ಧನುಷ್ ಅವರ 50ನೇ ಸಿನಿಮಾಗೆ ‘ರಾಯನ್’ ಶೀರ್ಷಿಕೆ ನಿಗಧಿಯಾಗಿದೆ. ಅವರೇ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದು, ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕಾಳಿದಾಸ್ ಜಯರಾಮ್ ಮತ್ತು ಸಂದೀಪ್ ಕಿಶನ್ ಚಿತ್ರದ ಮತ್ತಿಬ್ಬರು ಪ್ರಮುಖ ಪಾತ್ರಧಾರಿಗಳು.
ಧನುಷ್ ಅವರು ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ‘D50’ ತಮಿಳು ಚಿತ್ರಕ್ಕೆ ‘ರಾಯನ್’ ಶೀರ್ಷಿಕೆ ನಿಗಧಿಯಾಗಿದೆ. ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಹಾಗೂ ಈ ಸಿನಿಮಾಗೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದಲ್ಲಿ ಕಾಳಿದಾಸ್ ಜಯರಾಮ್ ಮತ್ತು ಧನುಷ್ ಅವರ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಸಂದೀಪ್ ಕಿಶನ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಫಸ್ಟ್‌ಲುಕ್ ಪೋಸ್ಟರ್‌ನಲ್ಲಿ ಧನುಷ್ ಫುಡ್ ಟ್ರಕ್‌ಗಳ ಮೇಲೆ ಕುಳಿತಿರುವ ಇಬ್ಬರು ನಟರೊಂದಿಗೆ ಏಪ್ರನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರ ಕೈಗಳಲ್ಲೂ ಆಯುಧಗಳಿವೆ. ಚಿತ್ರಕ್ಕೆ ಓಂ ಪ್ರಕಾಶ್ ಛಾಯಾಗ್ರಹಣ, ಪ್ರಸನ್ನ ಜಿ ಕೆ ಸಂಕಲನವಿದೆ. ಚಿತ್ರದ ಇತರೆ ಪಾತ್ರವರ್ಗದ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸುವುದಾಗಿ ಚಿತ್ರತಂಡ ತಿಳಿಸಿದೆ. Sun Pictures ನಿರ್ಮಿಸಿರುವ ಸಿನಿಮಾ ಈ ವರ್ಷದ ಕೊನೆಯಲ್ಲಿ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.