ಸುಮನ್ ಚಿಕ್ಕಲ ನಿರ್ದೇಶನದ ‘ಸತ್ಯಭಾಮಾ’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಟನೆಯಿಂದ ಸಣ್ಣ ವಿರಾಮ ಪಡೆದಿದ್ದ ನಟಿ ಕಾಜಲ್ ಅಗರ್ವಾಲ್ ಈ ಚಿತ್ರದೊಂದಿಗೆ ಪೊಲೀಸ್ ಪಾತ್ರದ ಮೂಲಕ ತೆರೆಗೆ ಮರಳುತ್ತಿದ್ದಾರೆ.
ಕಾಜಲ್ ಅಗರ್ವಾಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ‘ಸತ್ಯಭಾಮಾ’ ತೆಲುಗು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಮನ್ ಚಿಕ್ಕಲ ನಿರ್ದೇಶಿಸಿದ್ದಾರೆ. ‘ಮೇಜರ್’, ‘ಗೂಢಾಚಾರಿ’ ಚಿತ್ರದ ನಿರ್ಮಾಪಕ ಶಶಿ ಕಿರಣ್ ಟಿಕ್ಕಾ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ತಾನು ಮಾಡದ ಕೊಲೆ ಕೇಸಿನಲ್ಲಿ ಸಿಲುಕಿ ಹಾಕಿಕೊಳ್ಳುವ ಸತ್ಯಭಾಮಾ (ಕಾಜಲ್ ಅಗರ್ವಾಲ್) ಕೆಲಸದಿಂದ ಅಮಾನತುಗೊಳ್ಳುತ್ತಾಳೆ. ನಡೆದ ಸಂಗತಿಯ ಬಗ್ಗೆ ಸತ್ಯ ಕಂಡುಹಿಡಿಯಲು ಮುಂದಾಗುವ ಇವಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಆದರೆ ಆ ಕೊಲೆಯನ್ನು ಸ್ಥಳೀಯ ರಾಜಕಾರಣಿಯೊಬ್ಬ ಮಾಡಿರುತ್ತಾನೆ. ಇದನ್ನು ತಿಳಿದ ಅವಳು ಅದನ್ನು ಸಾಬೀತುಪಡಿಸಲು ಮುಂದಾಗುತ್ತಾಳೆ.
ನವೀನ್ ಚಂದ್ರ, ಪ್ರಕಾಶ್ ರಾಜ್, ನಾಗಿನೀಡು, ಹರ್ಷವರ್ಧನ್, ರವಿವರ್ಮ, ಅಂಕಿತ್ ಕೊಯ್ಯ, ಸಂಪದ ಎನ್, ಪ್ರಜ್ವಲ್ ಯದ್ಮಾ, ನೇಹಾ ಪಠಾಣ್, ಅನಿರುದ್ಧ್ ಪವಿತ್ರನ್, ಸತ್ಯ ಪ್ರದೀಪ್ತಿ, ರೋಹಿತ್ ಸತ್ಯನ್, ಕೊಡತಿ ಪವನ್ ಕಲ್ಯಾಣ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. Aurum Arts ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ರಾವ್ ಟಕ್ಕಲಪೆಲ್ಲಿ ಮತ್ತು ಬಾಬಿ ಟಿಕ್ಕಾ ಚಿತ್ರ ನಿರ್ಮಿಸಿದ್ದಾರೆ. ಎ ವಿ ಮುರಳೀಧರ್, ಬಾಲಾಜಿ ವೀರನಾಳ ಚಿತ್ರದ ಸಹ ನಿರ್ಮಾಪಕರು. ವಿಷ್ಣು ಬೆಸಿ ಛಾಯಾಗ್ರಹಣ, ಕೊಡತಿ ಪವನ್ ಕಲ್ಯಾಣ್ ಸಂಕಲನ ಚಿತ್ರಕ್ಕಿದೆ.










