಕಥೆ, ಸಂಭಾಷಣೆ ರಚಿಸಿದ್ದರು. ಅವರು ಅಗಲಿದ ಬಳಿಕ ಕಿನ್ನಾಳ ರಾಜ್ ಬರವಣಿಗೆ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here