ಬಿ ಆರ್‌ ರಾಜಶೇಖರ್‌ ನಿರ್ಮಾಣ, ನಿರ್ದೇಶನದ ‘ಬ್ಯಾಕ್‌ ಬೆಂಚರ್ಸ್‌’ ಸಿನಿಮಾದ ‘Yello Yello’ ಸಾಂಗ್‌ ಬಿಡುಗಡೆಯಾಗಿದೆ. ಈ ಹಾಡಿಗೆ ನಕುಲ್‌ ಅಭಯಂಕರ್‌ ಸಂಗೀತ ಸಂಯೋಜಿಸಿದ್ದು, ಅವರೇ ದನಿಯಾಗಿದ್ದಾರೆ. ಕಾಲೇಜು ದಿನಮಾನದ ಕತೆಯಲ್ಲಿ ಹಲವು ಯುವ ನಟ -ನಟಿಯರು ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಮುಹೂರ್ತ ಆಚರಿಸಿಕೊಂಡ ದಿನಗಳಿಂದಲೂ ‘ಬ್ಯಾಕ್‌ ಬೆಂಚರ್ಸ್‌’ ಸಿನಿಮಾ ಸುದ್ದಿಯಲ್ಲಿದೆ. ಕಾಲೇಜಿನ ಕತೆಗಳನ್ನು ಕನ್ನಡದಲ್ಲಿ ಹೊಸದೇನಲ್ಲ. ಆದರೆ ತಮ್ಮ ಈ ಸಿನಿಮಾದಲ್ಲಿ ಮನೋರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಕತೆ ಹೇಳುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಬಿ ಆರ್‌ ರಾಜಶೇಖರ್‌. ಇದೀಗ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಪ್ರೊಮೋಷನ್‌ ಅಂಗವಾಗಿ ಚಿತ್ರದ ‘ಯಲ್ಲೋ ಯಲ್ಲೋ’ ಸಾಂಗ್‌ ರಿಲೀಸ್‌ ಆಗಿದೆ. ನಕುಲ್‌ ಅಭಯಂಕರ್‌ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಅವರೇ ದನಿಯಾಗಿದ್ದಾರೆ. ಕಾಲೇಜಿನಿಂದ ಸಸ್ಪೆಂಡ್‌ ಆದ ಯುವಕರು ಜಾಲಿ ರೈಡ್‌ಗೆ ತೆರಳಿ ಮೋಜು – ಮಸ್ತಿ ಮಾಡುವ ಸನ್ನಿವೇಶಗಳು ಹಾಡಿನಲ್ಲಿವೆ.

ಚಿತ್ರದ ನಾಯಕನಟರೊಲ್ಲಬ್ಬರಾದ ರಂಜನ್‌ ಮಾತನಾಡಿ, ‘ನಿರ್ದೇಶಕ ರಾಜಶೇಖರ್ ಅವರು ನಮಗೆಲ್ಲಾ ನೀಡಿದ ಪ್ರೋತ್ಸಾಹ ಅಷ್ಟಿಷ್ಟಲ್ಲ. ನಮ್ಮಗೆಲ್ಲಾ ಇದು ಮೊದಲ ಚಿತ್ರ. ಆದರೆ ನಮಗೆ ನಟನೆ ಹೊಸತಲ್ಲ‌‌. ನಾವೆಲ್ಲ ನಟನೆ ಕಲಿತು ಬಂದಿರುವವರು. ಈಗ ಚಿತ್ರಮಂದಿರಕ್ಕೆ ಹೆಚ್ಚಾಗಿ ಜನರು ಬರುತ್ತಿಲ್ಲ. ಆ ಮಾತನ್ನು ಸುಳ್ಳು ಮಾಡುವ ಪ್ರಯತ್ನವನ್ನು ನಾವು ಮಾಡುತ್ತೇವೆ‌. ವಿನೂತನ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ‌. ಚಿತ್ರಮಂದಿರಕ್ಕೆ ಬಂದ ಮೇಲು ನಮ್ಮ ಚಿತ್ರ ನೀವು ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ ಎಂಬ ಭರವಸೆ ನೀಡುತ್ತೇವೆ’ ಎನ್ನುತ್ತಾರೆ. ಜತಿನ್ ಆರ್ಯನ್, ಆಕಾಶ್ ಎಂ ಪಿ, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್ ಹೆಚ್, ಮನೋಜ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಧಾರಿಗಳು.

‘ಇದೊಂದು ಮನೋರಂಜನೆಯೇ ಪ್ರಮುಖವಾಗಿರುವ ಕಾಲೇಜು ಸ್ಟೋರಿ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ‌. ‌ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಹೊಸಬರು. ಹೊಸತಂಡಕ್ಕೆ ನಿಮ್ಮ ಪ್ರೋತ್ಸಾಹವಿರಲಿ’ ಎಂದು ಸಹಕಾರ ಕೋರಿದರು. ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನವಿದೆ.

LEAVE A REPLY

Connect with

Please enter your comment!
Please enter your name here