ಜೆನ್ನಿಫರ್‌ ವಿಂಗೆಟ್‌, ಕರಣ್‌ ವಾಹಿ, ರೀಮ್‌ ಶೇಖ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರೈಸಿಂಘಾನಿ v/s ರೈಸಿಂಘಾನಿ’ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಅನಿರುದ್ಧ ರಾಜ್‌ ಡೇರ್ಕರ್‌ ನಿರ್ದೇಶನದ ಸರಣಿ ಸದ್ಯದಲ್ಲೇ Sony LIVನಲ್ಲಿ ಸ್ಟ್ರೀಮ್‌ ಆಗಲಿದೆ.

ಅನಿರುದ್ಧ ರಾಜ್‌ ಡೇರ್ಕರ್ ನಿರ್ದೇಶನದ ‘ರೈಸಿಂಘಾನಿ v/s ರೈಸಿಂಘಾನಿ’ ಹಿಂದಿ ಸರಣಿಯ ಟೀಸರ್ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಜೆನ್ನಿಫರ್ ವಿಂಗೆಟ್, ಕರಣ್ ವಾಹಿ, ರೀಮ್ ಶೇಖ್ ಮತ್ತು ಸಂಜಯ್ ನಾಥ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ವಿಭಿನ್ನ ಸಿದ್ಧಾಂತಗಳು ಮತ್ತು ವಿಧಾನಗಳೊಂದಿಗೆ ಯುವ ವೃತ್ತಿಪರ ವಕೀಲರು ಮತ್ತು ಅನುಭವಿ ವಕೀಲರ ಅಭಿಪ್ರಾಯಗಳ ಸುತ್ತ ಸುತ್ತುತ್ತದೆ. ಟೀಸರ್‌ನಲ್ಲಿ ಅನುಷ್ಕಾ ರೈಸಿಂಘಾನಿ (ವಿಂಗರ್) ತನ್ನ ಸಹೋದ್ಯೋಗಿ ವಿರಾಟ್ ಚೌಧರಿ (ವಾಹಿ)ಗೆ ದೊಡ್ಡ ಪ್ರಕರಣವೊಂದರ ಉಸ್ತುವಾರಿ ವಹಿಸಿಕೊಡುವುದನ್ನು ತೋರಿಸಲಾಗಿದೆ. ಸರಣಿಯನ್ನು ಅನುರಾಧಾ ತಿವಾರಿ ಬರೆದಿದ್ದು, ಭಾವನಾ ಶ್ರೇಷ್ಠ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸ್ಮೃತಿ ಶಿಂಧೆ ಮತ್ತು ಹರವಿಂದರ್ ಅರೋರಾ ನಿರ್ಮಿಸಿದ್ದಾರೆ. ಸದ್ಯದಲ್ಲೇ ಸರಣಿ Sony LIVನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here