ಕಿರಣ್‌ ಸುಬ್ರಹ್ಮಣಿ ನಿರ್ದೇಶನದ ‘ಸಿ’ ಸಿನಿಮಾದ ಹಾಡೊಂದನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ. ಇದು ತಂದೆ – ಮಗಳ ಬಾಂಧ್ಯವವನ್ನು ಹೇಳುವ ಸಾಂಗ್‌. ಫ್ಯಾಮಿಲಿ ಡ್ರಾಮಾ ಜೊತೆ ಮೆಡಿಕಲ್‌ ಮಾಫಿಯಾ ಕುರಿತೂ ನಿರ್ದೇಶಕರು ಚಿತ್ರದಲ್ಲಿ ಹೇಳುತ್ತಿದ್ದಾರೆ.

ಶ್!..ಸೈ..ಎ..ಓಂ…‌ ಹೀಗೆ ಒಂದೇ ಹೆಸರಿನ ಶೀರ್ಷಿಕೆಯ ಕೆಲವು ಸ್ಯಾಂಡಲ್‌ವುಡ್ ಸಿನಿಮಾಗಳ ಪಟ್ಟಿಗೆ ‘ಸಿ’ ಹೊಸ ಸೇರ್ಪಡೆ. ಕಿರಣ್‌ ಸುಬ್ರಹ್ಮಣಿ ನಿರ್ದೇಶನದ ಈ ಸಿನಿಮಾ ಸದ್ದಿಲ್ಲದೆ ತೆರೆಗೆ ಸಿದ್ಧವಾಗಿದೆ. ಚಿತ್ರದ ಪ್ರೊಮೋಷನ್‌ ಶುರುವಾಗಿದ್ದು ಮೊದಲ ಹಂತದಲ್ಲಿ ತಂದೆ – ಮಗಳ ಬಾಂಧವ್ಯದ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಕಿರಣ್ ಸುಬ್ರಹ್ಮಣಿ ನಿರ್ದೇಶನದ ಜೊತೆ ಸಿನಿಮಾದ ನಾಯಕನಾಗಿಯೂ ನಟಿಸಿದ್ದಾರೆ. ನಟ ಧ್ರುವ ಸರ್ಜಾ ಈ ಹಾಡನ್ನು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಕಂದಾ… ಕಂದಾ…’ ಎಂದು ಶುರುವಾಗುವ ಈ ಹಾಡನ್ನು ಹೃದಯಶಿವ ರಚಿಸಿದ್ದು ವಾಸುಕಿ ವೈಭವ್‌ ಹಾಡಿದ್ದಾರೆ.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಆದರೆ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಈ ಚಿತ್ರದೊಂದಿಗೆ ಸ್ವತಂತ್ರ್ಯ ನಿರ್ದೇಶಕನಾಗುತ್ತಿದ್ದಾರೆ. ಎಜಿಎಸ್ ಪ್ರೊಡಕ್ಷನ್ಸ್‌ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ.

LEAVE A REPLY

Connect with

Please enter your comment!
Please enter your name here