ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ‘Incognito’ ಕಿರುಚಿತ್ರ ಚಲನಚಿತ್ರವಾಗಿ ನಿರ್ಮಾಣವಾಗಲಿದೆ. ರವಿ ಮುಪ್ಪಾ ರಚನೆಯ ಕಿರುಚಿತ್ರವಿದು. ಅನುರಾಗ್ ಕಶ್ಯಪ್ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ.
ರವಿ ಮುಪ್ಪಾ ರಚನೆಯ ‘Incognito’ ಹಿಂದಿ ಕಿರುಚಿತ್ರವನ್ನು ಚಲನಚಿತ್ರವನ್ನಾಗಿ ಮರು-ರಚಿಸಲು ನಿರ್ಧರಿಸಲಾಗಿದ್ದು, ಇದನ್ನು ಅನುರಾಗ್ ಕಶ್ಯಪ್ ನಿರ್ಮಿಸಲಿದ್ದಾರೆ. ‘Incognito’ ಕಿರುಚಿತ್ರವು ಹೊಟೆಲ್‌ನಲ್ಲಿ ತಂಗುವ ಅತಿಥಿಗಳ ಕುರಿತಾಗಿದ್ದು, ಹೋಟೆಲ್‌ನಲ್ಲಿ ತಂಗಿದ ಅತಿಥಿಗಳ ವೈಯಕ್ತಿಕ ಚಲನವಲನಗಳನ್ನು ಅವರಿಗೆ ಅನುಮಾನ ಮೂಡದ ರೀತಿಯಲ್ಲಿ ರಹಸ್ಯ ಕ್ಯಾಮೆರಾಗಳ ಮೂಲಕ ಚಿತ್ರಿಸಲಾಗುತ್ತದೆ. ನಂತರ ಅವುಗಳನ್ನು ಅಂತರ್ಜಾಲದಲ್ಲಿ ಅನ್ಯ ಮಾರ್ಗದ ಮೂಲಕ ಮಾರಾಟ ಮಾಡಿ ಹಣ ಗಳಿಸುವ ಒಬ್ಬ ಹೋಟೆಲ್ ಸ್ವಾಗತಕಾರನ ಕುರಿತಾದ ರಚನೆಯಾಗಿದೆ.
ಈ ಕಿರುಚಿತ್ರವನ್ನು ಪಾಮ್ ಸ್ಪ್ರಿಂಗ್ಸ್ ಶಾರ್ಟ್‌ಫೆಸ್ಟ್, ಟಿರಾನಾ ಮತ್ತು LA ಶಾರ್ಟ್ಸ್ ಸೇರಿದಂತೆ ಪ್ರಪಂಚದಾದ್ಯಂತದ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ. Nicholas Weinstock ಮತ್ತು Divya D’Souza of Invention Studios ಬ್ಯಾನರ್ ಅಡಿಯಲ್ಲಿ ಕಶ್ಯಪ್ ಮತ್ತು ರಂಜನ್ ಸಿಂಗ್ ಅವರು ಈ ಕಿರುಚಿತ್ರದ ರೂಪಾಂತರವನ್ನು ನಿರ್ಮಿಸಲಿದ್ದಾರೆ. ರವಿ ಮುಪ್ಪಾ ಅವರು ಮುಂಬೈ ಮೂಲದ ಚಲನಚಿತ್ರ ನಿರ್ಮಾಪಕರಾಗಿದ್ದು, ಅವರು ಆಯುಷ್ಮಾನ್ ಖುರಾನಾ ಅಭಿನಯದ ‘ಬಾಲಾ’ ಮತ್ತು ‘ದಿ ಫ್ಯಾಮಿಲಿ ಮ್ಯಾನ್’ ಸಿನಿಮಾಗಳಿಗೆ ಮತ್ತು ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರ Prime Video ಸರಣಿಗಳಲ್ಲಿ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.