ಜ್ಯೂನಿಯರ್‌ NTR ಮತ್ತು ಜಾಹ್ನವಿ ಕಪೂರ್‌ ನಟಿಸಿರುವ ‘ದೇವರ’ ಸಿನಿಮಾದ ಎರಡನೇ ಹಾಡು ರಿಲೀಸ್‌ ಆಗಿದೆ. ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜನೆಯ ಹಾಡಿನ ಕನ್ನಡ ವರ್ಷನ್‌ ಕೂಡ ಬಿಡುಗಡೆಯಾಗಿದೆ. ವರದರಾಜ್‌ ಚಿಕ್ಕಬಳ್ಳಾಪುರ ರಚನೆಯ ಈ ಕನ್ನಡ ಹಾಡಿಗೆ ಶಿಲ್ಪಾ ರಾವ್‌ ದನಿಯಾಗಿದ್ದಾರೆ.

ಟಾಲಿವುಡ್‌ನ ಬಹುನಿರೀಕ್ಷಿತ ‘ದೇವರ’ ತೆಲುಗು ಸಿನಿಮಾದ ಎರಡನೇ ಹಾಡು ರಿಲೀಸ್‌ ಆಗಿದೆ. ಕೊರಟಾಲ ಶಿವ ನಿರ್ದೇಶನದ ಚಿತ್ರದ ಮೂಲಕ ಬಾಲಿವುಡ್‌ ತಾರೆ ಜಾಹ್ನವಿ ಕಪೂರ್‌ ದಕ್ಷಿಣ ಭಾರತ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ರೊಮ್ಯಾಂಟಿಕ್‌ ಗೀತೆ ಜ್ಯೂನಿಯರ್‌ NTR ಮತ್ತು ಜಾಹ್ನವಿ ಕಪೂರ್‌ ಅವರ ಮೇಲೆ ಪಿಕ್ಚರೈಸ್‌ ಆಗಿದೆ. ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜನೆಯ ಹಾಡಿಗೆ ಬಾಸ್ಕೋ ಮಾರ್ಟಿಸ್‌ ನೃತ್ಯ ಸಂಯೋಜಿಸಿದ್ದಾರೆ. ಕನ್ನಡ ವರ್ಷನ್‌ನಲ್ಲೂ ಹಾಡು ಬಂದಿದೆ. ವರದರಾಜ ಚಿಕ್ಕಬಳ್ಳಾಪುರ ಕನ್ನಡ ಗೀತೆ ರಚಿಸಿದ್ದು, ಶಿಲ್ಪಾ ರಾವ್‌ ದನಿಯಾಗಿದ್ದಾರೆ.

ಯುವಸುಧಾ ಆರ್ಟ್ಸ್‌ ಬ್ಯಾನರ್‌ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಖಳಪಾತ್ರದಲ್ಲಿ ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ನಟಿಸಿರುವುದು ವಿಶೇಷ. ಈ ಆಕ್ಷನ್‌ – ಥ್ರಿಲ್ಲರ್‌ ಎರಡು ಭಾಗಗಳಲ್ಲಿ ರಿಲೀಸ್‌ ಆಗಲಿದೆ, ಮೊದಲ ಭಾಗ ಸೆಪ್ಟೆಂಬರ್ 27ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗಲಿದೆ. ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಆರ್ ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here