Bigg Boss ಖ್ಯಾತಿಯ ತನಿಷಾ ಕುಪ್ಪಂಡ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿರುವ ‘ಪೆನ್‌ಡ್ರೈವ್‌’ ಸಿನಿಮಾಗೆ ಚಾಲನೆ ಸಿಕ್ಕಿದೆ. ಸೆಬಾಸ್ಟಿನ್‌ ಡೇವಿಡ್‌ ನಿರ್ದೇಶಿಸುತ್ತಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ ನಟಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್‌ ಗೀತೆಗಳನ್ನು ರಚಿಸಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

‘ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್‌ಡ್ರೈವ್‌ ಕುರಿತಾದ ಘಟನೆಗಳಿಗೂ, ತಮ್ಮ ಸಿನಿಮಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಚಿತ್ರದಲ್ಲಿ ಪೆನ್‌ಡ್ರೈವ್‌ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುವ ಸ್ಪಷ್ಟನೆ ನೀಡುತ್ತಾರೆ ಚಿತ್ರದ ನಿರ್ದೇಶಕ ಸೆಬಾಸ್ಟಿಯನ್‌ ಡೇವಿಡ್‌. ಮೊನ್ನೆಯಷ್ಟೇ ಸೆಟ್ಟೇರಿದ ಈ ಚಿತ್ರದಲ್ಲಿ Bigg Boss ಖ್ಯಾತಿಯ ತನಿಷಾ ಕುಪ್ಪಂಡ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಇತರೆ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ ಇರುತ್ತಾರೆ. ವಿ ನಾಗೇಂದ್ರ ಪ್ರಸಾದ್‌ ಗೀತೆಗಳನ್ನು ರಚಿಸುವುದಲ್ಲದೆ, ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಲಿದ್ದಾರೆ.

ಸೆಬಾಸ್ಟಿನ್‌ ಡೇವಿಡ್‌ ಈವರೆಗೆ ಹದಿನೈದು ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಅನುಭವಿ ತಂತ್ರಜ್ಞ. ‘ಚಿತ್ರದ ಕತೆ ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಕೊಳ್ಳುತ್ತಿದ್ದೇನೆ. ನನ್ನ ನಟನಾ ಜೀವನದಲ್ಲಿ ಇದೊಂದು ವಿಶೇಷವಾದ ಪಾತ್ರವಾಗಲಿದೆ’ ಎನ್ನುವುದ ನಟಿ ತನಿಷಾ ಕುಪ್ಪಂಡ ಅವರ ಮಾತು. ಲಯನ್ ಎಸ್ ವೆಂಕಟೇಶ್ ಹಾಗೂ ಲಯನ್ ಆರ್ ವೆಂಕಟೇಶ್ ಚಿತ್ರ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here