ಡಾ ಚಿದಾನಂದ ಎಸ್‌ ನಾಯಕ್‌ ನಿರ್ದೇಶನದ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು…’ ಕಿರುಚಿತ್ರ ಆಸ್ಕರ್‌ ಪ್ರಶಸ್ತಿ long listಗೆ ಅರ್ಹತೆ ಪಡೆದುಗೊಂಡಿದೆ. ಕನ್ನಡದ ಕಿರುಚಿತ್ರವೊಂದು ಆಸ್ಕರ್‌ಗೆ ಅರ್ಹತೆ ಪಡೆದಿರುವ ಮೊದಲ ನಿದರ್ಶನವಿದು. ಗ್ರಾಮೀಣ ಕರ್ನಾಟಕದ ಜನಪದ ಕತೆಯೊಂದನ್ನು ಆಧರಿಸಿದ ಈ ಕಿರುಚಿತ್ರ ಪ್ರತಿಷ್ಠಿತ ಕಾನ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿತ್ತು.

ಚಿದಾನಂದ ಎಸ್‌ ನಾಯಕ್‌ ನಿರ್ದೇಶನದ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು…’ ಕಿರುಚಿತ್ರ ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಇದೀಗ ಕಿರುಚಿತ್ರ ಆಸ್ಕರ್‌ ಪ್ರಶಸ್ತಿ long listಗೆ ಅರ್ಹತೆ ಪಡೆದುಕೊಂಡಿದೆ. ಕನ್ನಡದ ಕಿರುಚಿತ್ರವೊಂದು ಆಸ್ಕರ್‌ ಪ್ರವೇಶಿಸಿರುವ ಮೊದಲ ನಿದರ್ಶನವಿದು. ಗ್ರಾಮೀಣ ಕರ್ನಾಟಕದ ಜನಪದ ಕಥೆಯೊಂದನ್ನು ಆಧರಿಸಿ ಡಾ ಚಿದಾನಂದ್‌ ಎಸ್‌ ನಾಯಕ್‌ ರೂಪಿಸಿರುವ ಹದಿನಾರು ನಿಮಿಷಗಳ ಕಿರುಚಿತ್ರವಿದು. ಎಂಬಿಬಿಎಸ್‌ ಮುಗಿಸಿ ಕೆಲ ಸಮಯ ವೈದ್ಯರಾಗಿ ಕಾರ್ಯನಿರ್ವಹಿಸಿ ಚಿದಾನಂದ್‌ ನಂತರದಲ್ಲಿ ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಸೇರಿದರು. ಅಲ್ಲಿ ಟೆಲಿವಿಷನ್‌ ವಿಭಾಗದಲ್ಲಿ ಡೈರೆಕ್ಷನ್‌ ಕಲಿತು, ಅದರ ಭಾಗವಾಗಿಯೇ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು…’ ಶೀರ್ಷಿಕೆಯ ಪ್ರಾಯೋಗಿಕ ಕಿರುಚಿತ್ರವನ್ನು ನಿರ್ಮಿಸಿದ್ದಾರೆ.

ಸರ್ಕಾರದಿಂದ ಈ ಕಿರುಚಿತ್ರ ನಿರ್ಮಾಣಕ್ಕೆ ಒಂದು ಲಕ್ಷ ವೆಚ್ಚ ಮಾಡಲಾಗಿದೆ. ಯುವ ನಿರ್ದೇಶಕ ರೂಪಿಸಿರುವ ಕಿರುಚಿತ್ರ ತಿಂಗಳುಗಳ ಹಿಂದೆ ಪ್ರತಿಷ್ಠಿತ ಕಾನ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿತ್ತು. ಅಜ್ಜಿಯೊಬ್ಬರು ತನ್ನ ಕೋಳಿ ಕೂಗದೇ ಇದ್ದರೆ ಹಳ್ಳಿಯಲ್ಲಿ ಬೆಳಕು ಆಗೋದೇ ಇಲ್ಲ ಅಂತ ತನ್ನ ಕೋಳಿ ಕದ್ದು ಹೋಗುವ ಕಥೆಯ ಸುತ್ತಲೇ ಈ ಕಿರುಚಿತ್ರ ಸುತ್ತುತ್ತದೆ. ಈ ಜನಪದ ಕಥನದಲ್ಲಿ ರಂಗಭೂಮಿ ಮತ್ತು ಸಿನಿಮಾ ನಟ ಜಹಾಂಗೀರ್ ಅಭಿನಯಿಸಿದ್ದಾರೆ. ‘ಚೋರ ಚರಣದಾಸ’ ನಾಟಕದ ಅಭಿನಯದಿಂದ ಗಮನ ಸೆಳೆದ ನಟ ಜಹಾಂಗೀರ್‌ ನೀನಾಸಂನಲ್ಲಿ ಕಲಿತವರು. ಪ್ರಸ್ತುತ ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ತಮ್ಮ ಕಿರುಚಿತ್ರದ ಬಗ್ಗೆ ಮಾತನಾಡುವ ಚಿದಾನಂದ್‌ ನಾಯಕ್‌, ‘ಶಾಲಾ ದಿನಗಳಿಂದಲೂ ನನಗೆ ನಾಟಕ ಅಂದ್ರೆ ತುಂಬಾ ಇಷ್ಟ. ಆದರೆ, ಎಂಬಿಬಿಎಸ್‌ ಓದುವಾಗ ಅದರ ನಂಟು ಬಿಟ್ಟು ಹೋಗಿತ್ತು. ಎಂಬಿಬಿಎಸ್‌ ಮುಗಿಸಿದ ಮೇಲೆ ಮೈಸೂರಿನಲ್ಲೇ ಪ್ರಾಕ್ಟೀಸ್‌ ಮಾಡ್ತಿದ್ದೆ. ಆಗ ಅಲ್ಲೇ ನಾಟಕಗಳನ್ನು ನೋಡಲು ಹೋಗುತ್ತಿದ್ದೆ. ನಾಟಕ, ಪ್ರಯೋತಾತ್ಮಕ ಸಿನಿಮಾಗಳು ನನ್ನಲ್ಲಿ ನಿರ್ದೇಶನದ ಕನಸು ಬಿತ್ತಿದವು. ಈ ಸಂದರ್ಭದಲ್ಲಿ ನಟನೆ – ನಿರ್ದೇಶನ ಕುರಿತು ಒಂದು ಕಾರ್ಯಾಗಾರಕ್ಕೂ ಸೇರಿಕೊಂಡೆ. ನಂತರ ಎಫ್‌ಟಿಐಐಯಲ್ಲಿ ಟೆಲಿವಿಷನ್‌ ವಿಂಗ್‌ನಲ್ಲಿ ಒಂದು ವರ್ಷದ ಡೈರೆಕ್ಷನ್‌ ಕೋರ್ಸ್‌ ಮಾಡಿದೆ. ಅದರ ಭಾಗವಾಗಿಯೇ ಈ ಕಿರುಚಿತ್ರ ನಿರ್ದೇಶನ ಮಾಡಿದ್ದು. ಪುಣೆ Tanshet ಎಂಬ ಹಳ್ಳಿಯಲ್ಲಿ 4 ದಿನ ಶೂಟಿಂಗ್‌ ಮಾಡಿದ್ದೇವೆ’ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here