ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾ ತಂಡದಿಂದ ‘Sound of UI’ ವೀಡಿಯೋ ರಿಲೀಸ್‌ ಆಗಿದೆ. ಈ ಚಿತ್ರಕ್ಕಾಗಿ ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಅವರು ಲೈವ್‌ ಮ್ಯೂಸಿಕ್‌ ಪ್ರಯೋಗ ನಡೆಸಿದ್ದಾರೆ. ಹಂಗೇರಿಯ ಬುಡಾಪೆಸ್ಟ್‌ಲ್ಲಿನ ಸಂಗೀತದ ಝಲಕ್‌ ಕುರಿತಾದ ಒಂದು ವೀಡಿಯೋ ತುಣುಕು ‘Sound of UI’.

ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘ಯುಐ’ ಹಲವು ಕಾರಣಗಳಿಗಾಗಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ‘ಸೌಂಡ್ ಆಫ್ ಯುಐ’ ಬಿಡುಗಡೆಯಾಗಿದೆ. 1 ನಿಮಿಷ 24 ಸೆಕೆಂಡ್‌ಗಳ ಈ ಮ್ಯೂಸಿಕ್ ಝಲಕ್‌ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪ್ರಯೋಗಗಳು ಕಾಣಿಸುತ್ತಿವೆ. ಈ ವೀಡಿಯೋ ಚಿತ್ರದ ಮುಂಬರುವ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚುಮಾಡಿದೆ. ಚಿತ್ರದ ಮ್ಯೂಸಿಕ್‌ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್, ಸಿ ಆರ್ ಬಾಬಿ ಹಾಗೂ ಉಪೇಂದ್ರ ಅವರ ಸಾರಥ್ಯದಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದಿದೆ. 15 ವಯೊಲಿನ್, 8 ಬೇಸ್ ಗಿಟಾರ್, 4 ಕೊಳಲು ಸೇರಿದಂತೆ ಹಲವು ಸಂಗೀತ ವಾದ್ಯಗಳನ್ನು ಬಳಸಿಕೊಂಡು 90ಕ್ಕೂ ಅಧಿಕ ನುರಿತ ಸಂಗೀತಗಾರರು ಲೈವ್‌ನಲ್ಲಿ ಕಾರ್ಯ ನಿರ್ವಹಿಸಿರುವುದು ವಿಶೇಷ.

ಚಿತ್ರದಲ್ಲಿ ಬಿಜಿಎಂ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಹಂಗೇರಿಯಲ್ಲಿ ನಡೆದ ಈ ಮ್ಯೂಸಿಕ್ ಜರ್ನಿಯ ಒಂದು ಝಲಕ್ ಅನ್ನು ಚಿಕ್ಕ ಪ್ರೋಮೊ ಮೂಲಕ ‘ಸೌಂಡ್ ಆಫ್ ಯುಐ’ ಶೀರ್ಷಿಕೆಯಡಿ ಚಿತ್ರತಂಡ ರಿಲೀಸ್ ಮಾಡಿದೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ ಮನೋಹರನ್ ಹಾಗೂ ಕೆ ಪಿ ಶ್ರೀಕಾಂತ್ ಚಿತ್ರ ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ ರಮೇಶ್, ಜಿ ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here