ವಿಕ್ಕಿ ವರುಣ್‌ ನಿರ್ದೇಶಿಸಿ, ನಟಿಸಿರುವ ‘ಕಾಲಾಪತ್ಥರ್‌’ ಸಿನಿಮಾದ ‘ಗೋರುಕನ ಗಾನ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್‌ ರಾಜಕುಮಾರ್‌ ಹಾಡು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ನಾಗೇಂದ್ರಪ್ರಸಾದ್‌ ರಚನೆಯ ಈ ಹಾಡಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, ಶಿವಾನಿ ಹಾಡಿದ್ದಾರೆ.

‘ಅನೂಪ್‌ ಸೀಳಿನ್‌ ದೇಸಿ ಶೈಲಿಯಲ್ಲಿ ಸೊಗಸಾಗಿ ಸಂಗೀತ ಸಂಯೋಜಿಸುತ್ತಾರೆ. ‘ಗೋರುಕನ’ ಎಂದರೆ ‘ಸುವ್ವಿ’ ಎಂಬ ಅರ್ಥ ಬರುತ್ತದೆ. ಹೆಚ್ಚಾಗಿ ಸೋಲಿಗರು ಈ ಪದವನ್ನು ಬಳಸುತ್ತಾರೆ’ ಎಂದರು ಗೀತರಚನೆಕಾರ ವಿ ನಾಗೇಂದ್ರಪ್ರಸಾದ್. ‘ಕಾಲಾಪತ್ಥರ್‌’ ಸಿನಿಮಾಗೆ ಅವರು ರಚಿಸಿರುವ ‘ಗೋರುಕನ ಗಾನ’ ಸಾಂಗ್‌ ಬಿಡುಗಡೆಯಾಗಿದೆ. ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಮತ್ತು ನಟಿ ತಾರಾ ಸಾಂಗ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆಯ ಈ ಗೀತೆಯನ್ನು ಶಿವಾನಿ ಹಾಡಿದ್ದಾರೆ. ‘2.0 ಹೊಸ ವರ್ಷನ್‌ನಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡಿದು. ನಾಗೇಂದ್ರ ಪ್ರಸಾದ್ ಅದ್ಭುತವಾಗಿ ಗೀತರಚನೆ ಮಾಡಿದ್ದಾರೆ. ಹದಿನಾರು ವರ್ಷದ ಶಿವಾನಿ ಅವರ ಗಾಯನ ಈ ಹಾಡಿನ ಅಂದವನ್ನು ಹೆಚ್ಚಿಸಿದೆ’ ಎಂದರು ಅನೂಪ್‌ ಸೀಳಿನ್‌.

‘ಕೆಂಡಸಂಪಿಗೆ’ ಸಿನಿಮಾ ಖ್ಯಾತಿಯ ವಿಕ್ಕಿ ವರುಣ್‌ ನಟಿಸಿ, ನಿರ್ದೇಶಿಸಿರುವ ‘ಕಾಲಾಪತ್ಥರ್‌’ ಸಿನಿಮಾ ಹಲವು ಕಾರಣಗಳಿಗಾಗಿ ನಿರೀಕ್ಷೆ ಹುಟ್ಟುಹಾಕಿದೆ. ಧನ್ಯ ರಾಮಕುಮಾರ್‌ ಚಿತ್ರದಲ್ಲಿ ‘ಗಂಗಾ’ ಪಾತ್ರ ನಿರ್ವಹಿಸಿದ್ದಾರೆ. ಹೀರೋ ವಿಕ್ಕ ವರುಣ್‌ ಹಾಡಿನ ಬಗ್ಗೆ ಮಾತನಾಡಿ, ‘ಗೋರುಕನ ಗೀತೆ ನಮ್ಮ ಚಿತ್ರದ ಮೊದಲ ಹಾಡು. ಈ ಹಾಡಿನ ಮೂಲಕ ಮಂಗಳಮುಖಿಯರು ನಮ್ಮ ಚಿತ್ರದ ಕಥೆ ಹೇಳುತ್ತಾರೆ. ಇದು ಚಿತ್ರದ ಕಥೆ ಹೇಳುವ ಗೀತೆಯಾಗಿರುವುದರಿಂದ ಇಂದು ಲಿರಿಕಲ್ ಸಾಂಗ್ ಮಾತ್ರ ಬಿಡುಗಡೆ ಮಾಡಿದ್ದೇವೆ’ ಎನ್ನುತ್ತಾರೆ. ಚಿತ್ರನಿರ್ದೇಶಕರಾದ ಸಿಂಪಲ್ ಸುನಿ, ಮಹೇಶ್ ಕುಮಾರ್ (ಮದಗಜ), ಜಿ ಟಿ ಮಾಲ್ ಮಾಲೀಕರಾದ ಆನಂದ್, ಉದ್ಯಮಿ ಜಗದೀಶ್ ಚೌಧರಿ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲನಕೋಟೆ ನಿರ್ಮಾಣದ ‘ಕಾಲಾಪತ್ಥರ್‌’ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here