ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಕುರಿತ ವೆಬ್‌ ಸರಣಿ ತಯಾರಾಗುವ ಸೂಚನೆ ಸಿಕ್ಕಿದೆ. ವಿನಯ್‌ ಸೀತಾಪತಿ ರಚಿಸಿರುವ ‘ಹಾಫ್‌ ಲಯನ್‌’ ಕೃತಿಯನ್ನು ಆಧರಿಸಿ ಅದೇ ಶಿರ್ಷಿಕೆಯಡಿ ಬಾಲಿವುಡ್‌ ನಿರ್ದೇಶಕ ಪ್ರಕಾಶ್‌ ಝಾ ಸರಣಿ ನಿರ್ದೇಶಿಸಲಿದ್ದಾರೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಪ್ರಕಾಶ್‌ ಝಾ ನಿರ್ದೇಶನದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಕುರಿತ ವೆಬ್‌ ಸರಣಿ ತಯಾರಾಗಲಿದೆ. ಅಪ್ಲೌಸ್‌ ಎಂಟರ್‌ಟೇನ್‌ಮೆಂಟ್‌ ಮತ್ತು ಆಹಾ ಸ್ಟುಡಿಯೋ ಜೊತೆಗೂಡಿ ಈ ಪ್ರಾಜೆಕ್ಟ್‌ ರೂಪಿಸಲು ಮುಂದಾಗಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗಲಿರುವ ಸರಣಿ 2023ರಲ್ಲಿ ಸ್ಟ್ರೀಮ್‌ ಆಗಲಿದೆ. ವಿನಯ್‌ ಸೀತಾಪತಿ ಅವರು ನರಸಿಂಹರಾವ್‌ ಕುರಿತು ರಚಿಸಿರುವ ‘ಹಾಫ್‌ ಲಯನ್‌’ ಕೃತಿಯನ್ನು ಆಧರಿಸಿ ಅದೇ ಶೀರ್ಷಿಕೆಯಡಿ ಸರಣಿ ತರುವ ಯೋಜನೆಯಲ್ಲಿದ್ದಾರೆ ಪ್ರಕಾಶ್‌ ಝಾ.

“ನೈಜ ಘಟನೆ, ಜೀವನಾಧಾರಿತ ವಸ್ತುವನ್ನು ತೆರೆಗೆ ತರುವುದು ಯಾವಾಗಲೂ ಎಕ್ಸೈಟಿಂಗ್‌ ಆಗಿರುತ್ತದೆ. ಇಂದಿನ ಭಾರತ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವ್ಯಕ್ತಿತ್ವಗಳ ಬಗ್ಗೆ ಇಂದಿನ ಪೀಳಿಗೆಯವರು ಅರಿಯುವುದು ಅವಶ್ಯ. ಪಿ.ವಿ.ನರಸಿಂಹರಾವ್‌ ಅವರಂತಹ ಮೇರು ವ್ಯಕ್ತಿಗಳಿಂದ ನಾವು ಕಲಿಯಬೇಕಾದದ್ದು ತುಂಬಾ ಇದೆ” ಎನ್ನುತ್ತಾರೆ ಝಾ. 1921, ಜೂನ್‌ 28ರಂದು ಜನಿಸಿದ ಪಾಮುಲಪಾರ್ತಿ ವೆಂಕಟ ನರಸಿಂಹರಾವ್‌ 1991ರಿಂದ 1996ರ ಅವಧಿಯಲ್ಲಿ ದೇಶದ ಪ್ರಧಾನಿಯಾಗಿದ್ದರು. ನಿರ್ದೇಶಕ ಪ್ರಕಾಶ್‌ ಝಾ ಅವರು ಇತ್ತೀಚೆಗೆ ಎಂಎಕ್ಸ್‌ ಪ್ಲೇಯರ್‌ ಓಟಿಟಿ ಪ್ಲಾಟ್‌ಫಾರ್ಮ್‌ಗೆ ‘ಆಶ್ರಮ್‌’ ವೆಬ್‌ ಸರಣಿ ರೂಪಿಸಿದ್ದರು. ಭೋಪಾಲ್‌ನಲ್ಲಿ ಅವರು ಸರಣಿಯ ಮೂರನೇ ಸೀಸನ್‌ ಚಿತ್ರೀಕರಣ ನಡೆಸುತ್ತಿದ್ದಾಗ ಶೂಟಿಂಗ್‌ ಸೆಟ್‌ ಮೇಲೆ ಹಿಂದೂ ಸಂಘಟನೆಗಳಿಂದ ದಾಳಿಯಾಗಿತ್ತು.

LEAVE A REPLY

Connect with

Please enter your comment!
Please enter your name here