ಮಹೇಶ್‌ ಬಾಬು ನಟನೆಯ ‘ಗುಂಟೂರ್‌ ಕಾರಂ’ ಸಿನಿಮಾದಲ್ಲಿನ ನಟಿ ಶ್ರೀಲೀಲಾ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ. ಅತಿ ಕಡಿಮೆ ಅವಧಿಯಲ್ಲಿ ಟಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ ತೆಲುಗಿನ ದೊಡ್ಡ ಹೀರೋಗಳ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. aha ಓಟಿಟಿ ನಿರ್ಮಿಸಲಿರುವ ಚಿತ್ರದ ನಾಯಕಿಯಾಗಿಯೂ ಅವರು ಆಯ್ಕೆಯಾಗಿದ್ದಾರೆ.

ಕನ್ನಡ ನೆಲದ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಹೆಸರು ಮಾಡಿದ ನಂತರ ಇದೀಗ ಶ್ರೀಲೀಲಾ ಸರದಿ. ‘Kiss’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶ್ರೀಲೀಲಾ ‘ಪೆಳ್ಳಿಸಂದಿಡಿ’ ಚಿತ್ರದೊಂದಿಗೆ ತೆಲುಗಿಗೆ ಹೋದರು. ಇತ್ತೀಚೆಗೆ ತೆರೆಕಂಡ ರವಿತೇಜಾ ಅವರ ‘ಧಮಾಕಾ’ ನಾಯಕಿಯಾಗಿ ಜನರಿಗೆ ಅವರು ಇಷ್ಟವಾಗಿದ್ದರು. ಇದೀಗ ಟಾಲಿವುಡ್‌ನ ಸ್ಟಾರ್‌ ಹೀರೋ ಮಹೇಶ್‌ ಬಾಬು ಅವರ ‘ಗುಂಟೂರ್‌ ಕಾರಂ’ ತೆಲುಗು ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ನಿನ್ನೆ ನಟಿಯ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಸಿನಿಮಾದಲ್ಲಿನ ಅವರ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿತ್ತು. Haarika & Hassine Creations ನಟಿಯ ಫಸ್ಟ್‌ ಲುಕ್‌ ಟ್ವೀಟ್‌ ಮಾಡಿ ಶುಭಕೋರಿದೆ. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ, ಜಗಪತಿ ಬಾಬು, ಜಯರಾಂ, ಸುನೀಲ್‌, ರಮ್ಯಾಕೃಷ್ಣ ಚಿತ್ರದ ಇತರೆ ಪ್ರಮುಖ ಕಲಾವಿದರು. ಚಿತ್ರಕ್ಕೆ ಥಮನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಅತಿ ಕಡಿಮೆ ಅವಧಿಯಲ್ಲಿ ಟಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ ನಟಿಯರ ಪಟ್ಟಿಯಲ್ಲಿ ಶ್ರೀಲೀಲಾ ಸೇರ್ಪಡೆಗೊಂಡಿದ್ದಾರೆ. ಬಾಲಕೃಷ್ಣ ಹೀರೋ ಆಗಿ ನಟಿಸುತ್ತಿರುವ ‘ಭಗವಂತ್‌ ಕೇಸರಿ’ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯನ್ನು ಅವರು ಖಚಿತಪಡಿಸಿದ್ದಾರೆ. ‘Extremely proud and super excited to be a part of this project!’ ಎಂದು ಟ್ವೀಟ್‌ ಮಾಡಿ ಬಾಲಕೃಷ್ಣ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಪವನ್‌ ಕಲ್ಯಾಣ್‌ ಅವರ ‘ಉಸ್ತಾದ್‌ ಭಗತ್‌ ಸಿಂಗ್‌’ ತೆಲುಗು ಚಿತ್ರಕ್ಕೂ ಅವರು ನಾಯಕಿ. ಈ ಸಿನಿಮಾದ ನಿರ್ಮಾಪಕರು ಟ್ವಿಟರ್‌ನಲ್ಲಿ ಶ್ರೀಲೀಲಾ ಪೋಸ್ಟರ್‌ ಹಂಚಿಕೊಂಡು ಶುಭಾಶಯ ಕೋರಿದೆ.

aha ಓಟಿಟಿ ಪ್ಲಾಟ್‌ಫಾರ್ಮ್‌ ನಿರ್ಮಿಸಲಿರುವ ನೂತನ ಚಿತ್ರದ ನಾಯಕಿಯಾಗಿಯೂ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ದೊಡ್ಡ ಅವಕಾಶಗಳ ಮೂಲಕ ಕನ್ನಡದ ಹುಡುಗಿ ಟಾಲಿವುಡ್‌ನ ಮುಂಚೂಣಿ ನಾಯಕನಟಿಯರೊಂದಿಗೆ ಪೈಪೋಟಿ ನಡೆಸಿದ್ದಾರೆ.

Previous articleಆರ್ಯನ್‌ ‘ದಿ ಭವಾನಿ ಫೈಲ್ಸ್‌’ | ಪೋಸ್ಟರ್‌ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್‌ ರಾಜಕುಮಾರ್‌
Next articleನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ಸಿನಿಮಾ ‘ಫೈರ್‌ ಪ್ಲೈ’ | ವಂಶಿ ನಟನೆ, ನಿರ್ದೇಶನ

LEAVE A REPLY

Connect with

Please enter your comment!
Please enter your name here