‘ಉಡ್ತಾ ಪಂಜಾಬ್‌’ ಹಿಂದಿ ಚಿತ್ರದಲ್ಲಿ ನಟಿ ಅಲಿಯಾ ಮತ್ತು ಗಾಯಕ – ನಟ ದಿಲ್‌ಜಿತ್‌ ದೊಸಾಂಜ್‌ ‘ಇಕ್‌ ಕುಡಿ’ ಸಾಂಗ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಎಂಟು ವರ್ಷಗಳ ನಂತರ ‘ಜಿಗ್ರಾ’ ಚಿತ್ರದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಇವರಿಬ್ಬರೂ ಹಾಡಿರುವ ‘ಜಿಗ್ರಾ’ ಹಿಂದಿ ಚಿತ್ರದ ‘ಚಲ್‌ ಕುಡಿಯೇ’ ಸಾಂಗ್‌ ಬಿಡುಗಡೆಯಾಗಿದೆ.

‘ಜಿಗ್ರಾ’ ಹಿಂದಿ ಚಿತ್ರದ ‘ಚಲ್‌ ಕುಡಿಯೇ’ ಸಾಂಗ್‌ ಬಿಡುಗಡೆಯಾಗಿದೆ. ಚಿತ್ರದ ನಾಯಕನಟಿ ಅಲಿಯಾ ಭಟ್‌ ಮತ್ತು ಗಾಯಕ – ನಟ ದಿಲ್‌ಜಿತ್‌ ದೊಸಾಂಜ್‌ ಈ ಹಾಡಿಗೆ ದನಿಯಾಗಿದ್ದಾರೆ. ಹಾಡು ಅವರ ಮೇಲೆ ಪಿಕ್ಚರೈಸ್‌ ಆಗಿದೆ. ಹರ್ಮನ್‌ಜೀತ್‌ ಸಿಂಗ್‌ ರಚನೆಯ ಹಾಡಿಗೆ ಮನ್‌ಪ್ರೀತ್‌ ಸಿಂಗ್‌ ಸಂಗೀತ ಸಂಯೋಜಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ನಾಯಕಿಗೆ ಧೈರ್ಯ ತುಂಬುವ, ಮಹಿಳಾ ಸಬಲೀಕರಣದ ಸಾಲುಗಳು ಹಾಡಿನಲ್ಲಿವೆ. ‘ಉಡ್ತಾ ಪಂಜಾಬ್‌’ (2016) ಹಿಂದಿ ಚಿತ್ರದಲ್ಲಿ ನಟಿ ಅಲಿಯಾ ಮತ್ತು ಗಾಯಕ – ನಟ ದಿಲ್‌ಜಿತ್‌ ದೊಸಾಂಜ್‌ ‘ಇಕ್‌ ಕುಡಿ’ ಸಾಂಗ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಎಂಟು ವರ್ಷಗಳ ನಂತರ ‘ಜಿಗ್ರಾ’ ಚಿತ್ರದಲ್ಲಿ ಮತ್ತೆ ಜೊತೆಯಾಗಿದ್ದಾರೆ.

ವಾಸನ್‌ ಬಾಲಾ ನಿರ್ದೇಶನದ ಆಕ್ಷನ್‌ – ಅಡ್ವೆಂಚರ್‌ ಚಿತ್ರವಿದು. ವಿದೇಶದಲ್ಲಿ ಸೆರೆಯಾಗಿರುವ ತನ್ನ ಸಹೋದರನನ್ನು (ವೇದಾಂಗ್‌ ರೈನಾ) ರಕ್ಷಿಸಿ ದೇಶಕ್ಕೆ ಕರೆತರುವ ದಿಟ್ಟ ಯುವತಿ ಪಾತ್ರದಲ್ಲಿ ಅಲಿಯಾ ನಟಿಸಿದ್ದಾರೆ. ನಿರ್ದೇಶಕರು ಹೇಳುವಂತೆ ಚಿತ್ರದಲ್ಲಿ ಅಲಿಯಾ ಭರ್ಜರಿ ಆಕ್ಷನ್‌ ಮಾಡಿದ್ದಾರೆ. ಆಕ್ಷನ್‌ ಜೊತೆ ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳೂ ಚಿತ್ರದಲ್ಲಿವೆ. ವಾಸನ್‌ ಬಾಲಾ ಈ ಹಿಂದೆ ‘ಮರ್ದ್‌ ಕೋ ದರ್ದ್‌ ನಹೀ ಹೋತಾ’, ‘ಮೋನಿಕಾ ಓ ಮೈ ಡಾರ್ಲಿಂಗ್‌’ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದರು. ‘ರಮಣ್‌ ರಾಘವ್‌ 2.0’, ‘ಬಾಂಬೆ ವೆಲ್ವೆಟ್‌’ ಹಿಂದಿ ಚಿತ್ರಗಳ ಬರವಣಿಗೆ ವಿಭಾಗದಲ್ಲಿ ಅವರು ಕೆಲಸ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here