ಸಾಮರಸ್ಯ, ಸಹಬಾಳ್ವೆ ಕುರಿತ ಕಥಾಹಂದರದ ‘ಕುದ್ರು’ ಕರಾವಳಿ ನೇಟಿವಿಟಿಯ ಸಿನಿಮಾ. ಭಾಸ್ಕರ್ ನಾಯ್ಕ್ ರಚಿಸಿ, ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ನಾಳೆ (ಅಕ್ಟೋಬರ್ 13) ತೆರೆಕಾಣುತ್ತಿದೆ.
‘ಕುದ್ರು ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬದವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕತೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ’ ಎನ್ನುತ್ತಾರೆ ‘ಕುದ್ರು’ ಚಿತ್ರದ ನಿರ್ದೇಶಕ ಭಾಸ್ಕರ್ ನಾಯ್ಕ್. ಕರಾವಳಿ ನೇಟಿವಿಟಿಯ ಚಿತ್ರಕ್ಕೆ ಉಡುಪಿ, ಮಲೆನಾಡು, ಗೋವಾ ಮತ್ತು ಸೌದಿ ಅರೇಬಿಯಾದಲ್ಲಿ(ರಿಗ್) ಚಿತ್ರೀಕರಣ ನಡೆದಿದೆ. ಡೈನ ಡಿಸೋಜ, ಫರ್ಹಾನ್, ಹರ್ಷಿತ್ ಶೆಟ್ಟಿ, ಗಾಡ್ವಿನ್, ಪ್ರಿಯಾ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಧಾರಿಗಳು. ಶ್ರೀ ಪುರಾಣಿಕ್ ಛಾಯಾಗ್ರಹಣ, ಪ್ರತೀಕ್ ಕುಂದು ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನವಿರುವ ಚಿತ್ರಕ್ಕಿದೆ. ಉಡುಪಿ ಕೃಷ್ಣ ಆಚಾರ್ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ನಾಳೆ (ಅಕ್ಟೋಬರ್ 13) ಸಿನಿಮಾ ತೆರೆಕಾಣುತ್ತಿದೆ.