‘ಘೋಸ್ಟ್‌’ ಸಿನಿಮಾ ಪ್ರಚಾರಕ್ಕೆಂದು ಮುಂಬೈಗೆ ತೆರಳಿರುವ ಶಿವರಾಜಕುಮಾರ್‌ ಅವರು ಅಲ್ಲಿ ನಟ ಕಮಲ ಹಾಸನ್‌ ಅವರನ್ನು ಭೇಟಿ ಮಾಡಿದ್ದಾರೆ. Instagramನಲ್ಲಿ ಕಮಲ್‌ ಜೊತೆಗಿನ ಫೋಟೊ ಹಂಚಿಕೊಂಡಿರುವ ಶಿವರಾಜ್‌, ‘Once upon a time there lived a Ghost’ ಎಂದು ಬರೆದು ‘ವಿಕ್ರಂ’ ತಮಿಳು ಸಿನಿಮಾದ ಕಮಲ್‌ ಪಾತ್ರ ನೆನಪಿಸಿಕೊಂಡಿದ್ದಾರೆ.

ಶಿವರಾಜಕುಮಾರ್‌ ನಟನೆಯ ‘ಘೋಸ್ಟ್‌’ ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಇದಕ್ಕಾಗಿ ಮುಂಬೈಗೆ ಪ್ರಚಾರಕ್ಕೆಂದು ತೆರಳಿರುವ ಅವರು ಕಮಲ ಹಾಸನ್ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರು ಜೊತೆಗಿರುವ ಪೋಟೋ ಹಂಚಿಕೊಂಡಿದ್ದಾರೆ. ಶಿವರಾಜಕುಮಾರ್ ತಮ್ಮ Instagram ಖಾತೆಯಲ್ಲಿ ‘Once upon a time there lived a Ghost’ ಎಂದು ಕಮಲ್​ ಅವರ ‘ವಿಕ್ರಂ’ ಸಿನಿಮಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಹಲವು ರಾಜ್ಯಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಿವರಾಜಕುಮಾರ್ ಅವರ ‘ಘೋಸ್ಟ್’ ಸಿನಿಮಾವನ್ನು ಪ್ಯಾನ್ ಇಂಡಿಯಾ​ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಚಿತ್ರಕ್ಕೆ ಪ್ರಚಾರವನ್ನು ಜೋರಾಗಿಯೇ ಮಾಡಲಾಗುತ್ತಿದೆ. ‘ವಿಕ್ರಂ’ ಸಿನಿಮಾದಲ್ಲಿ ಕಮಲ್‌ ಅವರ ಪಾತ್ರವನ್ನು ‘ಘೋಸ್ಟ್’ ಎಂದೇ ಕರೆಯಲಾಗಿತ್ತು. ಇದೀಗ ಶಿವ ರಾಜಕುಮಾರ್ ಹಾಗೂ ಕಮಲ ಹಾಸನ್ ಭೇಟಿ ಆಗಿದ್ದು ಕನ್ನಡದ ‘ಘೋಸ್ಟ್’ ಮತ್ತು ತಮಿಳಿನ ‘ಘೋಸ್ಟ್’ ಬೇಟಿಯಾದಂತಿದೆ.

ಶಿವರಾಜಕುಮಾರ್ ಅವರು ಕಮಲ ಹಾಸನ್​ರ ದೊಡ್ಡ ಅಭಿಮಾನಿ. ಹಲವು ಸಂದರ್ಭಗಳಲ್ಲಿ ಶಿವರಾಜಕುಮಾರ್ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಇಂದು ಹಂಚಿಕೊಂಡಿರುವ ಚಿತ್ರದಲ್ಲೂ ಸಹ ಶಿವರಾಜ್‌ ಕುಮಾರ್‌ ಸ್ಟಾರ್ ನಟನ ರೀತಿಯಲ್ಲದೆ, ಒಬ್ಬ ಅಭಿಮಾನಿಯ ರೀತಿಯಲ್ಲಿಯೇ ಕಮಲ್ ಅವರ ಜೊತೆಗೆ ಪೋಟೋ ತೆಗೆಸಿಕೊಂಡಿದ್ದಾರೆ. ಕಮಲ್ ಹಾಸನ್ ಹಾಗೂ ಶಿವರಾಜಕುಮಾರ್ ಅವರ ಸ್ನೇಹ ಹಳೆಯದ್ದು. ಕಮಲ ಹಾಸನ್ ಅವರ ಹಿಟ್ ಸಿನಿಮಾ ‘ಪುಷ್ಪಕ ವಿಮಾನ’ಕ್ಕೆ ಕ್ಲ್ಯಾಪ್ ಮಾಡಿದ್ದಿದ್ದು ಡಾ ರಾಜ​ಕುಮಾರ್. ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಕಮಲ್ ಅವರು ಡಾ ರಾಜ್‌ ಅವರ ಸರಳತೆ, ಸಂಸ್ಕಾರವನ್ನು ನೆನಪು ಮಾಡಿಕೊಂಡು ಮಾತನಾಡಿದ್ದರು.

LEAVE A REPLY

Connect with

Please enter your comment!
Please enter your name here