ಪಿ ಸಿ ಶೇಖರ್‌ ನಿರ್ದೇಶನದ ನೂತನ ಸಿನಿಮಾ ‘BAD’ ನಾಯಕಿ ಮಾನ್ವಿತಾ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ತಮ್ಮದೇ ವಿಶಿಷ್ಟ ಮೇಕಿಂಗ್‌ ಶೈಲಿಯಿಂದ ಗುರುತಿಸಿಕೊಂಡಿರುವ ನಿರ್ದೇಶಕ ಪಿ ಸಿ ಶೇಖರ್‌ ಅವರ ಈ ಸಿನಿಮಾದ ನಾಯಕ ನಕುಲ್‌ ಗೌಡ. ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

‘ನನಗೆ BAD ಚಿತ್ರದ ಪಾತ್ರ ಬಹಳ ಇಷ್ಟವಾಯ್ತು. ಪವಿತ್ರ ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರ. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ ಸಿ ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್‌ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ತಮ್ಮ ನೂತನ ಸಿನಿಮಾ, ಪಾತ್ರದ ಬಗ್ಗೆ ಹೇಳುತ್ತಾರೆ ಮಾನ್ವಿತಾ. ಶಿವರಾಜಕುಮಾರ್‌ ಅಭಿನಯದ ‘ಟಗರು’ ಚಿತ್ರದ ಮೂಲಕ ಖ್ಯಾತಿ ಪಡೆದ ನಟಿಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇರಾದೆ. ಪಿ ಸಿ ಶೇಖರ್‌ ಚಿತ್ರದ ಪಾತ್ರದ ಮೂಲಕ ಈ ಅವಕಾಶ ಸಿಕ್ಕಿದೆ ಎನ್ನುತ್ತಾರೆ.

ಮಾನ್ವಿತ ಕಾಮತ್ ಅವರ ಪಾತ್ರದ ಕುರಿತು ಮಾತನಾಡುವ ನಿರ್ದೇಶಕ ಪಿ ಸಿ ಶೇಖರ್, ‘ಈ ಚಿತ್ರದಲ್ಲಿ ಮಾನ್ವಿತ ಅವರ ಪಾತ್ರದ ಹೆಸರು ಪವಿ. ತುಂಬಾ ಬೋಲ್ಡ್ ಕ್ಯಾರೆಕ್ಟರ್. ವಿಲೇಜ್ ಬ್ಯಾಕ್‌ಡ್ರಾಪ್‌ನಲ್ಲಿ ಸ್ಟೋರಿ ಸಾಗುತ್ತಾ ಹೋಗುತ್ತದೆ. ನಾನು ಮುಂಚೆ ತಿಳಿಸಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ‌ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೆ ಇನ್ನೊಂದು ಪಾತ್ರ ಕೂಡ ಇದೆ. ಆ ಪಾತ್ರದಲ್ಲಿ ಮಾನ್ವಿತ ಅಭಿನಯಿಸುತ್ತಿದ್ದಾರೆ’ ಎನ್ನುತ್ತಾರೆ. ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ ಸಿ ಶೇಖರ್ ಸಂಕಲನ, ಶಕ್ತಿ ಶೇಖರ್ ಛಾಯಾಗ್ರಹಣ, ಜಿ ರಾಜಶೇಖರ್‌ ಕಲಾನಿರ್ದೇಶನವಿದೆ. ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ನಾಯಕ ನಕುಲ್‌ ಗೌಡ ಈ ಹಿಂದೆ ‘ಪ್ರೀತಿಯ ರಾಯಭಾರಿ’ ಚಿತ್ರದ ಹೀರೋ ಆಗಿ ಅಭಿನಯಿಸಿದ್ದರು. ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

Previous articleMelbourne ಚಿತ್ರೋತ್ಸವ | ನಾಮಿನೇಟ್‌ ಆದ ರಿಷಭ್‌ ಶೆಟ್ಟಿ, ಅಕ್ಷತಾ ಪಾಂಡವಪುರ
Next article‘ಅಜ್ಮೀರ್‌ 92’ ಟೀಸರ್‌ | ನೈಜ ಘಟನೆ ಆಧರಿಸಿದ ವಿವಾದಿತ ಸಿನಿಮಾ 21ರಂದು ತೆರೆಗೆ

LEAVE A REPLY

Connect with

Please enter your comment!
Please enter your name here