ವಿಧು ವಿನೋದ್ ಚೋಪ್ರಾ ನಿರ್ದೇಶಿಸಿ, ನಿರ್ಮಿಸಿರುವ ’12th ಫೇಲ್’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಅಕ್ಟೋಬರ್ 27ರಂದು ತೆರೆಕಾಣಲಿದೆ.
ವಿಧು ವಿನೋದ್ ಚೋಪ್ರಾ ರಚಿಸಿ, ನಿರ್ದೇಶಿಸಿ, ನಿರ್ಮಿಸಿರುವ ’12th ಫೇಲ್’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ’20 ಲಕ್ಷಕ್ಕೂ ಹೆಚ್ಚು ಹಿಂದಿ ಮಾಧ್ಯಮ ವಿದ್ಯಾರ್ಥಿಗಳು ಪ್ರತಿ ವರ್ಷ ಇಲ್ಲಿಗೆ ಕೋಚಿಂಗ್ ಪಡೆಯಲು ಬರುತ್ತಾರೆ. ಆದರೆ ಕೇವಲ 25 ರಿಂದ 30 ಜನ ಮಾತ್ರ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ’ ಎನ್ನುವ ವಾಯ್ಸ್ ಓವರ್ ಕೇಳಿಸುತ್ತದೆ.
ಚಂಬಲ್‌ನ ಸಣ್ಣ ಹಳ್ಳಿಯೊಂದರಿಂದ ಬರುವ ವಿಕ್ರಾಂತ್ ತಾನು ಮಾಡದ ಅಪರಾಧದ ಆರೋಪಕ್ಕೆ ಗುರಿಯಾಗುತ್ತಾನೆ. ಅವನು ತನ್ನ ತಾಳ್ಮೆ ಕಳೆದುಕೊಂಡು, ತಾನು IPS ಆದ ಬಳಿಕ ಇವನ ಮೇಲೆ ಆರೋಪ ಮಾಡಿದ ವ್ಯಕ್ತಿಯನ್ನು ಮೊದಲು ಅಮಾನತುಗೊಳಿಸುವುದಾಗಿ ಹೇಳುತ್ತಾನೆ. ನಂತರ ಅವನನ್ನು ಈ ಪ್ರಕರಣದಿಂದ ಬಿಡಿಸಲು ಲಂಚ ಕೇಳಿತ್ತಾನೆ. ಇದರ ವಿರುದ್ದವೂ ವಿಕ್ರಾಂತ್ ಕೋಪಗೊಳ್ಳುತ್ತಾನೆ. ಭಾರತದಲ್ಲಿನ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯನ್ನು ಭೇದಿಸಲು ಭಾರತದ ರಾಜಧಾನಿಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳ ಹೋರಾಟವನ್ನು ಪ್ರದರ್ಶಿಸುವ ಚಿತ್ರದ ಸಂಪೂರ್ಣ ನೋಟವನ್ನು ಟ್ರೈಲರ್ ನೀಡಿದೆ.
UPSC ಪರೀಕ್ಷೆಯನ್ನೇ ವಸ್ತುನಿಷ್ಠವಾಗಿಟ್ಟುಕೊಂಡಿರುವ ಈ ಚಿತ್ರವು IPS ಅಧಿಕಾರಿಗಳಾದ ಮನೋಜ್ ಕುಮಾರ್ ಶರ್ಮಾ ಮತ್ತು IRS ಅಧಿಕಾರಿ ಶ್ರದ್ಧಾ ಜೋಶಿ ಅವರ ನಿಜ ಜೀವನದ ಕಥೆಯಿಂದ ಪ್ರೇರಿತವಾಗಿದೆ. ‘Restart’ ಅಡಿಬರಹವನ್ನು ಹೊಂದಿರುವ ಹಾಗೂ ಮಿಲಿಯನ್‌ಗಟ್ಟಲೇ ವಿದ್ಯಾರ್ಥಿಗಳು ಭಾರತದ ಕಠಿಣ ಪರೀಕ್ಷೆಗಳಲ್ಲೊಂದಾದ UPSC ಪರೀಕ್ಷೆಯನ್ನು ಎದುರಿಸುವ ನೈಜ ಸ್ಥಳಗಳಲ್ಲಿ, ನೈಜ ವಿದ್ಯಾರ್ಥಿಗಳೊಂದಿಗೆ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಪಾಲಕ್ ಲಾಲ್ವಾನಿ, ಹರೀಶ್ ಖನ್ನಾ, ಸುಕುಮಾರ್ ತುಡು, ಸಂಜಯ್ ಬಿಷ್ಣೋಯ್ ಮತ್ತು ಸೂರಜ್ ನಾಗರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ 27ರಂದು ವಿಶ್ವದಾದ್ಯಂತ ಚಿತ್ರಮಂದಿಗಳಲ್ಲಿ ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.