‘ಪುಷ್ಪ 2’ ಸಿನಿಮಾ ಸದ್ದು ಮಾಡುತ್ತಿದೆ. ಏಪ್ರಿಲ್‌ 8ರ ಅಲ್ಲು ಅರ್ಜುನ್‌ ಜನ್ಮದಿನಕ್ಕೆ ‘ಪುಷ್ಪ 2’ ಸಿನಿಮಾದ ಟೀಸರ್‌ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಇಂದು ಟೀಸರ್‌ನ ಗ್ಲಿಂಪ್ಸ್‌ ವೀಡಿಯೋ ಹೊರಬಿದ್ದಿದೆ.

ಅಲ್ಲು ಅರ್ಜುನ್ ಮತ್ತು ಸುಕುಮಾರ್ ಜೋಡಿಯ ‘ಪುಷ್ಪ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿತ್ತು. ಕಳೆದ ವರ್ಷದ ತೆರೆಕಂಡ ಸಿನಿಮಾ ಜಗತ್ತಿನಾದ್ಯಂತ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ಚಿತ್ರದಲ್ಲಿ ಅಲ್ಲು ನಟನೆ, ಸುಕುಮಾರ್‌ ಮೇಕಿಂಗ್‌ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸಹಜವಾಗಿಯೇ ಚಿತ್ರದ ಸೀಕ್ವೆಲ್‌ ‘ಪುಷ್ಟ 2’ ನಿರೀಕ್ಷೆ ಹೆಚ್ಚಿಸಿದೆ. ಚಿತ್ರತಂಡದಿಂದ ಹೊಸ ಅಪ್ ಡೇಟ್ ಬಂದಿದೆ. ‘ಪುಷ್ಪ-2’ ಶೂಟಿಂಗ್ ಭರದಿಂದ ಸಾಗಿದ್ದು, ಅರ್ಜುನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್‌ ಕೊಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ನಿರ್ದೇಶಕ ಸುಕುಮಾರ್ ತಂಡ ಸಣ್ಣದೊಂದು ವಿಡಿಯೋ ತುಣುಕು ರಿವೀಲ್ ಮಾಡಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಬುಲೆಟ್‌ನಿಂದ ಗಾಯಗೊಂಡ ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಎಲ್ಲೆಡೆ ಪುಷ್ಪನಿಗಾಗಿ ಹುಡುಗಾಟ ನಡೆಸಲಾಗುತ್ತಿದೆ. ಪುಷ್ಪ ಎಲ್ಲಿ ಎಂಬ ನಿರೀಕ್ಷೆಯಿಂದಿಗೆ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಅಲ್ಲು ಅರ್ಜುನ್‌ ಬರ್ತ್‌ಡೇ (ಏಪ್ರಿಲ್ 8) ಹಿಂದಿನ ದಿನ ಸಂಜೆ ಏಪ್ರಿಲ್‌ 7ಕ್ಕೆ ಫುಲ್ ಟೀಸರ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ. ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ಸ್‌ನಡಿ ಮೂಡಿಬರುತ್ತಿರುವ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here