ಹಿರಿಯ ನಟರಾದ ಅಮಿತಾಭ್ ಬಚ್ಚನ್, ರಜನೀಕಾಂತ್ ನಾಳೆ (ಅಕ್ಟೋಬರ್ 14) ನಡೆಯಲಿರುವ ಭಾರತ – ಪಾಕಿಸ್ತಾನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಅರಿಜಿತ್ ಸಿಂಗ್, ಸುಖ್ವಿಂದರ್ ಸಿಂಗ್, ಶಂಕರ್ ಮಹದೇವನ್ ಸಂಗೀತ ಕಾರ್ಯಕ್ರಮ ನೀಡಲಿದ್ದು, ವಿಶೇಷ ಅತಿಥಿಗಳಿಗೆ ಗೋಲ್ಡನ್ ಪಾಸ್ಗಳನ್ನು ನೀಡಲಾಗಿದೆ.
ಭಾರತೀಯ ಚಿತ್ರರಂಗದ ದಿಗ್ಗಜರುಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್ ಶನಿವಾರ ಸಂಜೆ (ಅ.14) ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ ಪಂದ್ಯ ವೀಕ್ಷಿಸಲಿದ್ದಾರೆ. ಪಂದ್ಯಕ್ಕೂ ಮುನ್ನ ನಡೆಯುವ ವಿಶೇಷ ಸಮಾರಂಭದಲ್ಲಿ ಜನಪ್ರಿಯ ಸಂಗೀತಗಾರ ಅರಿಜಿತ್ ಸಿಂಗ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಗಾಯಕರಾದ ಸುಖ್ವಿಂದರ್ ಸಿಂಗ್ ಮತ್ತು ಶಂಕರ್ ಮಹಾದೇವನ್ ಕೂಡ ಸಮಾರಂಭದಲ್ಲಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸೆಲೆಬ್ರಿಟಿಗಳಿಗೆ ಪಂದ್ಯವನ್ನು ವೀಕ್ಷಿಸಲು ಗೋಲ್ಡನ್ ಟಿಕೆಟ್ಗಳನ್ನು ನೀಡಿದ್ದಾರೆ. ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ಗೋಲ್ಡನ್ ಟಿಕೆಟ್ ಪಡೆದಿದ್ದಾರೆ. ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
https://x.com/BCCI/status/1712505328590614724?s=20
ವಿಶ್ವಕಪ್ 2023ರಲ್ಲಿ ಎರಡೂ ಕ್ರಿಕೆಟ್ ತಂಡಗಳು ಉತ್ತಮ ಪ್ರದರ್ಶನ ನೀಡಿವೆ. ಭಾರತವು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ಜಯ ಗಳಿಸಿದೆ. 2023ರ ಕ್ರಿಕೆಟ್ ವಿಶ್ವಕಪ್ನಲ್ಲಿ ನಾಲ್ಕು ಅಂಕಗಳು ಮತ್ತು ಆಕರ್ಷಕ ರನ್ರೇಟ್ನೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನವು ನೆದರ್ಲ್ಯಾಂಡ್ ಮತ್ತು ಶ್ರೀಲಂಕಾ ವಿರುದ್ಧ ಜಯಗಳಿಸುವ ಮೂಲಕ ನಾಲ್ಕು ಅಂಕಗಳು ಮತ್ತು ಉತ್ತಮ ರನ್ರೇಟ್ನೊಂದಿಗೆ ಮೂರನೇ ಸ್ಥಾನ ಗಳಿಸಿಕೊಂಡಿದೆ. ಅಮಿತಾಬ್ ಬಚ್ಚನ್ ಅವರು ‘Kalki 2898 AD’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ರಜಿನೀಕಾಂತ್ ಅವರು ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು 2024ರ ಪೊಂಗಲ್ ಹಬ್ಬದಂದು ಬಿಡುಗಡೆಯಾಗಲಿದೆ.
https://x.com/BCCI/status/1712515164657037630?s=20