ಅಪ್ಪ ರಜನೀಕಾಂತ್‌ರಿಗೆ ಫಾಲ್ಕೆ ಗೌರವ, ಪತಿ ಧನುಷ್‌ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ.. ಐಶ್ವರ್ಯಾ ತಮ್ಮ ಡಬಲ್ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ನಿನ್ನೆ ನಡೆದ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ರಜನೀಕಾಂತ್‌ ದಾದಾ ಸಾಹೇಬ್ ಫಾಲ್ಕೆ ಗೌರವ ಪಡೆದರು. ಮತ್ತೊಂದೆಡೆ ‘ಅಸುರನ್‌’ ತಮಿಳು ಚಿತ್ರದ ಉತ್ತಮ ನಟನೆಗೆ ಧನುಷ್ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗೆ ಭಾಜನರಾದರು. ಅಪ್ಪ ಮತ್ತು ಪತಿ ಒಂದೇ ವೇದಿಕೆಯಲ್ಲಿ ದೊಡ್ಡ ಗೌರವ ಪಡೆದ ಸಂಭ್ರಮವನ್ನು ಚಿತ್ರನಿರ್ದೇಶಕಿಯೂ ಆಗಿರುವ ಐಶ್ವರ್ಯಾ ಸೋಷಿಯಲ್ ಮೀಡಿಯಾದಲ್ಲಿ ಖುಷಿಯಿಂದ ಹೇಳಿಕೊಂಡಿದ್ದಾರೆ. ಅಪ್ಪ ಮತ್ತು ಪತಿ ಇಬ್ಬರೂ ಜೊತೆಯಲ್ಲಿ ನಿಂತು ಪದಕಗಳನ್ನು ಹಿಡಿದಿರುವ ಫೋಟೊ ಹಾಕಿ ಸಡಗರಪಟ್ಟಿದ್ದಾರೆ.

“ಅವರಿಬ್ಬರೂ ನನ್ನವರು. ಇದು ನಿಜಕ್ಕೂ ಇತಿಹಾಸ. ಮಗಳಾಗಿ ಮತ್ತು ಪತ್ನಿಯಾಗಿ ಇದು ನನಗೆ ಹೆಮ್ಮೆಯ ಸಂಗತಿ” ಎನ್ನುವ ಸಂದೇಶ ಹಾಕಿದ್ದಾರೆ ಐಶ್ವರ್ಯಾ. ಅವರು ಹೇಳುವಂತೆ ಒಂದೇ ಕುಟುಂಬದ ಇಬ್ಬರು ಪ್ರತಿಷ್ಠಿತ ಪ್ರಶಸ್ತಿ ಪಡೆದದ್ದೂ ಕೂಡ ಇದೇ ಮೊದಲ ಬಾರಿ ಎನ್ನುವುದು ವಿಶೇಷ. ಮಾವ ರಜನೀಕಾಂತ್‌ ಅತ್ಯುನ್ನತ ಗೌರವ ಪಡೆದ ವೇದಿಕೆಯಲ್ಲೇ ಪ್ರಶಸ್ತಿ ಪಡೆದ ಧನುಷ್‌ ಕೂಡ ಎಕ್ಸೈಟ್ ಅಗಿದ್ದಾರೆ. “ತಲೈವಾ ಅವರು ಫಾಲ್ಕೆ ಗೌರವ ಪಡೆದ ವೇದಿಕೆಯಲ್ಲಿ ನಾನು ಕೂಡ ರಾಷ್ಟ್ರಪ್ರಶಸ್ತಿ ಪಡೆದ ಸಂದರ್ಭ ನಿಜಕ್ಕೂ ಅಪರೂಪದ್ದು. ಈ ಗೌರವ ಸಿಕ್ಕ ಸಂದರ್ಭದಲ್ಲಿ ನಾನು ಸಿನಿಮಾರಂಗದ ಎಲ್ಲರನ್ನೂ, ಪ್ರೇಕ್ಷಕರನ್ನೂ, ಮಾದ್ಯಮದ ಮಿತ್ರರೆಲ್ಲರನ್ನೂ ಸ್ಮರಿಸುತ್ತೇನೆ” ಎಂದಿದ್ದಾರೆ ಧನುಷ್‌.

LEAVE A REPLY

Connect with

Please enter your comment!
Please enter your name here