ಬುಚ್ಚಿ ಬಾಬು ಸನಾ ನಿರ್ದೇಶಿಸಲಿರುವ ನೂತನ ತೆಲುಗು ಸಿನಿಮಾಗೆ ಎ ಆರ್‌ ರೆಹಮಾನ್‌ ಸಂಗೀತ ಸಂಯೋಜಿಸಲಿದ್ದಾರೆ. ರಾಮ್‌ ಚರಣ್‌ ತೇಜಾ ನಟನೆಯ PAN ಇಂಡಿಯಾ ಚಿತ್ರವಿದು. ‘ಉಪ್ಪೇನಾ’ ಖ್ಯಾತಿಯ ಬುಚ್ಚಿ ಬಾಬು ಅವರ ಈ ಸಿನಿಮಾ ಕುರಿತಾಗಿ ಟಾಲಿವುಡ್‌ನಲ್ಲಿ ಭಾರಿ ನಿರೀಕ್ಷೆಯಿದೆ.

ರಾಮ್ ಚರಣ್ ಅವರ ನೂತನ ತೆಲುಗು ಸಿನಿಮಾವನ್ನು ಬುಚ್ಚಿ ಬಾಬು ಸನಾ ಅವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇದು ರಾಮ್‌ ಚರಣ್‌ ಅವರ 16ನೇ ಚಿತ್ರ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ‘ಸಂಗೀತ ಸಂಯೋಜಕರಾದ ಎ ಆರ್ ರೆಹಮಾನ್ ಅವರು ಈ ಯೋಜನೆಯ ಭಾಗವಾಗಲಿದ್ದಾರೆ’ ಎಂದು ಅಧಿಕೃತವಾಗಿ ಘೋಷಿಸಿದೆ. Pan India ಮಟ್ಟದಲ್ಲಿ ತಯಾರಾಗಲಿರುವ ಈ ಚಿತ್ರವನ್ನು Vriddhi Cinemas ಮತ್ತು Sukumar Writings ಬ್ಯಾನರ್‌ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಲಿದ್ದಾರೆ. Mythri Movie Makers ಚಿತ್ರವನ್ನು ಪ್ರಸ್ತುತ ಪಡಿಸಲಿದೆ. ಬುಚ್ಚಿ ಬಾಬು ಸನಾ ಅವರ ಚೊಚ್ಚಲ ನಿರ್ದೇಶನದ ‘ಉಪ್ಪೇನಾ’ ಸಿನಿಮಾ 69ನೇ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ದೇವಿಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಈ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದವು.

LEAVE A REPLY

Connect with

Please enter your comment!
Please enter your name here