ಚಿರಂಜೀವಿ ಅಭಿನಯದ ಮಾಸ್ ಆಕ್ಷನ್ – ಎಂಟರ್‌ಟೇನರ್ ತೆಲುಗು ಸಿನಿಮಾ ‘ಭೋಳ ಶಂಕರ್’ ಟೀಸರ್ ಬಿಡುಗಡೆಯಾಗಿದೆ. ಮೆಹರ್ ರಮೇಶ್ ನಿರ್ದೇಶನದ ಚಿತ್ರವಿದು. ಟೀಸರ್‌ನಲ್ಲಿ ಚಿರಂಜೀವಿ ಸ್ಟೈಲ್, ಸ್ಕ್ರೀನ್ ಪ್ರಸೆನ್ಸ್ ಭರ್ಜರಿಯಾಗಿದ್ದು, ಚಿತ್ರದ ಇತರೆ ಪಾತ್ರಗಳ ಪರಿಚಯವೂ ಇದೆ. ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.
ಮೆಹರ್ ರಮೇಶ್ ನಿರ್ದೇಶನದಲ್ಲಿ ಚಿರಂಜೀವಿ ನಟಿಸುತ್ತಿರುವ ‘ಭೋಳ ಶಂಕರ’ ತೆಲುಗು ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇತ್ತೀಚೆಗೆ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಪ್ರೊಮೋಷನ್ ಶುರು ಮಾಡಲಾಗಿತ್ತು. ಈಗ ಟೀಸರ್ ಬಿಡುಗಡೆಯಾಗಿದೆ. ಟೀಸರ್ ತುಂಬಾ ಚಿರಂಜೀವಿ ಪಾತ್ರಕ್ಕೆ ಹೈಪ್ ಕೊಡುವಂಥ ಸನ್ನಿವೇಶಗಳಿವೆ. ಚಿರಂಜೀವಿ ಖಳರ ಗೋಡೌನ್‌ಗೆ ಎಂಟ್ರಿ ಕೊಡುವ ಆಕ್ಷನ್ ಸೀನ್‌ನೊಂದಿಗೆ ಟೀಸರ್ ಓಪನ್ ಆಗುತ್ತದೆ. ಭರ್ಜರಿ ಆಕ್ಷನ್ ಜೊತೆಗೆ ಡೈಲಾಗ್‌ಗಳು ಅಭಿಮಾನಿಗಳನ್ನು ರಂಜಿಸುತ್ತವೆ. ಚಿರಂಜೀವಿ ವಿಂಟೇಜ್ ಅವತಾರ ಮತ್ತು ಕಾಮಿಡಿ ಟೈಮಿಂಗ್ ಹೈಲೈಟ್. ‘ತೆಲುಗು ರಾಜ್ಯಗಳಲ್ಲಿ ನನಗೆ ಬೌಂಡರಿ ಇಲ್ಲ’ ಎನ್ನುವ ಚಿರಂಜೀವಿ ಡೈಲಾಗ್ ಆಂಧ್ರ ಮತ್ತು ತೆಲಂಗಾಣ ಅಭಿಮಾನಿಗಳಿಗೆ ಮುದ ನೀಡಲಿದೆ. ಟೀಸರ್‌ನಲ್ಲಿ ಚಿತ್ರದ ಇತರೆ ಪ್ರಮುಖ ಪಾತ್ರಗಳ ಪರಿಚಯವೂ ಇದೆ. ತಮನ್ನಾ, ಕೀರ್ತಿ ಸುರೇಶ್, ಸುಶಾಂತ್ ಬಂದು ಹೋಗುತ್ತಾರೆ. Dubley ಛಾಯಾಗ್ರಹಣ, ಮಹತಿ ಸ್ವರ ಸಾಗರ್ ಸಂಗೀತ ಚಿತ್ರಕ್ಕಿದೆ. AK ಎಂಟರ್‌ಟೇನ್‌ಮೆಂಟ್ಸ್ ನಿರ್ಮಾಣದ ಅದ್ಧೂರಿ ಸಿನಿಮಾ ಆಗಸ್ಟ್ 11ರಂದು ತೆರೆಕಾಣಲಿದೆ.