ತಮ್ಮ ಸಿನಿಮಾದ ನಾಯಕಿ ತೇಜಸ್ವಿನಿ ಶರ್ಮ ಅವರ ಬರ್ತ್‌ಡೇಗೆಂದು ‘ಫುಲ್‌ಮೀಲ್ಸ್‌’ ಚಿತ್ರತಂಡ ನೂತನ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಜೊತೆಗೆ ಚಿತ್ರತಂಡದವರು ಒಂದು ಪ್ರೊಮೋಷನಲ್‌ ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಎನ್‌ ವಿನಾಯಕ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಲಿಖಿತ್‌ ಶೆಟ್ಟಿ ಮತ್ತು ಖುಷಿ ರವಿ ಇದ್ದಾರೆ.

ವಿನಾಯಕ ನಿರ್ದೇಶನದ ‘ಫುಲ್‌ಮೀಲ್ಸ್‌’ ತಂಡದವರು ಚಿತ್ರದ ನಾಯಕಿ ತೇಜಸ್ವಿನಿ ಶರ್ಮ ಅವರ ಬರ್ತ್‌ಡೇ ನಿಮಿತ್ತ ಪೋಸ್ಟರ್‌ ಮತ್ತು ಪ್ರೊಮೋಷನಲ್‌ ವೀಡಿಯೋ ಬಿಡುಗಡೆ ಮಾಡಿದ್ದಾರೆ. ‘ಸಂಕಷ್ಟಕರ ಗಣಪತಿ’, PRK ಪ್ರೊಡಕ್ಷನ್ಸ್‌ನ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ ಚಿತ್ರವಿದು. ತೇಜಸ್ವಿನಿ ಶರ್ಮ ಚಿತ್ರದಲ್ಲಿ ಮೇಕಪ್ ಆರ್ಟಿಸ್ಟ್ ಪಾತ್ರವನ್ನು ಮಾಡಿದ್ದು, ಮೇಕಪ್ ಆರ್ಟಿಸ್ಟ್‌ಗಳ ಬವಣೆಯನ್ನು ತೋರಿಸುವ ವಿಡಂಬನೆ ಮತ್ತು ಮನೋರಂಜನೆಯಿಂದ ಕೂಡಿದ ವೀಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ.

‘ಫುಲ್ ಮೀಲ್ಸ್’ ಚಿತ್ರದಲ್ಲಿ ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ನಡೆಯುವ ಕಥಾ ಹಂದರವಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದ್ದು ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿ ಚಿತ್ರತಂಡ. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಚಿತ್ರದ ಇಬ್ಬರು ನಾಯಕಿಯರು. ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ಚಂದ್ರಕಲಾ ಮೋಹನ್, ರಾಜೇಶ್ ನಟರಂಗ, ರವಿ ಶಂಕರ್ ಗೌಡ, ಸುಜಯ್ ಶಾಸ್ತ್ರಿ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗುರುಕಿರಣ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಹರೀಶ್ ರಾಜಣ್ಣ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಚಿತ್ರಕ್ಕಿದೆ.

Previous article‘ತೋತಾಪುರಿ 2’ ಟ್ರೈಲರ್‌ | ವಿಜಯ ಪ್ರಸಾದ್‌ ನಿರ್ದೇಶನದಲ್ಲಿ ಜಗ್ಗೇಶ್‌, ಧನಂಜಯ
Next articleತಮಿಳು ನಟ ವಿಜಯ್‌ ಆಂಥೋನಿ ಪುತ್ರಿ ಆತ್ಮಹತ್ಯೆ | ಸಾಂತ್ವನ ಹೇಳಿದ ಕಾಲಿವುಡ್‌

LEAVE A REPLY

Connect with

Please enter your comment!
Please enter your name here