ಅಮಿತಾಭ್‌ ಬಚ್ಚನ್‌ ಮತ್ತು ರಾಣಿ ಮುಖರ್ಜಿ ಅಭಿನಯದ ಮಹತ್ವದ ಹಿಂದಿ ಸಿನಿಮಾ ‘ಬ್ಲ್ಯಾಕ್‌’ ಫೆಬ್ರವರಿ 4ರಿಂದ Netflixನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಸಂಜಯ್‌ ಲೀಲಾ ಬನ್ಸಾನಿ ನಿರ್ದೇಶನದ ಸಿನಿಮಾ 2005ರಲ್ಲಿ ತೆರೆಕಂಡಿತ್ತು.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಬ್ಲ್ಯಾಕ್‌’ (2005) ಹಿಂದಿ ಸಿನಿಮಾ ಫೆಬ್ರವರಿ 4ರಿಂದ Netflixನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಮತ್ತು ರಾಣಿ ಮುಖರ್ಜಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಅಭಿನಯಕ್ಕಾಗಿ ಅಮಿತಾಬ್‌ ಬಚ್ಚನ್‌ ಅವರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಸಂಜಯ್ ಲೀಲಾ ಬನ್ಸಾಲಿ ರಚನೆಯ ಅದ್ಭುತ ಚಿತ್ರಗಳಲ್ಲಿ ಇದೂ ಒಂದು. ಸಿನಿಮಾ ಬಿಡುಗಡೆಯಾಗಿ ಈ ಹೊತ್ತಿಗೆ 19 ವರ್ಷ. ಹೆಲೆನ್ ಕೆಲ್ಲರ್ ಅವರ ಜೀವನದ ಕಥೆಯನ್ನು ಆಧರಿಸಿರುವ ‘ಬ್ಲ್ಯಾಕ್’ನಲ್ಲಿ ರಾಣಿ ಮುಖರ್ಜಿ ಕುರುಡು ಮತ್ತು ಕಿವುಡ ಯುವತಿಯಾಗಿ ಅಭಿನಯಿಸಿದ್ದರು. ಆಕೆಯ ಶಿಕ್ಷಕನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದರು.

ಚಿತ್ರದ ಟ್ರೇಲರ್ ಹಂಚಿಕೊಂಡ ಅಮಿತಾಬ್‌ ಬಚ್ಚನ್ ತಮ್ಮ X ಖಾತೆಯಲ್ಲಿ ”ಬ್ಲ್ಯಾಕ್’ ಬಿಡುಗಡೆಯಾಗಿ 19 ವರ್ಷಗಳು ಕಳೆದಿವೆ. ಮತ್ತು ಇಂದು ನಾವು Netflixನಲ್ಲಿ ಅದರ ಮೊದಲ ಡಿಜಿಟಲ್ ಬಿಡುಗಡೆಯನ್ನು ಆಚರಿಸುತ್ತಿದ್ದೇವೆ. ದೇಬ್ರಾಜ್ ಮತ್ತು ಮಿಚೆಲ್ ಅವರ ಜೀವನವು ನಮಗೆಲ್ಲರಿಗೂ ಸ್ಫೂರ್ತಿಯಾಗಿ ಸಹಾನುಭೂತಿ ತುಂಬುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ಬರೆದಿದ್ದಾರೆ. ಈ ಚಲನಚಿತ್ರವು ಹಿಂದಿ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಸಬ್ಯಸಾಚಿ ಮುಖರ್ಜಿಯವರ ವಸ್ತ್ರ ವಿನ್ಯಾಸಕ್ಕಾಗಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಬನ್ಸಾಲಿ ನಿರ್ದೇಶನದ ವೆಬ್ ಸರಣಿ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಈ ವರ್ಷ Netflixನಲ್ಲಿ ಸ್ಟ್ರೀಮ್‌ ಆಗಲಿದೆ. ಸರಣಿಯಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here