ಶಿವ ನಿರ್ದೇಶನದ ಬಹುನಿರೀಕ್ಷಿತ ತಮಿಳು ಸಿನಿಮಾ ‘ಕಂಗುವಾ’ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಸೂರ್ಯ ಮತ್ತು ಬಾಬಿ ಡಿಯೋಲ್ ಎರಡು ಬುಡಕಟ್ಟುಗಳ ರಾಜರುಗಳಾಗಿ ಕಾಣಿಸಿಕೊಂಡಿದ್ದಾರೆ. ಸೂರ್ಯ ಅಭಿನಯದ ಮೊದಲ Pan India ಸಿನಿಮಾ ಇದಾಗಿದ್ದು, ಚಿತ್ರದ ಪ್ರೋಮೋ ಮತ್ತು ಪೋಸ್ಟರ್‌ಗಳು ಸೂರ್ಯ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

ಸೂರ್ಯ ಮೂಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಕಂಗುವಾ’ ತಮಿಳು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ‘ಸಿರುತೈ’ ಖ್ಯಾತಿಯ ಶಿವ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಸೂರ್ಯ ಬುಡಕಟ್ಟು ರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾವು ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿಯ ಮೊದಲ ತಮಿಳು ಚಿತ್ರವಾಗಿದೆ. ಟೀಸರ್‌ನಲ್ಲಿ ಸೂರ್ಯ ಮತ್ತು ಬಾಬಿ ಡಿಯೋಲ್ ಎರಡು ಬುಡಕಟ್ಟುಗಳ ರಾಜರುಗಳಾಗಿ ಕಾಣಿಸಿಕೊಂಡಿದ್ದು, ಪರಸ್ಪರ ಹೋರಾಡುವ ವಿರುದ್ದ ಗುಂಪಿನ ಮುಖ್ಯಸ್ಥರಾಗಿ ಕಾದಾಡುವುದನ್ನು ಕಾಣಬಹುದು. ಟೀಸರ್‌ನಲ್ಲಿ ಭಯಾನಕ ಹೋರಾಟದ ಬುಡುಕಟ್ಟು ಜನರನ್ನು ಹಾಗೂ ಭಯಾನಕ ಪ್ರಾಣಿಗಳನ್ನು ಸಹ ಕಾಣಬಹುದು.

ಸಿನಿಮಾಗೆ ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ, ನಿಶಾದ್ ಯೂಸೂಫ್‌ ಸಂಕಲನ, ಮದನ್‌ ಕರ್ಕಿ ಸಂಭಾಷಣೆ ಬರೆದಿದ್ದಾರೆ. ಉಳಿದ ಪಾತ್ರವರ್ಗವನ್ನು ಸದ್ಯದಲ್ಲೇ ಬಹಿರಂಗ ಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾವನ್ನು Studio Green ಬ್ಯಾನರ್‌ ಅಡಿಯಲ್ಲಿ ನಿರ್ಮಿಸುತ್ತಿದ್ದು, ಈ ನಿರ್ಮಾಣ ಸಂಸ್ಥೆಯು ಉನ್ನತ ವಿತರಣಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಸೂರ್ಯ ಅಭಿನಯದ ಮೊದಲ Pan India ಸಿನಿಮಾ ಇದಾಗಿದ್ದು, ಚಿತ್ರದ ಪ್ರೋಮೋ ಮತ್ತು ಪೋಸ್ಟರ್‌ಗಳು ಸೂರ್ಯ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಚಿತ್ರವು ಬುಡಕಟ್ಟು ಜನಾಂಗಗಳ ದೃಶ್ಯಗಳನ್ನು ಹೆಚ್ಚಾಗಿ ಹೊಂದಿದ್ದು, ಸಿನಿಮಾ ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ 3D ಮತ್ತು IMAX ಸ್ವರೂಪಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here