ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಚಿತ್ರದಲ್ಲಿನ ಶಿವರಾಜಕುಮಾರ್‌ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಬಂದೂಕು, ಬುಲೆಟ್‌ಗಳ ಜೊತೆ ಚುಟ್ಟಾ ಹಿಡಿದು ಕುಳಿತಿರುವ ಶಿವರಾಜಕುಮಾರ್‌ ಅವರಿಗೆ ಚಿತ್ರದಲ್ಲಿ ಭೂಗತ ಜಗತ್ತಿನ ದೊರೆಯ ಪಾತ್ರ ಇದ್ದಂತಿದೆ. ಅವರ ಪಾತ್ರವನ್ನು ನಿರ್ದೇಶಕರು ‘ಮಾಲೀಕ’ ಎಂದು ಕರೆದಿದ್ದಾರೆ.

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿನ ಶಿವರಾಜಕುಮಾರ್‌ ಲುಕ್‌ ಬಿಡುಗಡೆಯಾಗಿದೆ. ಅವರ ಪಾತ್ರವನ್ನು ನಿರ್ದೇಶಕರು ‘ಮಾಲೀಕ’ ಎಂದು ಪರಿಚಯಿಸಿದ್ದಾರೆ. ಬಂದೂಕು, ಬುಲೆಟ್‌ಗಳ ಜೊತೆ ಚುಟ್ಟಾ ಹಿಡಿದು ದಿಟ್ಟಿಸುತ್ತಿರುವ ಶಿವರಾಜಕುಮಾರ್‌ ಇಲ್ಲಿ ಖಳಛಾಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ. ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಆಕ್ಷನ್‌ – ಡ್ರಾಮಾ ಸಿನಿಮಾ. ಬಾಲಿವುಡ್‌ನ ಖ್ಯಾತ ಗಾಯಕ, ಸಂಗೀತ ಸಂಯೋಜಕ ಅಮಿತ್‌ ತ್ರಿವೇದಿ ಈ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. KRG Studios ನಿರ್ಮಾಣದ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ವಿಶ್ವಾಸ್‌ ಕಶ್ಯಪ್‌ ನಿರ್ಮಾಣ ವಿನ್ಯಾಸ, ಅನಿಲ್ ಅನಿರುದ್ಧ್ ಸಂಕಲನ ಇರಲಿದೆ.

ಧನಂಜಯ, ಭಾವನಾ ಮೆನನ್‌, ಐಶ್ವರ್ಯ ರಾಜೇಶ್‌, ದಿಗಂತ್‌, ರಂಗಾಯಣ ರಘು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದಾರೆ. ಕಲಾವಿದರ ಪಾತ್ರಗಳನ್ನು ಒಂದೊಂದಾಗಿ ಪರಿಚಯಿಸುತ್ತಾ ಬಂದಿದ್ದ ಚಿತ್ರತಂಡ ಇಂದು ಶಿವರಾಜಕುಮಾರ್‌ ಪಾತ್ರದ ಲುಕ್‌ ರಿವೀಲ್‌ ಮಾಡಿದೆ. ನಾಳೆ (ಜುಲೈ 12) ಶಿವರಾಜಕುಮಾರ್‌ ಬರ್ತ್‌ಡೇ. ಹುಟ್ಟುಹಬ್ಬದ ಅಂಗವಾಗಿ ‘ಉತ್ತರಕಾಂಡ’ದಲ್ಲಿನ ಅವರ ಲುಕ್‌ ಹೊರಬಿದ್ದಿದೆ.

LEAVE A REPLY

Connect with

Please enter your comment!
Please enter your name here