ಮನೋಜ್‌ ಕುಮಾರ್‌ ಮತ್ತು ರಂಜನಿ ರಾಘವನ್‌ ಜೋಡಿಯ ‘ಟಕ್ಕರ್‌’ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಪ್ರೊಮೋಷನ್‌ ಕೆಲಸಗಳು ಶುರುವಾಗಿವೆ. ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ ಸೈಬರ್‌ ಕ್ರೈಂ ಚಿತ್ರದ ಕಥಾವಸ್ತು.

ಕೋವಿಡ್‌ನಿಂದಾಗಿ ಎರಡು ಬಾರಿ ‘ಟಕ್ಕರ್‌’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಮೊದಲ ಲಾಕ್‌ಡೌನ್‌ಗೂ ಮುನ್ನವೇ ಸಿನಿಮಾ ತೆರೆಗೆ ಬರಬೇಕಿತ್ತು. ಸದ್ಯ ಕೊರೋನಾ ಸಮಸ್ಯೆ ಬಹುತೇಕ ಬಗೆಹರಿದಿದೆ. ಏಕಾಏಕಿ ನೂರಾರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿರುವುದರಿಂದ ಥಿಯೇಟರ್‌ ಸಮಸ್ಯೆ ಎದುರಾಗಿದೆ. ಈ ನಡುವೆ ʻಟಕ್ಕರ್ʼ ಚಿತ್ರವನ್ನು ವ್ಯವಸ್ಥಿತವಾಗಿ ತೆರೆಗೆ ತರಲು ನಿರ್ಮಾಪಕ ನಾಗೇಶ್ ಕೋಗಿಲು ತೀರ್ಮಾನಿಸಿದ್ದಾರೆ. ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ಜೊತೆಯಾಗಿ ನಟಿಸಿರುವ ಸಿನಿಮಾದಲ್ಲಿ ಸೈಬರ್ ಕ್ರೈಂಗೆ ಸಂಬಂಧಿಸಿದ ಕಥಾವಸ್ತು ಇದೆ. ಥ್ರಿಲ್ಲರ್ ಅಂಶಗಳ ಜೊತೆಗೆ ಭರ್ಜರಿ ಆಕ್ಷನ್, ಚೆಂದದ ಹಾಡುಗಳು ಕೂಡಾ ಚಿತ್ರದ ಭಾಗವಾಗಿವೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಡ್ಯುಯೆಟ್ ಸಾಂಗ್ ಕೇಳುಗರನ್ನು ಸೆಳೆದಿದೆ. ಟೈಟಲ್ ಸಾಂಗ್ ಸೇರಿದಂತೆ ಉಳಿದ ಎರಡು ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ಜೊತೆಗೆ ಟ್ರೈಲರ್‌ ಕೂಡಾ ಶೀಘ್ರದಲ್ಲೇ ಹೊರಬರಲಿದೆ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ನಾಗೇಶ್ ಕೋಗಿಲು ಅವರು ಯೋಜನೆ ರೂಪಿಸುತ್ತಿದ್ದಾರೆ. ಮಲೇಷ್ಯಾದಲ್ಲಿ ಒಂದು ಹಾಡನ್ನು ಚಿತ್ರೀಕರಿಸಿದ್ದು ಉಳಿದ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರಿನಲ್ಲಿ ನಡೆದಿದೆ. ವಿ.ರಘುಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ, ವಿಲಿಯಮ್ಸ್‌ ಡೇವಿಡ್‌ ಛಾಯಾಗ್ರಹಣ ಚಿತ್ರಕ್ಕಿದೆ. ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಸೌರವ್ ಲೋಕಿ, ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಹಿಂದೆ ‘ಹುಲಿರಾಯ’ ಚಿತ್ರವನ್ನು ನಿರ್ಮಿಸಿದ್ದ ಕೆ.ಎನ್.ನಾಗೇಶ್ ಕೋಗಿಲು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Previous articleಲೂಸ್ ಮಾದ ಈಗ ‘ಕಿರಿಕ್ ಶಂಕರ್’; ಹೊಸ ಹುಡುಗಿ ಅದ್ವಿಕ ಹಿರೋಯಿನ್‌
Next articleಟೀಸರ್‌ | ಅಭಿಷೇಕ್‌ ಬಚ್ಚನ್‌ ‘ದಸ್ವೀ’; ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾಸ್‌ನಲ್ಲಿ ಚಿತ್ರ

LEAVE A REPLY

Connect with

Please enter your comment!
Please enter your name here