ತಮ್ಮ ಮೊದಲ ಸಿನಿಮಾಗೆ ಸಹಿ ಹಾಕಿದಾಗ ನಟಿ ತಮನ್ನಾ ಭಾಟಿಯಾಗೆ 13 ವರ್ಷ. ಚೊಚ್ಚಲ ಸಿನಿಮಾ ಪ್ರೊಮೋಷನ್‌ ಸಂದರ್ಭದಲ್ಲಿ (2005) ಅವರು ಮಾತನಾಡಿದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ಈ ಅಪರೂಪದ ವೀಡಿಯೋ ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ದಕ್ಷಿಣ ಭಾರತದ ಖ್ಯಾತ ನಾಯಕನಟಿ ತಮನ್ನಾ ಭಾಟಿಯಾ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಚಾಂದ್‌ ಸೆ ರೋಷನ್‌ ಚೆಹ್ರಾ’ ಹಿಂದಿ ಚಿತ್ರದ ಮೂಲಕ. ಈ ಸಿನಿಮಾ 2005ರಲ್ಲಿ ತೆರೆಕಂಡಿತ್ತು. ಈ ಚಿತ್ರಕ್ಕೆ ಸಹಿ ಹಾಕಿದಾಗ ತಮನ್ನಾ 13ರ ಹರೆಯದ ಹುಡುಗಿ. ಚಿತ್ರ ತೆರೆಕಾಣುವ ಹೊತ್ತಿಗೆ ಅವರು 15 ವರ್ಷದವರು. ಈ ಸಿನಿಮಾದ ಪ್ರೊಮೋಷನ್‌ ಸಂದರ್ಭದಲ್ಲಿನ ಒಂದು ವೀಡಿಯೋ ಕ್ಲಿಪಿಂಗ್‌ ಈಗ ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ತಾವು ಸಿನಿಮಾ ಪ್ರೊಮೋಷನ್‌ ಜೊತೆ 10ನೇ ತರಗತಿಯ ಬೋರ್ಡ್‌ ಎಕ್ಸಾಮ್‌ಗೆ ತಯಾರಿ ನಡೆಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಮೀಡಿಯಾಗೆ ಮಾತನಾಡಿರುವ ಅವರು, ‘ನಾನೀಗ ಸ್ಕೂಲ್‌ನಲ್ಲಿ ಓದುತ್ತಿದ್ದೇನೆ. 10ನೇ ತರಗತಿ ಪರೀಕ್ಷೆ ಬರೆಯಬೇಕಿದೆ. ಸಿನಿಮಾ ಪ್ರೊಮೋಷನ್‌ ಜೊತೆ ಎಕ್ಸಾಮ್‌ಗೂ ತಯಾರಿ ನಡೆಸುತ್ತಿದ್ದೇನೆ. ಸಿನಿಮಾಗೆ ಸಹಿ ಹಾಕಿದಾಗ ನನಗೆ ಹದಿಮೂರುವರೆ ವರ್ಷ. ಈಗ 10th ಪರೀಕ್ಷೆ ಬರೆಯಬೇಕಿದೆ’ ಎಂದಿದ್ದಾರೆ. 2005ರಲ್ಲಿ ತಮನ್ನಾರ ಚೊಚ್ಚಲ ಸಿನಿಮಾ ‘ಚಾಂದ್‌ ಸೆ ರೋಷನ್‌ ಚೆಹ್ರಾ’ ತೆರೆಕಂಡಿತ್ತು. ಅದೇ ವರ್ಷ ಅವರು ನಟಿಸಿದ್ದ ತೆಲುಗು ಸಿನಿಮಾ ‘ಶ್ರೀ’ ಕೂಡ ತೆರೆಕಂಡಿತ್ತು. 2016ರಲ್ಲಿ ‘ಕೇಡಿ’ ತಮಿಳು ಸಿನಿಮಾದೊಂದಿಗೆ ಅವರು ಕಾಲಿವುಡ್‌ಗೆ ಪದಾರ್ಪಣೆ ಮಾಡಿದರು.

LEAVE A REPLY

Connect with

Please enter your comment!
Please enter your name here