ಎನ್‌ ವಿನಾಯಕ ನಿರ್ದೇಶನದ ‘ಫುಲ್‌ ಮೀಲ್ಸ್‌’ ಸಿನಿಮಾದ ನೂತನ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಚಿತ್ರದ ಹೀರೋ ಲಿಖಿತ್‌ ಶೆಟ್ಟಿ ಬರ್ತ್‌ಡೇಗೆಂದು ಚಿತ್ರತಂಡ ಮೋಷನ್‌ ಪೋಸ್ಟರ್‌ ಬಿಡುಗಡೆಗೊಳಿಸಿದೆ. ತೇಜಸ್ವಿನಿ ಶರ್ಮ ಮತ್ತು ಖುಷಿ ರವಿ ಚಿತ್ರದ ಇಬ್ಬರು ನಾಯಕಿಯರು.

‘ಸಂಕಷ್ಟಕರ ಗಣಪತಿ’, ‘ಫ್ಯಾಮಿಲಿ ಪ್ಯಾಕ್’, ‘ಅಬ್ಬಬ್ಬ’ ಸಿನಿಮಾಗಳ ನಟ ಲಿಖಿತ್‌ ಶೆಟ್ಟಿ ಅಭಿನಯದ ‘ಫುಲ್ ಮೀಲ್ಸ್’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಹೀರೋ ಲಿಖಿತ್‌ ಹುಟ್ಟುಹಬ್ಬಕ್ಕೆ ಇದು ಚಿತ್ರತಂಡದ ಉಡುಗೊರೆ. ಲಿಖಿತ್ ಶೆಟ್ಟಿ ಇಬ್ಬರು ನಾಯಕಿಯರ ಸಾಂಗತ್ಯದಲ್ಲಿರುವ ರೊಮ್ಯಾಂಟಿಕ್ ಥೀಮ್ ಹೊಂದಿರುವ ಈ ಮೋಷನ್ ಪೋಸ್ಟರ್ ಆಕರ್ಷಕವಾಗಿದೆ. ‘ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಸಂಪೂರ್ಣವಾಗಿದ್ದು, ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ. ವರ್ಷಾಂತ್ಯದೊಳಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕರೂ ಆಗಿರುವ ನಾಯಕನಟ ಲಿಖಿತ್‌ ಶೆಟ್ಟಿ.

‘ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವಿದು. ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳು ಚಿತ್ರದಲ್ಲಿವೆ. ಪ್ರೇಕ್ಷಕರಿಗೆ ಖಂಡಿತ ಸಿನಿಮಾ ಇಷ್ಟವಾಗಲಿದೆ’ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ ಚಿತ್ರದ ನಿರ್ದೇಶಕ ಎನ್‌ ವಿನಾಯಕ. ಇದು ಅವರಿಗೆ ಸ್ವತಂತ್ರ ನಿರ್ದೇಶನದ ಚೊಚ್ಚಲ ಸಿನಿಮಾ. ಚಿತ್ರಕ್ಕೆ ಹರೀಶ್ ಗೌಡ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಗುರುಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನವಿದೆ. ಲಿಖಿತ್ ಶೆಟ್ಟಿ ಅವರಿಗೆ ನಾಯಕಿಯರಾಗಿ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅಭಿನಯಿಸಿದ್ದಾರೆ. ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಚೇತನ್ ದುರ್ಗ ಚಿತ್ರದಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here