ಭಾರತದ ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆಗಳಲ್ಲೊಂದಾದ Lyca ಪ್ರೊಡಕ್ಷನ್ಸ್‌ ಸ್ಯಾಂಡಲ್‌ವುಡ್‌ ಪ್ರವೇಶಿಸಿದೆ. ಅವರ ನಿರ್ಮಾಣದ ಚೊಚ್ಚಲ ಸಿನಿಮಾದಲ್ಲಿ ನಿಖಿಲ್‌ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅವರ ತಾತ, ಮಾಜಿ ಪ್ರಧಾನಿ ದೇವೇಗೌಡರಿಂದ ನಿನ್ನೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಲಕ್ಷ್ಮಣ್‌ ನಿರ್ದೇಶನದ ಈ ಸಿನಿಮಾದ ನಾಯಕಿ ಯುಕ್ತಿ ತರೇಜಾ.

ನಿಖಿಲ್‌ ಕುಮಾರಸ್ವಾಮಿ ತೆರೆಗೆ ಮರಳುತ್ತಿದ್ದಾರೆ. ಪ್ರತಿಷ್ಠಿತ Lyca Productions ಬ್ಯಾನರ್‌ ನಿಖಿಲ್‌ಗೆ ಚಿತ್ರ ನಿರ್ಮಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ‘ರೋಮಿಯೋ ಜೂಲಿಯೆಟ್’, ‘ಬೋಗನ್’ ಮತ್ತು ‘ಭೂಮಿ’ ತಮಿಳು ಸಿನಿಮಾಗಳ ನಿರ್ದೇಶಕ ಲಕ್ಷ್ಮಣ್‌ ನೂತನ ಸಿನಿಮಾದ ಸಾರಥ್ಯ ವಹಿಸುತ್ತಿದ್ದಾರೆ. ಯುಕ್ತಿ ತರೇಜಾ ಚಿತ್ರದ ನಾಯಕಿ. ನಿನ್ನೆ ಚಿತ್ರದ ಮುಹೂರ್ತ ನೆರವೇರಿದ್ದು, ನಿಖಿಲ್‌ ಅವರ ತಾತ, ಮಾಜಿ ಪ್ರಧಾನಿ ದೇವೇಗೌಡರು ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಖಿಲ್‌ ತಂದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಜರಿದ್ದರು. ‘ಕಾಂತಾರ’, ‘ವಿಕ್ರಾಂತ್‌ ರೋಣ’ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ಅಜನೀಶ್‌ ಲೋಕನಾಥ್‌ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಸಿನಿಮಾಗೆ ವಂಶಿ ಪಚ್ಚಿಪುಲುಸು ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಇರಲಿದೆ.

ಎ ಸುಭಾಸ್ಕರನ್ ಒಡೆತನದ Lyca Productions ಈ ಹಿಂದೆ ರಜನಿಕಾಂತ್, ವಿಜಯ್, ಧನುಷ್, ವಿಕ್ರಮ್, ಮಮ್ಮೂಟಿ, ನಯನತಾರಾ, ಜಾಹ್ನವಿ ಕಪೂರ್, ಅಕ್ಷಯ್ ಕುಮಾರ್ ಅವರಂತಹ ನಟರ ಸಿನಿಮಾಗಳನ್ನು ನಿರ್ಮಿಸಿದೆ. ಈಗ ಸಂಸ್ಥೆ ತನ್ನ ನಿರ್ಮಾಣ ವ್ಯಾಪ್ತಿಯನ್ನು ವಿಸ್ತರಿಸಿದ್ದು, ನಟ – ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರವನ್ನು ಆಯ್ಕೆ ಮಾಡಿದೆ. Lyca ಸಂಸ್ಥೆ ‘ರಾಮ್ ಸೇತು’, ‘ಗುಡ್ ಲಕ್ ಜೆರ್ರಿ’ ಹಿಂದಿ ಚಲನಚಿತ್ರಗಳನ್ನು ನಿರ್ಮಿಸಿದೆ ಹಾಗೂ ‘ಪುಷ್ಪ: ದಿ ರೈಸ್’, ‘RRR’, ‘ಸೀತಾ ರಾಮಂ’, ಆರ್ ಚಂದ್ರು ಅವರ ‘ಕಬ್ಜಾ’ ಚಿತ್ರಗಳ ತಮಿಳು ಡಬ್ಬಿಂಗ್ ಆವೃತ್ತಿಗಳನ್ನು ವಿತರಿಸಿದೆ.

Previous article‘ಚಂದ್ರಯಾನ’ ಯಶಸ್ಸು | ISRO ಸಾಧನೆಗೆ ಸಿನಿತಾರೆಯರ ಮೆಚ್ಚುಗೆ, ಪ್ರಶಂಸೆ
Next article20 ವರ್ಷಗಳ ನಂತರ ಮತ್ತೆ ಜೊತೆಯಾದ ಪ್ರೇಮ್‌ – ದರ್ಶನ್‌ | KVN ಪ್ರೊಡಕ್ಷನ್ಸ್‌ ಸಿನಿಮಾ

LEAVE A REPLY

Connect with

Please enter your comment!
Please enter your name here