ಗಾಯಕರಾಗಿಯೂ ಪುನೀತ್ ರಾಜಕುಮಾರ್ ಜನಪ್ರಿಯತೆ ಗಳಿಸಿದ್ದರು. ಶೃತಿಬದ್ಧವಾಗಿ ಹಾಡುತ್ತಿದ್ದ ಪುನೀತ್ ಅವರಿಗೆಂದೇ ಹಾಡುಗಳು ರಚನೆಯಾಗುತ್ತಿದ್ದವು. ಇತರೆ ಸಿನಿಮಾಗಳಿಗೆ ಹಾಡಿದಾಗ ಪುನೀತ್ ಪಡೆಯುತ್ತಿದ್ದ ಸಂಭಾವನೆ ಹಣ ಚಾರಿಟಿಗೆ ಹೋಗುತ್ತಿತ್ತು.
ಪುನೀತ್ ಉತ್ತಮ ಗಾಯಕರೂ ಹೌದು. ಅವರ ದನಿಗೆ ಒಂದು ವಿಶೇಷತೆ ಇತ್ತು. ಶೃತಿಬದ್ಧವಾಗಿ ಹಾಡುವ ಪುನೀತ್ ತಮ್ಮ ನಟನೆಯ ಸಿನಿಮಾದ ಒಂದಾದರೂ ಹಾಡಿಗೆ ದನಿಯಾಗುತ್ತಿದ್ದರು. ಇನ್ನು ಸ್ಯಾಂಡಲ್‌ವುಡ್‌ನ ನಿರ್ದೇಶಕ, ನಿರ್ಮಾಪಕರಿಗೆ ಪುನೀತ್‌ರಿಂದ ತಮ್ಮ ಸಿನಿಮಾಗೆ ಹಾಡಿಸಬೇಕು ಎನ್ನುವ ಹಂಬಲವಿರುತ್ತಿತ್ತು. ಅವರಿಗೆಂದೇ ಒಂದು ಹಾಡು ಬರೆಸಿ, ಸಂಗೀತ ಸಂಯೋಜನೆ ಮಾಡಿಸುತ್ತಿದ್ದರು. ಪ್ರತಿ ಸಿನಿಮಾಗೆ ಹಾಡಿದಾಗಲೂ ಪುನೀತ್ ಹಾಡುಗಳ ಮೇಕಿಂಗ್ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದವು. ‘ಭಾಗ್ಯವಂತ’ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ’ ಹಾಡಿನಿಂದ ಶುರುವಾದ ಅವರ ಸಿನಿಮಾ ಗಾಯನ ಇತ್ತೀಚಿನವರೆಗೂ ಜಾರಿಯಲ್ಲಿತ್ತು. ‘ಪವರ್’ ಮತ್ತು ‘ರನ್ ಆಂಟೋನಿ’ ಚಿತ್ರಗಳ ಅತ್ಯುತ್ತಮ ಗಾಯನಕ್ಕಾಗಿ ಎರಡು ಬಾರಿ ಅವರು ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಪುನೀತ್‌ರ ಹತ್ತು ಜನಪ್ರಿಯ ಹಾಡುಗಳು ಇಲ್ಲಿವೆ.
ಸಿನಿಮಾ : ಭಾಗ್ಯವಂತರು (1981) | ಹಾಡು : ಕಾಣದಂತೆ ಮಾಯಾದನು | ಗೀತಸಾಹಿತ್ಯ : ಚಿ.ಉದಯಶಂಕರ್ | ಸಂಗೀತ ಸಂಯೋಜನೆ : ಟಿ.ಜಿ.ಲಿಂಗಪ್ಪ
ಸಿನಿಮಾ : ಚಲಿಸುವ ಮೋಡಗಳು (1982) | ಹಾಡು : ಕಾಣದಂತೆ ಮಾಯವಾದನು | ಗೀತಸಾಹಿತ್ಯ : ಚಿ.ಉದಯಶಂಕರ್ | ಸಂಗೀತ ಸಂಯೋಜನೆ : ರಾಜನ್ – ನಾಗೇಂದ್ರ
ಸಿನಿಮಾ : ಬೆಟ್ಟದ ಹೂವು (1985) | ಹಾಡು : ಬಿಸಿಲೇ ಇರಲಿ | ಗೀತಸಾಹಿತ್ಯ : ಚಿ.ಉದಯಶಂಕರ್ | ಸಂಗೀತ ಸಂಯೋಜನೆ : ರಾಜನ್ – ನಾಗೇಂದ್ರ
ಸಿನಿಮಾ : ಅಪ್ಪು (2022) | ಹಾಡು : ತಾಲಿಬಾನ್ ಅಲ್ಲಾ ಅಲ್ಲಾ | ಗೀತಸಾಹಿತ್ಯ : ಉಪೇಂದ್ರ | ಸಂಗೀತ ಸಂಯೋಜನೆ : ಗುರುಕಿರಣ್
ಸಿನಿಮಾ : ವಂಶಿ (2008) | ಹಾಡು : ಜೊತೆಜೊತೆಯಲಿ | ಗೀತಸಾಹಿತ್ಯ : ಕೆ.ರಾಮನಾರಾಯಣ್ | ಸಂಗೀತ ಸಂಯೋಜನೆ : ಆರ್.ಪಿ.ಪಟ್ನಾಯಕ್
ಸಿನಿಮಾ : ಪವರ್ (2014) | ಹಾಡು : ಗುರುವಾರ ಸಂಜೆ | ಗೀತಸಾಹಿತ್ಯ : ಕವಿರಾಜ್ | ಸಂಗೀತ ಸಂಯೋಜನೆ : ಎಸ್.ತಮನ್
ಸಿನಿಮಾ : ಚಕ್ರವ್ಯೂಹ (2016) | ಹಾಡು : ಅರೆ ಅರೆ ಏನಾಯ್ತು | ಗೀತಸಾಹಿತ್ಯ : ಕವಿರಾಜ್ | ಸಂಗೀತ ಸಂಯೋಜನೆ : ಎಸ್.ತಮನ್
ಸಿನಿಮಾ : ಕವಲುದಾರಿ (2019) | ಹಾಡು : ಕವಲುದಾರಿ | ಗೀತಸಾಹಿತ್ಯ : ಕಿರಣ್ ಕಾವೇರಪ್ಪ | ಸಂಗೀತ ಸಂಯೋಜನೆ : ಚರಣ್ ರಾಜ್
ಸಿನಿಮಾ : ಅಧ್ಯಕ್ಷ (2014) | ಹಾಡು : ಅಧ್ಯಕ್ಷ ಶೀರ್ಷಿಕೆ ಗೀತೆ | ಗೀತಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್ | ಸಂಗೀತ ಸಂಯೋಜನೆ : ಅರ್ಜುನ್ ಜನ್ಯ
ಸಿನಿಮಾ : ಜೂಮ್ (2014) | ಹಾಡು : ಜೂಮ್ ಶೀರ್ಷಿಕೆ ಗೀತೆ | ಗೀತಸಾಹಿತ್ಯ : ಪ್ರಶಾಂತ್ ರಾಜ್ | ಸಂಗೀತ ಸಂಯೋಜನೆ : ಎಸ್.ತಮನ್