ಕನ್ನಡಿಗ ನಂದಕಿಶೋರ್‌ ನಿರ್ದೇಶಿಸಿರುವ ‘ವೃಷಭ’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮೋಹನ್‌ ಲಾಲ್‌ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ಸಮರ್ಜಿತ್‌ ಲಂಕೇಶ್‌ ಮತ್ತು ರಾಗಿಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸಾಕಷ್ಟು ಸುದ್ದಿಯಾಗಿದ್ದ ನಂದಕಿಶೋರ್‌ ನಿರ್ದೇಶನದ ‘ವೃಷಭ’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವು ಪ್ರೀತಿ, ವಿಧಿ ಮತ್ತು ತ್ಯಾಗದ ಕಥೆ. ಮೋಹನ್ ಲಾಲ್ ಎರಡು ಭಿನ್ನ ಶೇಡ್‌ಗಳಲ್ಲಿ ಅಭಿನಯಿಸಿದ್ದಾರೆ. ಫ್ಲ್ಯಾಷ್‌ಬ್ಯಾಕ್‌ನಲ್ಲಿ, ಅವರು ರಾಜ ವಿಜಯೇಂದ್ರ ವೃಷಭನಾಗಿ ಕಾಣಿಸಿಕೊಳ್ಳುತ್ತಾರೆ. ಮತ್ತೊಂದು ಶೇಡ್‌ನಲ್ಲಿ ಪ್ರಸ್ತುತ ದಿನಗಳ ಯಶಸ್ವಿ ಉದ್ಯಮಿಯ ಪಾತ್ರ ನಿರ್ವಹಿಸಿದ್ದಾರೆ. ಸಮರ್ಜಿತ್ ಲಂಕೇಶ್ ಅವರ ಮಗನಾಗಿ ನಟಿಸಿದ್ದಾರೆ. ತನ್ನ ತಂದೆಯನ್ನು ರಕ್ಷಿಸಲು ವಿಧಿ ಮತ್ತು ಭಯದೊಂದಿಗೆ ಸಮರ್ಜಿತ್ ಹೋರಾಡುತ್ತಾರೆ. ಟ್ರೇಲರ್ ಹೈ- ಆಕ್ಷನ್‌ ಅಂಶಗಳಿಂದ ಕೂಡಿದೆ. ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ಗರುಡ ರಾಮ್‌ ಟ್ರೇಲರ್ʼನಲ್ಲಿ ಕಾಣಿಸುತ್ತಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನಂದಕಿಶೋರ್‌, ‘ಇದು ಹೃದಯಗಳನ್ನು ಸಂಪರ್ಕಿಸುವ ಕಥೆ. ಪ್ರೀತಿ, ವಿಧಿ ಮತ್ತು ತ್ಯಾಗದಿಂದ ಬಂಧಿತರಾದ ತಂದೆ ಮತ್ತು ಮಗನ ಪ್ರಬಲ ಸಾಹಸಗಾಥೆ. ಮೋಹನ್ ಲಾಲ್ ಸರ್ ಅವರೊಂದಿಗೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕನ ಕನಸು. ಅವರು ಕಥೆಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ವಿನಮ್ರ, ಶಿಸ್ತುಬದ್ಧ ಮತ್ತು ನಿರ್ಭೀತರು. ಈ ಕಥೆಯನ್ನು ತೆರೆಗೆ ತರಲು ಶ್ರಮಿಸಿದ ಇಡೀ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ’ ಎನ್ನುತ್ತಾರೆ. ‘ಇದು ಮಹತ್ವದ ಪ್ಯಾನ್‌ ಇಂಡಿಯಾ ಪ್ರಯೋಗ. ಈ ಅವಕಾಶಕ್ಕಾಗಿ ಮೋಹನ್‌ ಲಾಲ್‌ ಅವರಿಗೆ ಧನ್ಯವಾದ ಹೇಳುತ್ತೇವೆ. ನಂದಕಿಶೋರ್‌ ನೇತೃತ್ವದ ತಂಡ ಚಿತ್ರವನ್ನು ಸೊಗಸಾಗಿ ಕಟ್ಟಿದೆ’ ಎನ್ನುವುದು ನಿರ್ಮಾಪಕರಲ್ಲೊಬ್ಬರಾದ ಏಕ್ತಾ ಕಪೂರ್‌ ಮಾತು. ಇದೇ ಡಿಸೆಂಬರ್‌ 25ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here