ಮೊನ್ನೆ ಮುಕ್ತಾಯಗೊಂಡ ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಖ್ಯಾತ ನಟ ವಡಿವೇಲು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ. ‘ಮಾಮನ್ನನ್‌’ ಚಿತ್ರದ ನಟನೆಗೆ ಅವರಿಗೆ ಈ ಗೌರವ ಸಂದಿದೆ. ನಿರ್ದೇಶಕ ವೆಟ್ರಿಮಾರನ್ ಅವರಿಗೆ ‘ವಿಡುತಲೈ’ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ನೀಡಲಾಗಿದೆ.

21ನೇ ಚೆನ್ನೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಡಿಸೆಂಬರ್‌ 14ರಿಂದ ಆರಂಭವಾಗಿ ಮೊನ್ನೆ ಡಿಸೆಂಬರ್ 21ಕ್ಕೆ ಮುಕ್ತಾಯವಾಗಿದೆ. 57 ದೇಶಗಳ ಸುಮಾರು 126 ಚಲನಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನದಲ್ಲಿ ವಡಿವೇಲು ಅವರಿಗೆ ‘ಅತ್ಯುತ್ತಮ ನಟ’ (‘ಮಾಮನ್ನನ್‌’ ಸಿನಿಮಾ) ಪ್ರಶಸ್ತಿ ಸಂದಿದೆ. PVR – Inox ಜೊತೆಗೆ ಇಂಡೋ ಸಿನಿ ಅಪ್ರಿಸಿಯೇಷನ್ ​​ಫೌಂಡೇಶನ್ ಆಯೋಜಿಸಿದ್ದ ಈ ಚಲನಚಿತ್ರೋತ್ಸವವು ತಮಿಳು ವಿಭಾಗದಲ್ಲಿ ಆಯ್ಕೆಯಾದ ಹನ್ನೆರಡು ಚಿತ್ರಗಳಲ್ಲಿ ಒಂಬತ್ತು ಸಿನಿಮಾಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿದೆ. ಈ ವರ್ಷ ಮೊದಲ ಬಾರಿಗೆ ವಿಶ್ವ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ಚಲನಚಿತ್ರ ನಿರ್ಮಾಪಕ ಯುಗಿ ಸೇತು ನೇತೃತ್ವದ ತೀರ್ಪುಗಾರರ ತಂಡವು ಚಲನಚಿತ್ರಗಳನ್ನು ನಿರ್ಣಯಿಸಿದೆ.

ನಿರ್ದೇಶಕ ವೆಟ್ರಿಮಾರನ್ ಅವರಿಗೆ ‘ವಿಡುತಲೈ’ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ನೀಡಲಾಗಿದೆ. ವೆಟ್ರಿಮಾರನ್ ಅವರು ಈ ಕುರಿತು, ‘ಮುಖ್ಯವಾಹಿನಿಯ ಆಕರ್ಷಣೆಗಳ ನಡುವೆ ಸಮತೋಲನ ಸಾಧಿಸುವುದು ಸವಾಲಿನ ಸಂಗತಿಯಾಗಿದೆ ಮತ್ತು ಅಂತಹ ಪ್ರಶಸ್ತಿಗಳು ಕಲಾವಿದರನ್ನು ಪ್ರೋತ್ಸಾಹಿಸುತ್ತವೆ’ ಎಂದಿದ್ದಾರೆ. ಮಂಥೀರ ಮೂರ್ತಿ ನಿರ್ದೇಶನದ ‘ಅಯೋಧಿ’ ಅತ್ಯುತ್ತಮ ತಮಿಳು ಚಿತ್ರ ಮತ್ತು ಪ್ರೀತಿ ಅಸ್ರಾನಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದರು. ಕಾರ್ತಿಕ್ ಸೀನಿವಾಸನ್ ನಿರ್ದೇಶನದ ‘ಉಡನ್‌ಪಾಲ್’ ಎರಡನೇ ಅತ್ಯುತ್ತಮ ತಮಿಳು ಚಿತ್ರವಾಗಿ ಆಯ್ಕೆಯಾಗಿದೆ. ಪೋರ್ತೋಝಿಲ್ ಅತ್ಯುತ್ತಮ ಸಂಕಲನ ಮತ್ತು ಛಾಯಾಗ್ರಹಣಕ್ಕಾಗಿ ಎರಡು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಲ ಕಲಾವಿದೆ ನೀಲಾ ‘ಸೆಂಬಿ’ ಚಿತ್ರದಲ್ಲಿನ ಪಾತ್ರಕ್ಕಾಗಿ ವಿಶೇಷ ಪ್ರಶಸ್ತಿ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ 57 ದೇಶಗಳ ಸುಮಾರು 126 ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ICAF (Indo Cine Appreciation Foundation) ಅಧ್ಯಕ್ಷ ಎಸ್ ಕಣ್ಣನ್ ಮತ್ತು ಉತ್ಸವದ ನಿರ್ದೇಶಕ ಮತ್ತು ICAF ಪ್ರಧಾನ ಕಾರ್ಯದರ್ಶಿ ಇ ತಂಗರಾಜ್ ಉತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Connect with

Please enter your comment!
Please enter your name here