ರೋಹಿತ್‌ ಶೆಟ್ಟಿ ನಿರ್ದೇಶನದ ‘ಇಂಡಿಯನ್‌ ಪೊಲೋಸ್‌ ಫೋರ್ಸ್‌’ ಹಿಂದಿ ಸರಣಿ ಟೀಸರ್‌ ಬಿಡುಗಡೆಯಾಗಿದೆ. ಸಿದ್ದಾರ್ಥ್‌ ಮಲ್ಹೋತ್ರಾ, ವಿವೇಕ್‌ ಒಬೆರಾಯ್‌, ಶಿಲ್ಪಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸರಣಿ Amazon prime videoದಲ್ಲಿ 2024ರ ಜನವರಿ 19ರಿಂದ ಸ್ಟ್ರೀಮ್‌ ಆಗಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆಯಲ್ಲಿರುವ ‘ಇಂಡಿಯನ್ ಪೊಲೀಸ್ ಫೋರ್ಸ್’ ಸೀಸನ್-‌1 ಹಿಂದಿ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಸರಣಿಯನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಏಳು ಭಾಗಗಳ ಆಕ್ಷನ್-ಪ್ಯಾಕ್ಡ್ ಸರಣಿಯು ಭಾರತೀಯ ಪೊಲೀಸ್ ಅಧಿಕಾರಿಗಳ ಬದ್ಧತೆಗೆ ಗೌರವ ಸಲ್ಲಿಸುವ ಒಂದು ಪ್ರಕಾರವಾಗಿದೆ. ‘ದೇಶದ ಪ್ರಜೆಗಳನ್ನು ಸುರಕ್ಷಿತವಾಗಿಡಲು ತಮ್ಮ ಕರ್ತವ್ಯದಲ್ಲಿ ಎಲ್ಲವನ್ನೂ ಸಮತೋಲನದಲ್ಲಿರಿಸುವ ಭಾರತೀಯ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ದೇಶಭಕ್ತಿಗೆ ಈ ಸರಣಿಯು ಹೆಮ್ಮೆಯಿಂದ ಗೌರವ ಸಲ್ಲಿಸುತ್ತದೆ’ ಎಂದಿದ್ದಾರೆ ನಿರ್ದೇಶಕ ರೋಹಿತ್‌ ಶೆಟ್ಟಿ. ಸರಣಿಯಲ್ಲಿ ವಿವೇಕ್‌ ಒಬೆರಾಯ್‌, ಶಿಲ್ಪಾ ಶೆಟ್ಟಿ ಕುಂದ್ರಾ, ಶ್ವೇತಾ ತಿವಾರಿ, ನಿಕಿತಿನ್ ಧೀರ್, ರಿತುರಾಜ್ ಸಿಂಗ್, ಮುಖೇಶ್ ರಿಷಿ, ರೋಹಿತ್ ಶೆಟ್ಟಿ ಲಲಿತ್ ಪರಿಮೂ ಭಾರತೀಯ ಪೊಲೀಸ್ ಪಡೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿ, ಸುಶ್ವಂತ್ ಪ್ರಕಾಶ್, ಸಂದೀಪ್ ಸಾಕೇತ್, ಅನುಷಾ ನಂದಕುಮಾರ್, ಆಯುಷ್ ತ್ರಿವೇದಿ, ವಿಧಿ ಘೋಡಗಾಂವ್ಕರ್, ಸಂಚಿತ್ ಬೇದ್ರೆ ಸರಣಿ ಬರವಣಿಗೆ ತಂಡದಲ್ಲಿದ್ದಾರೆ. ಸರಣಿಯು Amazon Primeನಲ್ಲಿ ಜನವರಿ 19, 2024ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here