ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಡೆವಿಲ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ! ಇಂದು (feb 16) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿತ್ರದ ಹೀರೋ ದರ್ಶನ್‌ರಿಗೆ ಇದು ಚಿತ್ರತಂಡದ ಉಡುಗೊರೆ.

‘ಮಿಲನ’ ಪ್ರಕಾಶ್‌ ನಿರ್ಮಾಣ – ನಿರ್ದೇಶನದ ‘ಡೆವಿಲ್‌’ ಸಿನಿಮಾದ ಟೀಸರ್‌ ಇಂದು (feb 16) ಬಿಡುಗಡೆಯಾಗಿದೆ. ಇದು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿತ್ರದ ಹೀರೋ ದರ್ಶನ್‌ಗೆ ಚಿತ್ರತಂಡದ ಉಡುಗೊರೆ. ಶ್ರೀ ಜೈಮಾತಾ ಕಂಬೈನ್ಸ್‌ ನಿರ್ಮಾಣದ ಚಿತ್ರದ ಟೀಸರ್‌ ‘ಸರಿಗಮ’ ಆಡಿಯೋದಲ್ಲಿ ರಿಲೀಸ್‌ ಆಗಿದೆ. ಒಂದು ನಿಮಿಷ ನಾಲ್ಕು ಸೆಕೆಂಡ್‌ಗಳ ಟೀಸರ್‌ನಲ್ಲಿ ಭರ್ಜರಿ ಆಕ್ಷನ್‌ ಸನ್ನಿವೇಶಗಳಿವೆ. ‘Man with a deep past, and now with a crazy present!’ ಎನ್ನುವ ಒಕ್ಕಣಿಯೊಂದಿಗೆ ಗಮನ ಸೆಳೆಯುತ್ತದೆ ಟೀಸರ್‌. ‘Welcome to the world of Devil’ ಎಂದು ನಿರ್ದೇಶಕ ‘ಮಿಲನ’ ಪ್ರಕಾಶ್‌ ‘ಡೆವಿಲ್‌’ ದುನಿಯಾಗೆ ಸಿನಿಪ್ರಿಯರಿಗೆ ಸ್ವಾಗತ ಕೋರಿದ್ದಾರೆ! ದರ್ಶನ್‌ ಅಭಿಮಾನಿಗಳು ಖುಷಿಯಾಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಟೀಸರ್‌ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿರುವ ಚಿತ್ರದ ನಾಯಕಿಯಾಗಿ ರಚನಾ ರೈ ಅಭಿನಯಿಸುತ್ತಿದ್ದಾರೆ. ಟೀಸರ್‌ನೊಂದಿಗೆ ‘ಡೆವಲ್‌’ ಮತ್ತೆ ಸದ್ದು ಮಾಡಿದ್ದು, ಚಿತ್ರದ ಕುರಿತಂತೆ ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.

LEAVE A REPLY

Connect with

Please enter your comment!
Please enter your name here