‘ಡಂಕಿ’ ಸಿನಿಮಾದ ಹಾಡಿನಲ್ಲಿ ತಾಪ್ಸಿ, ಶಾರುಖ್‌ರನ್ನು ಎತ್ತಿ ಹಾಕುವ ದೃಶ್ಯವಿದೆ. ಅದೇ ರೀತಿ ‘ಜವಾನ್’ ಸಿನಿಮಾದ ಹಾಡಿನಲ್ಲಿ ದೀಪಿಕಾ ಶಾರುಖ್‌ರನ್ನು ಎತ್ತಿ ಕುಸ್ತಿ ಮಾಡಿದ್ದರು. ಈ ಎರಡು ಸೀನ್ಸ್ ನೋಡಿದ ಶಾರುಖ್‌ ಅಭಿಮಾನಿಗಳು ಕಿಂಗ್ ಖಾನ್ ಕುಸ್ತಿ ಹಿಂದೆ ಬಿದ್ದಿದ್ಯಾಕೆ ಎಂದು ಚರ್ಚೆ ನಡೆಸಿದ್ದಾರೆ!

ರಾಜಕುಮಾರ್‌ ಹಿರಾನಿ ನಿರ್ದೇಶನದ ‘ಡಂಕಿ’, ಈ ವರ್ಷದ ಬಹುನಿರೀಕ್ಷಿತ ಹಿಂದಿ ಸಿನಿಮಾ. ಶಾರುಖ್‌ ಅಭಿನಯದ ಸಿನಿಮಾ ಡಿಸೆಂಬರ್‌ 22ರಂದು ತೆರೆಕಾಣಲಿದೆ. ಮೊದಲ ಟೀಸರ್‌ ರಿಲೀಸ್‌ ಆಗಿ ಸಿನಿಪ್ರಿಯರಿಗೆ ಇಷ್ಟವಾಯ್ತು. ನಂತರ ‘ಡಂಕಿ’ ಡ್ರಾಪ್ 1 ಬಳಿಕ ಬಂದ ‘ಡಂಕಿ’ ಡ್ರಾಪ್ 2 ಅಂದರೆ ‘ಲುಟ್ ಪುಟ್ ಗಯಾ’ ಮೆಲೋಡಿ ಹಾಡು ಗಮನಸೆಳೆಯುತ್ತಿದೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ನಡುವಿನ ಪ್ರೇಮಗೀತೆ ಶಾರುಖ್‌ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೀಗ ಈ ಹಾಡಿನ ಒಂದು ಸೀನ್ ಎಲ್ಲೆಡೆ ವೈರಲ್ ಆಗ್ತಿದ್ದು, ಕಿಂಗ್ ಖಾನ್ ಫ್ಯಾನ್ಸ್ ಟ್ರಾಲ್‌ ಮಾಡುತ್ತಿದ್ದಾರೆ. ‘ಡಂಕಿ’ ಸಿನಿಮಾದ ‘ಲುಟ್ ಪುಟ್ ಗಯಾ’ ಸಾಂಗ್‌ನಲ್ಲಿ ಕುಸ್ತಿ ಸೀನ್‌ ಇದೆ. ಅಖಾಡದಲ್ಲಿ ತಾಪ್ಸಿ, ಶಾರುಖ್‌ರನ್ನು ಎತ್ತಿ ಹಾಕುವ ದೃಶ್ಯವಿದೆ. ಅದೇ ರೀತಿ ‘ಜವಾನ್’ ಸಿನಿಮಾದ ಹಾಡಿನಲ್ಲಿ ದೀಪಿಕಾ ಶಾರುಖ್‌ರನ್ನು ಎತ್ತಿ ಕುಸ್ತಿ ಆಡುತ್ತಾರೆ. ಈ ಎರಡು ಸೀನ್ಸ್ ನೋಡಿದ ಶಾರುಖ್‌ ಅಭಿಮಾನಿಗಳು ಕಿಂಗ್ ಖಾನ್ ಕುಸ್ತಿ ಹಿಂದೆ ಬಿದ್ದಿದ್ಯಾಕೆ ಎಂದು ಚರ್ಚೆ ನಡೆಸಿದ್ದಾರೆ!

ಹಿಂದಿ ಚಿತ್ರರಂಗದಲ್ಲಿ ವಿಶಿಷ್ಟ ಕತೆ, ನಿರೂಪಣೆಯೊಂದಿಗೆ ತಮ್ಮದೇ ಒಂದು ಹಾದಿ ಕಂಡುಕೊಂಡಿರುವ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ. ಅವರ ಬತ್ತಳಿಕೆಯಿಂದ ಬರುತ್ತಿರುವ ಮತ್ತೊಂದು ವಿಶಿಷ್ಟ ಸಿನಿಮಾ ‘ಡಂಕಿ’. ಭಾರತದ ಪಂಜಾಬ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್‌ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ‘ಡಂಕಿ’ಗೆ ಕತೆ ಹೆಣೆದಿದ್ದಾರೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ಸ್‌ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಚಿತ್ರ ನಿರ್ಮಿಸಿದ್ದಾರೆ. ಇದೇ ಡಿಸೆಂಬರ್ 22ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here