ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಗರ್ಭಿಣಿಯಾಗಿದ್ದರೂ ಶೂಟಿಂಗ್‌ನಲ್ಲಿ ಆಕ್ಟೀವ್‌ ಆಗಿರುವ ನಟಿಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಈಗ, ಇದೇ ನಟಿ ಸಹ ಕಲಾವಿದರ ಜೊತೆ ಇರುವ ಕ್ಯೂಟ್‌ ಫೋಟೋ ಒಂದು ವೈರಲ್‌ ಆಗಿದೆ.

ಸ್ಟಾರ್‌ ಕಪಲ್‌ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಕೆಲವು ದಿನಗಳ ಹಿಂದೆಯಷ್ಟೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ದೀಪಿಕಾ ಗರ್ಭಿಣಿಯಾಗಿರುವ ವಿಷಯವನ್ನು ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದಾದ ಸ್ವಲ್ಪ ಸಮಯದ ನಂತರ ನಟಿ ದೀಪಿಕಾ, ‘ಸಿಂಗಂ ಅಗೈನ್‌’ ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ಕಾಣಿಸಿಕೊಂಡರು. ಖಾಕಿ ತೊಟ್ಟ ಗ್ಲಾಮರಸ್‌ ಲೇಡಿ ಸಿಂಗಂ ಗೆಟಪ್‌ನಲ್ಲಿ ದರ್ಶನ ಕೊಟ್ಟರು. ನಟಿಯ ಈ ಲುಕ್‌ ನೋಡಿದ ಅಭಿಮಾನಿಗಳು ಹುಬ್ಬೇರಿಸಿದ್ದರು. ಇನ್ನೂ ದೀಪಿಕಾರ ಕ್ರೇಜಿ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದ ನಿರ್ದೇಶಕ ರೋಹಿತ್‌ ಶೆಟ್ಟಿ ನನ್ನ ರಿಯಲ್‌ ಲೈಫ್‌ ಹೀರೋ ದೀಪಿಕಾ ಅಂತ ಬರೆದುಕೊಂಡು ಶಾಕ್‌ ಕೊಟ್ಟಿದ್ದರು. ಇದರ ನಡುವೆಯೇ ಈಗ ದೀಪಿಕಾರ ಕ್ಯೂಟ್‌ ಫೋಟೋ ಒಂದು ಈಗ ವೈರಲ್‌ ಆಗಿದೆ.

‘ಸಿಂಗಂ ಅಗೈನ್‌’ ಸಿನಿಮಾದ ಸೆಟ್‌ನಲ್ಲಿ ಕೆಲಸ ಮಾಡುವ ಸಹಕಲಾವಿದರ ಜೊತೆ ನಟಿ ದೀಪಿಕಾ ಪಡುಕೋಣೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ನಟಿಗೆ ಸ್ಕೆಚ್‌ ಹಾಗೂ ಹೂಗುಚ್ಛ ನೀಡಿದ್ದಾರೆ. ದೀಪಿಕಾ ಜೊತೆಗಿನ ಆ ಸೆಲ್ಫಿಯನ್ನು ಸಹಕಲಾವಿದರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ದ ಒನ್ಲಿ ಲೇಡಿ ಸಿಂಗಂ. ನಿಮ್ಮನ್ನ ಭೇಟಿ ಮಾಡಿದ್ದು ಖುಷಿಯಾಯಿತು. ಇದು ನನ್ನ ಜೀವನದ ಬೆಸ್ಟ್‌ ಡೇ. ನಾನು ಕೊಟ್ಟ ಸ್ಕೆಚ್‌ ನೋಡಿ ನೀವು ಕೊಟ್ಟ ಸ್ಮೈಲ್‌ ಹಾಗೂ ಹೊಗಳಿದ ರೀತಿಯ ಇನ್ನೂ ನೆನಪಿದೆ. ಭವಿಷ್ಯದಲ್ಲಿ ನಿಮ್ಮ ಭೇಟಿ ಮತ್ತೆ ಮತ್ತೆ ಆಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ.

ರೋಹಿತ್‌ ಶೆಟ್ಟಿ ನಿರ್ದೇಶನದ ಸಿಂಗಂ ಹಿಟ್‌ ಸರಣಿಯ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಲೇಡಿ ಸಿಂಗಂ ‘ಶಕ್ತಿ ಶೆಟ್ಟಿ’ ಹೆಸರಿನ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಆರಂಭವಾಗಿದ್ದು, ಭರದಿಂದ ಸಾಗುತ್ತಿದೆ. ದೀಪಿಕಾ ಜೊತೆಗೆ ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌, ಅರ್ಜುನ್‌ ಕಪೂರ್‌, ಟೈಗರ್‌ ಶ್ರಾಫ್‌ ಹಾಗೂ ಕರೀನಾ ಕಪೂರ್‌ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ನಾಗ್‌ ಅಶ್ವಿನ್‌ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದೀಪಿಕಾ, ಪ್ರಭಾಸ್‌ ಮತ್ತು ಅಮಿತಾಭ್‌ ಬಚ್ಚನ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here