‘ಇದು ಮತ್ತೊಂದು ಅಪ್ಪಟ ನೆಲದ ಕತೆ. ಕೋಲಾರ ಸೊಗಡಿನ ಹಿನ್ನೆಲೆಯಲ್ಲಿ ನಿರ್ದೇಶಕರು ಕತೆ ಹೇಳುತ್ತಿದ್ದಾರೆ’ ಎಂದು ತಮ್ಮ ‘ಮೂರನೇ ಕೃಷ್ಣಪ್ಪ’ ಸಿನಿಮಾ ಬಗ್ಗೆ ಹೇಳುತ್ತಾರೆ ನಟ ರಂಗಾಯಣ ರಘು. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸಂಪತ್‌ ಮೈತ್ರೇಯ ನಟಿಸಿದ್ದಾರೆ. ಮುಂದಿನ ವಾರ ಮೇ 24ರಂದು ಸಿನಿಮಾ ತೆರೆಕಾಣುತ್ತಿದೆ.

‘ನಾನು ಈ ಚಿತ್ರದ ನಾಯಕನಟ ಅಲ್ಲ. ಸಿನಿಮಾದ ಮುಖ್ಯ ಪಾತ್ರವಷ್ಟೇ. ಒಂದೊಳ್ಳೆ ವಿಷಯ ಇರುವ ಸಿನಿಮಾ. ದೇವಸ್ಥಾನ ಉದ್ಘಾಟನೆಗೆ ಸಂಬಂಧಪಟ್ಟ ಕಥೆ. ಶಿಕ್ಷಕನೊಬ್ಬ ಸಹಾಯ ಮಾಡಲು ಹೋಗಿ ಏನೆಲ್ಲಾ ಸಂಕಷ್ಟಗಳನ್ನು ಅನುಭವಿಸ್ತಾನೆ ಎನ್ನುವುದು ಕತೆ’ ಎನ್ನುತ್ತಾರೆ ನಟ ಸಂಪತ್‌ ಮೈತ್ರೇಯ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮೂರನೇ ಕೃಷ್ಣಪ್ಪ’ ಸಿನಿಮಾ ಮುಂದಿನ ವಾರ ಮೇ 24ರಂದು ತೆರೆಕಾಣುತ್ತಿದೆ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೀಗ ನಮ್ಮ ನೆಲದ ಕತೆಗಳ ಸಿನಿಮಾಗಳು ಹೆಚ್ಚುತ್ತಿವೆ. ಅದೇ ರೀತಿಯ ನೆಲದ ಘಮಲಿನ ಚಿತ್ರವಿದು. ಕೋಲಾರ ಭಾಗದ ಭಾಷೆಯ ಸೊಗಡು ಇಲ್ಲಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಸಿಕ್ಕಿದೆ. ನಟ ಲೂಸ್‌ ಮಾದ ಯೋಗಿ ಟ್ರೇಲರ್‌ಗೆ ಹಿನ್ನೆಲೆ ದನಿ ನೀಡಿದ್ದರು.

ಈ ಚಿತ್ರದ ನಿರ್ದೇಶಕ ನವೀನ್‌ ಅವರು ನಟ ರಂಗಾಯಣ ರಘು ಅವರಿಗೆ ಹಳೆಯ ಪರಿಚಯ. ‘ಅಕಿರ’ ಸಿನಿಮಾ ಸಂದರ್ಭದಲ್ಲೇ ಈ ಕತೆಯ ಬಗ್ಗೆ ಪ್ರಸ್ತಾಪಿಸಿದ್ದರಂತೆ. ‘ಪ್ರಾಂತೀಯ ಭಾಷೆಯಲ್ಲಿ ಸಿನಿಮಾ ಮಾಡ್ಬೇಕು ಅಂತ ಚರ್ಚೆ ಮಾಡಿದ್ದೆವು. ಅವರು ಮಾಡಿದ್ದ ಸ್ಕ್ರಿಪ್ಟ್‌ ಓದಿದೆ. ತುಂಬಾ ಖುಷಿಯಾಯ್ತು. ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ’ ಎನ್ನುತ್ತಾರೆ ನಟ ರಂಗಾಯಣ ರಘು. ‘ನಾನು ಬರೆದ ಪಾತ್ರಗಳಿಗೆ ಕಲಾವಿದರು ಜೀವ ತುಂಬಿದ್ದಾರೆ. ಏನು ಬೇಕೋ ಎಲ್ಲದಕ್ಕಿಂತ ಒಂದು ಪಟ್ಟು ಜಾಸ್ತಿಯೇ ಮಾಡಿದ್ದಾರೆ. ಟ್ರೇಲರ್‌ ಎಲ್ಲರಿಗೂ ಇಷ್ಟವಾಗಿದ್ದು ಗೆಲ್ಲುವ ವಿಶ್ವಾಸದಲ್ಲಿದ್ದೇವೆ’ ಎನ್ನುವುದು ನಿರ್ದೇಶಕ ನವೀನ್‌ ಅವರ ಮಾತು. ‘ರೆಡ್ ಡ್ರ್ಯಾಗನ್ ಫಿಲ್ಮ್ಸ್’ ಬ್ಯಾನರ್‌ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ಚಿತ್ರ ನಿರ್ಮಿಸಿದ್ದಾರೆ. ಶ್ರೀಪ್ರಿಯಾ ಚಿತ್ರದ ನಾಯಕಿಯಾಗಿ ನಟಿಸಿದ್ದು ತುಕಾಲಿ ಸಂತೋಷ್, ಉಗ್ರಂ ಮಂಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಆನಂದ್ ರಾಜವಿಕ್ರಮ್ ಸಂಗೀತ, ಯೋಗಿ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here