ಪ್ರತಿವರ್ಷ ಭಾರತದ 20ಕ್ಕೂ ಹೆಚ್ಚು ಭಾಷೆಗಳಲ್ಲಿ, ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರ ಸಿನೆಮಾಗಳು ತಯಾರಾಗುತ್ತವೆ. ಇವೆಲ್ಲವೂ ಕೂಡ ಪ್ರದರ್ಶನ ಕಾಣುವ ಮೊದಲು, ಸರ್ಕಾರದ ಅಂಗ ಸಂಸ್ಥೆ CBFC(Central Board of Film Certification) ನಿಂದ ಪ್ರಮಾಣ ಪತ್ರ ಪಡೆಯಬೇಕು. ಈ ಸಂಸ್ಥೆ Cinematograph Act 1952 ಮತ್ತು 1983ರ Cinematograph (Certification) Rules ಅನುಸಾರ ಸಿನೆಮಾಗಳನ್ನು ವೀಕ್ಷಿಸಿ, ಪ್ರಮಾಣ ಪತ್ರ ನೀಡುತ್ತದೆ. ದೇಶದ ಜನರಿಗೆ ಆರೋಗ್ಯಕರ ಮನರಂಜನೆ ಮತ್ತು ಶಿಕ್ಷಣ ಸಿಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು CBFC ಹೇಳುತ್ತದೆ.

CBFC ಯಾವೆಲ್ಲ Certificate ಕೊಡುತ್ತದೆ

ಸಾಮಾನ್ಯವಾಗಿ CBFC ಯವರು ಸಿನೆಮಾಗಳಿಗೆ U, UA, A ಮತ್ತು S ಎಂಬ ವರ್ಗದಲ್ಲಿ ಪ್ರಮಾಣ ಪತ್ರ ನೀಡುತ್ತಾರೆ. “U” ಅಂದರೆ ನಿರ್ಬಂಧ ರಹಿತ ಸಾರ್ವಜನಿಕ ಪ್ರದರ್ಶನ, “A” ವಯಸ್ಕರಿಗೆ ಮಾತ್ರ, “U/A” ಸರ್ಟಿಫಿಕೇಟ್ ಸಿನೆಮಾಗಳನ್ನು 12 ವರ್ಷದೊಳಗಿನ ಮಕ್ಕಳು ನೋಡಬೇಕೇ ಬೇಡವೆ ಎಂಬುದನ್ನು ಪೋಷಕರು ನಿರ್ಧರಿಸಬೇಕು ಮತ್ತು ವಿಶೇಷ ವರ್ಗದ ನೋಡುಗರಿಗೆ ಮಾತ್ರ ಸೀಮಿತವಾದ ಸಿನೆಮಾಗಳಿಗೆ “S” ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ನಿಯಮಗಳು, ಸಿನೆಮಾ ಹಾಲ್ ಮತ್ತು Multiplex ಗಳಲ್ಲಿ ಬಿಡುಗಡೆಯಾಗುವ ಹಾಗೂ Cable TV ಮೂಲಕ ಪ್ರಸಾರವಾಗುವ ಎಲ್ಲ ಸಿನೆಮಾಗಳಿಗೆ ಅನ್ವಯಿಸುತ್ತದೆ.

OTT ವೇದಿಕೆಗಳ ಜನಪ್ರಿಯತೆ

ಆದರೆ, ಕಳೆದ ಮೂರು ನಾಲ್ಕು ತಿಂಗಳಿನಿಂದ ಇಡೀ ದೇಶದಲ್ಲಿ ಕೊರೋನ ಕಾಯಿಲೆ ಹಾವಳಿ ನಡೆಸುತ್ತಿದೆ. ಇದೇ ಕಾರಣದಿಂದ ದೇಶದ ಎಲ್ಲ ಚಿತ್ರಮಂದಿರಗಳೂ ಬಾಗಿಲು ಮುಚ್ಚಿವೆ. ಮನೆಯಿಂದ ಹೊರಗೆ ಹೆಜ್ಜೆಯಿಡುವುದೇ ಅಪಾಯಕಾರಿ ಅನ್ನುವಂತಾಗಿರುವ ಈ ಸಂದರ್ಭದಲ್ಲಿ, ದೇಶದ ಹೆಚ್ಚಿನ ಜನರು ಮನರಂಜನೆಗಾಗಿ OTT platformಗಳ ಮೊರೆ ಹೋಗಿದ್ದಾರೆ. ಭಾರತದಲ್ಲಿ  ಕಳೆದ ಕೆಲವು ವರ್ಷಗಳಿಂದಲೂ Netflix, Amazon Prime, Hotstarನಂಥ ಹಲವಾರು OTT ವೇದಿಕೆಗಳು ಅಸ್ತಿತ್ವದಲ್ಲಿವೆ. ಇವುಗಳು Digital ಮಾರ್ಗದಲ್ಲಿ ನೇರವಾಗಿ ವೀಕ್ಷಕರಿಗೆ ಮನರಂಜನೆ ಸೇವೆ ಒದಗಿಸುತ್ತಿವೆ.

ಇತ್ತೀಚಿನ ಸನ್ನಿವೇಶದಲ್ಲಿ OTTಗಳಿಗೆ ಚಂದಾದಾರರಾಗುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಸದುಪಯೋಗ ಪಡೆದುಕೊಂಡ OTT ವೇದಿಕೆಗಳು, ವೀಕ್ಷಕರನ್ನು ತಮ್ಮತ್ತ ಸೆಳೆಯಲು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ.

ಜನಪ್ರಿಯ ಬಾಲಿವುಡ್ ಸಿನೆಮಾಗಳು ಸೇರಿದಂತೆ, ದೇಶದ ಇತರೆ ಹಲವು ಭಾಷೆಗಳ ಹೊಸ ಸಿನೆಮಾಗಳನ್ನು ಖರೀದಿಸಿ ತಮ್ಮ OTT ವೇದಿಕೆ ಮೂಲಕ ನೇರವಾಗಿ ಬಿಡುಗಡೆ ಮಾಡಿ ವೀಕ್ಷರಿಗೆ ತಲುಪಿಸುತ್ತಿವೆ.

OTT ಗಳ ಬಗ್ಗೆ ಅಪಸ್ವರ

ದೇಶದಲ್ಲಿ OTT ಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಅವುಗಳ ವಿರುದ್ಧ ಅಪಸ್ವರವೂ ಕೇಳಿಬರುತ್ತಿದೆ. OTT ಗಳ ಮೂಲಕ ಪ್ರಸಾರವಾಗುವ ಕೆಲವು ಸಿನೆಮಾಗಳು ಮತ್ತಿತರ ದೃಶ್ಯಾವಳಿಗಳಲ್ಲಿ ಅಶ್ಲೀಲತೆ ಮತ್ತು ಹಿಂಸಾಚಾರದ ದೃಶ್ಯಗಳಿವೆ. ಅದೇರೀತಿ, Aha ಎಂಬ OTT Platform ನಲ್ಲಿ ಪ್ರಸಾರವಾಗುತ್ತಿದ್ದ  ‘Sin’ ಎಂಬ Web ಸರಣಿ adult content ಹೊಂದಿತ್ತು ಮತ್ತು Amazon Prime Video ದಲ್ಲಿ ಪ್ರಸಾರವಾಗುತ್ತಿದ್ದ ‘Patal Lok’ web series ನಲ್ಲಿ ಆಘಾತಕಾರಿ ದೃಶ್ಯಗಳಿದ್ದವು. ಇದಲ್ಲದೆ, ಕೆಲವು Web series ಗಳಲ್ಲಿನ ಸಂಭಾಷಣೆಗಳು, ದೇಶದ ನಾಯಕರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂಬ ಆರೋಪಗಳೂ ಕೇಳಿಬಂದಿವೆ.

Netflix ನಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸರಣಿ Sacred Gamesನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ದೆಹಲಿ High court ನಲ್ಲಿ ದೂರು ದಾಖಲಿಸಲಾಗಿತ್ತು. ಭಾರತದಲ್ಲಿನ OTT ವೇದಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿ Justice for Rights ಎಂಬ NGO ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಹತ್ತಿತ್ತು.

ಕೆಲ ದಿನಗಳ ಹಿಂದೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘’OTT ಮತ್ತಿತರ Video streaming platformಗಳಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಇವನ್ನು Censor ಮಾಡಬೇಕು’’ ಎಂದು ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು.

OTT ಗಳ Censorಗೆ ಆಗ್ರಹ

ಇವೆಲ್ಲ ಬೆಳವಣಗೆಗಳ ನಂತರ, OTT ಗಳಲ್ಲಿ Adult content, Vulgar ಅನ್ನಿಸುವ ಸಂಭಾಷಣೆ, ಜಾತಿ-ಧರ್ಮಗಳ ವಿಚಾರಗಳನ್ನು ತೋರಿಸುವಾಗ ಸೂಕ್ಷ್ಮತೆ ಅನುಸರಿಸದಿರುವುದು ಇತ್ಯಾದಿ ಎಡವಟ್ಟುಗಳು, ದೇಶದ ಸಂಸ್ಕೃತಿಗೆ ಧಕ್ಕೆ ಉಂಟು ಮಾಡಬಹುದು ಹಾಗೂ ಸಮಾಜದಲ್ಲಿ ಅಶಾಂತಿಗೂ ಕಾರಣ ಆಗಬಹುದು. ಹೀಗಾಗಿ, OTT ವೇದಿಕೆಗಳನ್ನೂ ಕೂಡ ಸೆನ್ಸಾರ್ ಮಾಡಬೇಕು ಅನ್ನುವ ಮಾತು ಕೇಳಿ ಬಂತು.

ಆದರೆ, ಸಿನೆಮಾ ರಂಗದವರು ಮತ್ತು OTT ವೇದಿಕೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಸಹಜವಾಗಿ, ತನ್ನ ಅಭಿವ್ಯಕ್ತಿ ಮತ್ತು ಕ್ರಿಯಾಶೀಲತೆಗಳ ಮೇಲೆ ಬೇರೆಯವರು ನಿಯಂತ್ರಣ ಹೇರುವುದು ಯಾವುದೇ ಸಿನೆಮಾ ತಯಾರಕನಿಗೂ ಇಷ್ಟವಿಲ್ಲ.

OTT ಗಳಿಂದ ಸ್ವಪ್ರೇರಿತ ನೀತಿ ಸಂಹಿತೆ

ಈ ಮಧ್ಯೆ Netflix, Disney+Hotstar, Sony LIV ಸೇರಿದಂತೆ ಬಹುತೇಕ OTT platformಗಳು, ನಾವು self-censorship ಅನುಸರಿಸುತ್ತೇವೆ ಎಂದು ಹೇಳಿಕೆ ನೀಡಿದವು. ಅದರಂತೆ, ಕಳೆದ ವರ್ಷ ಜನವರಿಯಲ್ಲಿ, ತಾವೇ ಒಟ್ಟಿಗೆ ಸೇರಿ ‘Code of Best Practises for Online Curated Content Providers,’ ಎಂಬ ನೀತಿ ಸಂಹಿತೆ ರೂಪಿಸಿಕೊಂಡಿದ್ದವು. ಇದರ ಮೂಲಕ, ತಮ್ಮಲ್ಲಿ ಪ್ರಸಾರವಾಗುವ ಸಿನೆಮಾ, ಧಾರಾವಾಹಿ ಮತ್ತಿತರ ಕಾರ್ಯಕ್ರಮಗಳನ್ನು ಸ್ವಪ್ರೇರಿತವಾಗಿ ನಿಯಂತ್ರಿಸುವುದಾಗಿ ಹೇಳಿಕೊಂಡಿದ್ದವು.

DCCC ಗೆ OTT ವೇದಿಕೆಗಳ ವಿರೋಧ

ಇದಾದ ಕೆಲವೇ ದಿನಗಳ ಬಳಿಕ (IAMA) Internet and Mobile Association of Indiaದವರು (DCCC) Digital Content Complaint Council ಎಂಬ ಸಂಸ್ಥೆ ರೂಪಿಸಿದರು ಮತ್ತು ಎಲ್ಲ OTT ವೇದಿಕೆಗಳು ಇದರ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು ಎಂದು ಹೇಳಲಾಯಿತು. ಆದರೆ, ದೇಶದಲ್ಲಿರುವ ಬಹುತೇಕ OTT ವೇದಿಕೆಗಳು ಇದನ್ನು ವಿರೋಧಿಸಿದವು. ಇದು creative art ಮತ್ತು consumer choice ನಡುವಿನ balance ಅಥವ ಸಮತೋಲನವನ್ನು ಹಾಳು ಮಾಡುತ್ತದೆ ಎಂದು OTT ವೇದಿಕೆಗಳು ವಿರೋಧ ವ್ಯಕ್ತಪಡಿಸಿದವು.

‘’DCCC ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಅನ್ನುವುದು, ನಮ್ಮ ಮೇಲೆ ಅನಗತ್ಯ ನಿರ್ಬಂಧ ಹೇರುತ್ತದೆ. ಇದನ್ನು ನಾವು ತಿರಸ್ಕರಿಸುತ್ತೇವೆ’’ ಎಂದು Amazon Prime Video ನವರು ಹೇಳಿದ್ದರು. Amazon Prime Video ನಿರ್ದೇಶಕ ಮತ್ತು Content ವಿಭಾಗದ ಮುಖ್ಯಸ್ಥ ವಿಜಯ್ ಸುಬ್ರಮಣಿಯಮ್, ‘’ನಾವು ಈ ದೇಶದಲ್ಲಿರುವ ಎಲ್ಲ ಕಾನೂನುಗಳನ್ನು ಪಾಲಿಸುತ್ತಿದ್ದೇವೆ. ನಮ್ಮಲ್ಲಿ ಪ್ರಸಾರವಾಗುವ ಎಲ್ಲವನ್ನೂ ಆಂತರಿಕ ವ್ಯವಸ್ಥೆಯ ಮೂಲಕ ಕಟ್ಟುನಿಟ್ಟಾಗಿ ಪರಿಶೀಲನೆ ಮಾಡುತ್ತೇವೆ. ಹೀಗಾಗಿ, ಯಾವುದೇ ರೀತಿಯ ಹೊರಗಿನ ಸಂಸ್ಥೆ Censor ಮಾಡುವ ಅಗತ್ಯವಿಲ್ಲ’’ ಎಂದಿದ್ದರು.

ಇದೆಲ್ಲ ಆದ ಬಳಿಕ, ಇದೇ 2020ರ ಮಾರ್ಚ್ 3ರಂದು ಮಾತನಾಡಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಈಗಾಗಲೇ China, France ಮತ್ತು Singapore ನಂಥ ದೇಶಗಳಲ್ಲಿ OTT streaming platformಗಳ ನಿಯಂತ್ರಣಾ ವ್ಯವಸ್ಥೆ ಇದೆ ಎಂದು ಸಮರ್ಥಿಸಿಕೊಂಡಿದ್ದರು ಮತ್ತು DCCC(Digital Content Complaint Council) ನವರು ರೂಪಿಸಿರುವ ನಿಯಮಾವಳಿಗೆ ಎಲ್ಲ OTT ವೇದಿಕೆಗಳೂ ಒಪ್ಪಿಗೆ ಸೂಚಿಸಲು ಆಗ್ರಹಿಸಿ, ಅವುಗಳಿಗೆ 100 ದಿನಗಳ ಗಡುವನ್ನೂ ನೀಡಿದ್ದರು. ಇದೀಗ ಈ ಗಡುವು ಮುಗಿದಿದೆ. ಸರ್ಕಾರವಾಗಲಿ OTTಗಳಾಗಲಿ ಈ ಬಗ್ಗೆ ತುಟಿ ಬಿಚ್ಚಿ ಮಾತನಾಡಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 40ಕ್ಕೂ ಹೆಚ್ಚು OTT ವೇದಿಕೆಗಳು, ಸರ್ಕಾರದ ನಿಲುವಿಗೆ ಯಾವ ರೀತಿ ಪ್ರತಿಕ್ರಿಯಿಸಲಿವೆ ಅನ್ನುವುದನ್ನು ಕಾಯ್ದು ನೋಡಬೇಕಾಗಿದೆ.

LEAVE A REPLY

Connect with

Please enter your comment!
Please enter your name here